ಪೊಲೀಸ್ ಬಲವರ್ಧನೆ ಹೆಚ್ಚು ಅನುದಾನ ಬಿಡುಗಡೆ : ಗೃಹ ಸಚಿವ ಜ್ಞಾನೇಂದ್ರ

Social Share

ಬೆಂಗಳೂರು, ಡಿ.11- ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ, ಜನರ ಆಸ್ತಿ ಪಾಸ್ತಿ ಪ್ರಾಣ ಕಾಪಾಡುವ ಹೊಣೆ ಹೊತ್ತಿರುವ ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಚೈತನ್ಯದಾಯಕ ವಾತಾವರಣ ಸೃಷ್ಟಿ ಮಾಡಿಕೊಡಲು ಸರಕಾರ ಶ್ರಮಿಸುತ್ತದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ರಾಜಭವನದಲ್ಲಿ ಹಮ್ಮಿಕೊಂಡ, ಅತ್ಯುತ್ತಮ ಸೇವೆಗೈದ ಪೊಲೀಸರಿಗೆ ರಾಷ್ಟ್ರಪತಿಯವರ ಪದಕ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿ ಕಳೆದ ನಾಲ್ಕೂವರೆ ವರ್ಷಗಳಲ್ಲಿ ನಮ್ಮ ಸರಕಾರ ಪೊಲೀಸ್ ಇಲಾಖೆಯ ಬಲವರ್ಧನೆಗೆ ಅತ್ಯಂತ ಹೆಚ್ಚು ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಸಚಿವರು, ಪ್ರಸಕ್ತ ವರ್ಷದಲ್ಲಿ ಸುಮಾರು 200 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಒಟ್ಟು 117 ಸುಸಜ್ಜಿತ ಪೊಲೀಸ್ ಠಾಣೆಗಳನ್ನು ನಿರ್ಮಾಣವಾಗುತ್ತಿದೆ ಎಂದರು.

ಕಾಂಗ್ರೆಸ್‍ಗೆ ಕಂಟಕವಾದ AAP ಮತ್ತು AIMIM

ರಾಜ್ಯ ಪೊಲೀಸರಿಗೆ ಅತ್ಯುತ್ತಮ ವಸತಿ ಸೌಲಭ್ಯ ಸೈಬರ್ ಕ್ರೈಂ ವಿಭಾಗದ ಬಲ ಪಡಿಸುವುದು ಸೇರಿದಂತೆ ಅಪರಾಧ ನಿಯಂತ್ರಣಕ್ಕಾಗಿ ಹತ್ತು ಹಲವು ಉಪಕ್ರಮಗಳನ್ನೂ ಸರಕಾರ ಕೈಗೊಂಡಿದೆ ಎಂದು ಸಚಿವರು ತಿಳಿಸಿದರು.

ರಾಷ್ಟ್ರದಲ್ಲಿಯೇ ಕರ್ನಾಟಕ ಪೊಲೀಸ್ ವ್ಯವಸ್ಥೆ ದಕ್ಷತೆ ಹಾಗೂ ನಾಗರಿಕರ ಸೇವೆಗೆ ಅತ್ಯುನ್ನತ ಮನ್ನಣೆ ಹೊಂದಿದೆ ಎಂದೂ ಸಚಿವರು ಪ್ರಶಂಸೆ ಮಾಡಿದರು.

ಶರ್ಮಿಳಾ ಅನಿರ್ದಿಷ್ಟಾವಧಿ ಉಪವಾಸಕ್ಕೆ ಬ್ರೇಕ್ : ಆಸ್ಪತ್ರೆಗೆ ಸ್ಥಳಾಂತರಿಸಿದ ಪೊಲೀಸರು

ರಾಜ್ಯಪಾಲರಾದ ತಾ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರೂ ಮಾತನಾಡಿದರು. ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Home Minister araga jnanendra, police,

Articles You Might Like

Share This Article