ಮಳವಳ್ಳಿ ಬಾಲಕಿ ಅತ್ಯಾಚಾರ ಪ್ರಕರಣ ಕುರಿತು ಗೃಹ ಸಚಿವರ ಪ್ರತಿಕ್ರಿಯೆ

Social Share

ಬೆಂಗಳೂರು,ಅ.14- ಮಳವಳ್ಳಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ವಿಚಾರ ಕುರಿತವಾಗಿ ವರದಿ ತರಿಸಿಕೊಂಡು ಮಾಹಿತಿ ಪಡೆದ ನಂತರ ತಿಳಿಸುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಧರ್ ಎಂಬ ವ್ಯಕ್ತಿ ಮತಾಂತರ ಮಾಡಿದ್ದಾರೆ ಎಂಬ ವಿಚಾರದಲ್ಲಿ ಮತಾಂತರ ಕಾಯ್ದೆ ಪ್ರಕಾರ ಕ್ರಮ ಆಗಿದೆ.

ಹಿಂದು ಯುವಕನನ್ನು ಕರೆದುಕೊಂಡು ಹೋಗಿ ಮಸೀದಿಯಲ್ಲಿ ಮತಾಂತರ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಭಂದಿಸಿದಂತೆ ನಾಲ್ಕೈದು ಜನರನ್ನು ಅರೆಸ್ಟ್ ಸಹ ಮಾಡಿದ್ದಾರೆ. ಇವರಲ್ಲಿ ಒಬ್ಬ ಕಾರ್ಪೊರೇಟ್ ಇದ್ದಾರೆ. ವಿಶೇಷ ಗಮನವಹಿಸಿ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಮತಾಂತರ ನಿಷೇಧ ಕಾಯ್ದೆಯನ್ನು ಇತ್ತೀಚೆಗೆ ತಂದಿದ್ದು, ಅದರ ಪ್ರಕಾರ ಮೊದಲ ಕೇಸ್ ಯಶವಂತಪುರದಲ್ಲಿ ಆಗ್ತಿದೆ. ವರದಿ ತರಿಸಿಕೊಂಡು ನಂತರ ಮಾತನಾಡುತ್ತೇನೆ ಎಂದರು.

ಬೆಳ್ತಂಗಡಿ ಶಾಸಕರಿಗೆ ತಲ್ವಾರ್ ತೋರಿಸಿ ಹಲ್ಲೆಗೆ ಯತ್ನಿಸಿದ ಘಟನೆ ವಿಚಾರವಾಗಿ ಪ್ರತಿಕ್ರಯಿಸಿದ ಅವರು, ಹಲ್ಲೆಗೆ ಯತ್ನ ಮಾಡಿದ್ದಾರೆ. ವಾಹನದ ನಂಬರ್ ಕೂಡ ಸಿಕ್ಕಿದೆ. ಪೊಲೀಸರು ಆರೋಪಿಗಳನ್ನು ಹುಡುಕುತ್ತಿದ್ದಾರೆ ಎಂದು ವಿವರಿಸಿದರು.

Articles You Might Like

Share This Article