ರಾಜ್ಯದಲ್ಲಿ 18.80 ಲಕ್ಷ ವಸತಿ ರಹಿತರು

Social Share

ಬೆಳಗಾವಿ,ಡಿ.28- ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ನಡೆದ ಸಮೀಕ್ಷೆಯ ಪ್ರಕಾರ 18.88,689 ವಸತಿ ರಹಿತರಿದ್ದಾರೆ ಎಂದು ವಸತಿ ಮತ್ತು ಮೂಲಸೌಲಭ್ಯಗಳ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ವಿಧಾನ ಪರಿಷತ್‍ನಲ್ಲಿ ಸದಸ್ಯ ಡಾ.ಡಿ.ತಿಮ್ಮಯ್ಯಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಎರಡು ವರ್ಷಗಳಲ್ಲಿ 4900 ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅದರಲ್ಲಿ ಶೇ.40ರಷ್ಟು ಪರಿಶಿಷ್ಟ ಸಮುದಾಯದ ಫಲಾನುಭವಿಗಳಿದ್ದಾರೆ ಎಂದರು.

ಲಭ್ಯ ಇರುವ ಐದು ಸಾವಿರ ಎಕರೆ ಭೂಮಿಯನ್ನು ನಿವೇಶವನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ. 2018ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 18 ಲಕ್ಷ ನಿರ್ವಸತಿಗರಿದ್ದಾರೆ. ರಾಜೀವ್ ಗಾಂಧಿ ವಸತಿ ನಿಗಮ ಒಂದರಿಂದಲೇ ಎಲ್ಲರಿಗೂ ವಸತಿ ಒದಗಿಸಲು ಸಾಧ್ಯವಿಲ್ಲ. ಜಿಲ್ಲಾ ಪಂಚಾಯತ್ ಸೇರಿ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಕೈ ಜೋಡಿಸಬೇಕು. ಈ ನಿಟ್ಟಿನಲ್ಲಿ ಈಗಾಗಲೇ ಮನವಿ ಸಲ್ಲಿಸಲಾಗಿದೆ ಎಂದರು.

ಸೂರು ಕಲ್ಪಿಸಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕಿದೆ. ಹಲವು ಇಲಾಖೆಗಳು ಇದಕ್ಕೆ ಕೈ ಜೋಡಿಸಬೇಕಿದೆ. ಎಲ್ಲೆಲ್ಲಿ ಸರ್ಕಾರಿ ಜಾಗ ಲಭ್ಯವಿದೆಯೋ ಅದನ್ನು ಗುರುತಿಸಿ ವಸತಿ ಯೋಜನೆಗಳಿಗೆ ಹಂಚಿಕೆ ಮಾಡಬೇಕಿದೆ ಎಂದು ಮನವಿ ಮಾಡಿದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅತ್ಯುತ್ತಮ ಶಾಸಕ ಪ್ರಶಸ್ತಿ

ಹಿಂದಿನ ಸರ್ಕಾರ 15 ಲಕ್ಷ ನಿವೇಶನ ನೀಡಿದೆ ಎಂದು ಸದಸ್ಯರು ಹೇಳಿರುವುದು ತಪ್ಪಿ ಮಾಹಿತಿಯಾಗಿದೆ ಆಗ ಐದು ಲಕ್ಷ ನಿವೇಶನಗಳನ್ನು ಕೊಟ್ಟಿಲ್ಲ. ಒಂದಿಷ್ಟು ಮನೆಗಳನ್ನು ನೀಡಿದ್ದಾರೆ. ನನ್ನ ಹೇಳಿಕೆಯಿಂದ ಹಕ್ಕುಚ್ಯುತಿಯಾಗುತ್ತದೆಯಾದರೂ ಅದನ್ನು ಹೆದರಿಸಲು ನಾನು ಸಿದ್ಧ ಎಂದು ಸಚಿವರು ಸವಾಲು ಹಾಕಿದರು.

ಸದಸ್ಯ ವೈ.ಎಂ.ಸತೀಶ್ ಪ್ರಶ್ನೆಗೆ ಉತ್ತರಿಸಿದ ಸಚಿವ ಸೋಮಣ್ಣ, ಮನೆ ಹಂಚಿಕೆಯಾಗಿ ತಡೆ ಹಿಡಿಯಲ್ಪಟ್ಟಿದ್ದರೆ ಅರ್ಹ ಫಲಾನುಭವಿಗಳಿಗೆ ಮರು ಮಂಜೂರು ಮಾಡಲಾಗುವುದು. ಕೆಲವೆಡೆ ಮನೆ ಮಂಜೂರಾತಿ ಪಡೆದು ನಿರ್ಮಾಣ ಕಾಮಗಾರಿ ಆರಂಭಿಸದಿರುವ ಕಡೆ ತಡೆ ಹಿಡಿಯಲಾಗಿದೆ. ಫಲಾನುಭವಿಗಳು ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದರೆ ಮತ್ತೆ ಮಂಜೂರಾತಿ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಒಂದೇ ವರ್ಷದಲ್ಲಿ 100 ಠಾಣೆಗಳ ಸ್ಥಾಪನೆ : ಬೊಮ್ಮಾಯಿ

homeless, 18.80 lakh, Minister Somanna,

Articles You Might Like

Share This Article