ಹನಿಟ್ರ್ಯಾಪ್‍ಗೆ ಸಿಲುಕಿದ ಹಾಲಿನ ಬೂತ್‍ಮಾಲೀಕ, ಮಾಯಾಂಗನೆ ಅರೆಸ್ಟ್

Social Share

ಬೆಂಗಳೂರು,ನ.6- ರಾಜ್ಯದಲ್ಲಿ ದಿನೇ ದಿನೇ ಹನಿಟ್ರಾಪ್ ಪ್ರಕರಣಗಳ ಸಂಖ್ಯೆ ಹೆಚ್ಚಾ ಗುತ್ತಿದ್ದು, ತಮಿಳುನಾಡು ಮೂಲದ ಯುವಕನೊಬ್ಬನನ್ನು ಯುವತಿ ಯೊಬ್ಬಳ್ಳು ಮೋಹದ ಬಲೆಗೆ ಬೀಳಿಸಿ ಹಣ ಮತ್ತು ಕಾರನ್ನು ಕಿತ್ತುಕೊಂಡಿದ್ದ ಘಟನೆ ಎಸ್.ಜಿ.ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಹೊಸೂರು ಸಮೀಪದ ತೆರು ಪೇಟೆಯ ದಿಲೀಪ್‍ಕುಮಾರ್(32) ಯುವತಿಯ ಮೋಹಕ್ಕೆ ಸಿಲುಕಿ ಕಾರು ಮತ್ತು ನಗದನ್ನು ಕಳೆದುಕೊಂಡಿದ್ದಾರೆ. ದಿಲೀಪ್ ಕುಮಾರ್ ಅವರು ಹೊಸೂರಿನಲ್ಲಿ ಹಾಲಿನ ಬೂತ್‍ವೊಂದನ್ನು ಇಟ್ಟುಕೊಂಡಿದ್ದಾರೆ.

ದಿಲೀಪ್ ನೀಡಿದ ದೂರಿನ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದು, ಅಲಿಯಾ ಅಲಿಯಾಸ್ ಪ್ರಿಯ(22) ಎಂಬ ಯುವತಿಯನ್ನು ಬಂಧಿಸಿದ್ದು, ಉಳಿದ ನಾಲ್ವರು ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.

ಪ್ರಕರಣದ ವಿವರ:
ಅಕ್ಟೋಬರ್ ತಿಂಗಳ ಕೊನೆಯ ವಾರ ಒಂದು ದಿನ ರಾತ್ರಿ ವೇಳೆ ದಿಲೀಪ್‍ಕುಮಾರ್ ಅವರ ಮೊಬೈಲ್‍ಗೆ ಅಪರಿಚಿತ ಸಂಖ್ಯೆಯಿಂದ ಹಾಯ್ ಎಂದು ಮೆಸೇಜ್ ಬಂದಿದೆ. ಮೆಸೆಜ್ ಮಾಡಿದವರ ಹೆಸರು, ವಿಳಾಸ ಕೇಳಿದಾಗ ಆ ಕಡೆಯಿಂದ ತನ್ನನ್ನು ತಾನು ಪ್ರಿಯ ಎಂದು ಪರಿಚಯಿಸಿಕೊಂಡಿದ್ದು, ತಮಿಳುನಾಡು ಮೂಲದವಳು ಎಂದು ವಿಳಾಸ ತಿಳಿಸಿದ್ದಾಳೆ.

ಪ್ರಸ್ತುತ ತಾನು ಬೆಂಗಳೂರಿನ ಬಿಟಿಎಂ ಲೇಔಟ್‍ನಲ್ಲಿ ವಾಸವಿದ್ದು, ಕೆಲಸ ಹುಡುಕುತ್ತಿರುವುದಾಗಿ ಹೇಳಿದ್ದಾಳೆ. ಅ.27ರಂದು ಆಕೆ ಸಲುಗೆಯಿಂದ ಮಾತನಾಡಲು, ಮನೆಯಲ್ಲಿ ಯಾರೂ ಇಲ್ಲ. ಒಬ್ಬಳೇ ಇದ್ದೇನೆ. ಇಬ್ಬರು ಭೇಟಿ ಮಾಡೋಣ ಬಾ ಎಂದು ಕರೆದಿದ್ದಾಳೆ. ಅಂದು ಕೆಲಸ ಇದ್ದುದ್ದರಿಂದ ತಾವು ಹೋಗಲಾಗಲಿಲ್ಲ ಎಂದು ದಿಲೀಪ್ ದೂರಿನಲ್ಲಿ ವಿವರಿಸಿದ್ದಾರೆ.

ಚಂದ್ರಶೇಖರ್ ಸಾವಿನ ಕುರಿತು ಸಮಗ್ರ ತನಿಖೆ : ಸಿಎಂ ಬೊಮ್ಮಾಯಿ

ಮಾರನೆಯದಿನ ಮತ್ತೆ ಮಾತುಕತೆ ಮುಂದುವರೆದಿದ್ದು, ಬೆಳಗ್ಗೆ 9 ಗಂಟೆಗೆ ಯುವತಿ ತನ್ನ ಮನೆಯ ಲೊಕೇಷನ್ ಕಳುಹಿಸಿದ್ದಾಳೆ. ದಿಲೀಪ್ ಅವರು ಮಧ್ಯಾಹ್ನ 12 ಗಂಟೆಗೆ ಹೊಸೂರಿನಿಂದ ಹೊರಟು ಬರುವಾಗ ಯುವತಿ ಪದೇ ಪದೇ ಕರೆ ಮಾಡಿ ಎಲ್ಲಿದ್ದೀಯ, ಎಷ್ಟೊತ್ತಿಗೆ ಬರುತ್ತೀಯ ಎಂದು ವಿಚಾರಿಸಿಕೊಂಡಿದ್ದಾರೆ.

ಇದಕ್ಕೆ ವಿಡಿಯೋ ಕಾಲ್ ಮಾಡಿ ತಾವಿರುವ ಸ್ಥಳವನ್ನು ತೋರಿಸಿದ್ದಾರೆ. ಮಧ್ಯಾಹ್ನ 1.30ರ ಸುಮಾರಿಗೆ ಆಕೆಯ ಮನೆ ತಲುಪಿದ್ದಾರೆ. ಕಾರು ಪಾರ್ಕ್ ಮಾಡಿ ಮನೆಯೊಳಗೆ ಹೋಗುತ್ತಿದ್ದ ಹಾಗೆ ಹೊರಗಿನಿಂದ ನಾಲ್ಕು ಜನ ಅಪರಿಚಿತರು ಒಳನುಗ್ಗಿದ್ದಾರೆ.

ನೀನು ಯಾರೋ? ಏಕೆ ಬಂದಿದ್ದೀಯ, ನಿನ್ನನ್ನು ಕರೆದಿರುವುದು ಯಾರು ಎಂದು ಏರಿದ ಧ್ವನಿಯಲ್ಲಿ ದಬಾಯಿಸಿದ್ದಾರೆ. ಯುವತಿ ಆಹ್ವಾನ ನೀಡಿದ ಬಗ್ಗೆ ದಿಲೀಪ್ ವಿವರಿಸಿದಾಗ ನೀನು ಯಾವ ಕೆಲಸಕ್ಕೆ ಬಂದಿದ್ದೀಯ ಎಂದು ನಮಗೆ ಗೊತ್ತು ನಾಲ್ವರಲ್ಲಿ ಒಬ್ಬ ಜೋರು ದನಿಯಲ್ಲಿ ಧಮ್ಕಿ ಹಾಕಿದ್ದು, ದಿಲೀಪ್ ಅವರ ಜೇಬಿನಲ್ಲಿದ್ದ ಐಫೋನ್, ಕಾರಿನ ಕೀ, 26 ಸಾವಿರ ರೂ.ಗಳನ್ನು ಬಲವಂತವಾಗಿ ಕಸಿದುಕೊಂಡಿದ್ದಾನೆ.

ನಂತರ ಆ ಯುವತಿಯನ್ನು ಅಕ್ಕಪಕ್ಕ ನಿಲ್ಲಿಸಿ ವಿಡಿಯೋ ಮಾಡಿದ್ದಾರೆ. ಒಂದು ಲಕ್ಷ ಹಣ ನೀಡದೆ ಇದ್ದರೆ ಈ ವಿಡಿಯೋವನ್ನು ನಿನ್ನ ಹೆಂಡತಿಗೆ ಕಳುಹಿಸುತ್ತೇವೆ, ಸೋಶಿಯಲ್ ಮೀಡಿಯಾಕ್ಕೆ ಹಾಕಿ ಮರ್ಯಾದೆ ಕಳೆಯುವುದಾಗಿ ಬೆದರಿಸಿದ್ದಾರೆ.

ತಕ್ಷಣವೇ 50 ಸಾವಿರ ರೂ.ಗಳನ್ನು ಕಳುಹಿಸುವಂತೆ ಒತ್ತಡ ಹಾಕಿದಾಗ ದಿಲೀಪ್ ಅವರು ಅಣ್ಣನಿಗೆ ಕರೆ ಮಾಡಿ ತೊಂದರೆಯಲ್ಲಿದ್ದೇನೆ 25 ಸಾವಿರ ಕಳುಹಿಸು ಎಂದು ಹೇಳಿ ಮನವಿ ಮಾಡಿದ್ದು, ಅಣ್ಣನ ಖಾತೆಯಿಂದಲೇ ಗೂಗಲ್ ಪೇ ಮೂಲಕ ಆರೋಪಿಗಳ ಖಾತೆಗೆ ಹಣ ರವಾನೆ ಮಾಡಿಸಿದ್ದಾರೆ.

ಮಾರನೇ ದಿನ ಮತ್ತೆ ಕರೆ ಮಾಡಿ ಆರೋಪಿಗಳು 60 ಸಾವಿರ ರೂ. ನೀಡಿದರೆ ಮಾತ್ರ ನಿಮ್ಮ ಕಾರನ್ನು ವಾಪಸ್ ಕೊಡುವುದಾಗಿ ಬ್ಯಾಂಕ್ ಖಾತೆಯ ವಿವರವನ್ನು ಕಳುಹಿಸಿದ್ದಾರೆ. ಪದೇ ಪದೇ ವಿಡಿಯೋವನ್ನು ಮುಂದಿಟ್ಟುಕೊಂಡು ದಿಲೀಪ್ ಅವರಿಂದ ಹಣ ಕಸಿಯಲು ಪ್ರಯತ್ನಿಸಿದ್ದಾರೆ. ಇದರಿಂದ ಸಂಕಷ್ಟಕ್ಕೊಳಗಾದ ದಿಲೀಪ್ ತನ್ನ ಸ್ನೇಹಿತರು ಮತ್ತು ಅಣ್ಣನೊಂದಿಗೆ ಚರ್ಚೆ ಮಾಡಿ ಅಂತಿಮವಾಗಿ ಪೊಲೀಸರಿಗೆ ದೂರು ನೀಡುವ ನಿರ್ಧಾರ ಮಾಡಿದ್ದಾರೆ.

ದಿಲೀಪ್‍ಕುಮಾರ್ ನೀಡಿದ ದೂರನ್ನು ದಾಖಲಿಸಿಕೊಂಡ ಪೆÇಲೀಸರು ತನಿಖೆ ಕೈಗೊಂಡು ಯುವತಿಯನ್ನು ಬಂಸಿ ಪರಾರಿಯಾಗಿರುವ ಆಕೆಯ ಪ್ರಿಯಕರ ಸೇರಿದಂತೆ ನಾಲ್ವರಿಗಾಗಿ ಶೋಧ ನಡೆಸುತ್ತಿದ್ದಾರೆ.

ಅಮೆರಿಕ ಮತ್ತು ಚೀನಾಗೆ ಓಮಿಕ್ರಾನ್‍ನ ಉಪತಳಿಗಳ ಕಾಟ

ಎಚ್ಚರ: ಅಪರಿಚಿತ ಸಂಖ್ಯೆಯಿಂದ ವಾಟ್ಸಪ್ ಅಥವಾ ಸಾಮಾಜಿಕ ಜಾಲತಾಣ ಖಾತೆಗಳಿಗೆ ಸಂದೇಶಗಳು ಬಂದರೆ ಅದಕ್ಕೆ ಪ್ರತಿಕ್ರಿಯಿಸುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಅಗತ್ಯ. ಒಂದು ವೇಳೆ ಅನುಮಾನಸ್ಪದ ಚಟುವಟಿಕೆಗಳು ಕಂಡುಬಂದರೆ ತಕ್ಷಣವೇ ಆ ಸಂಖ್ಯೆಯನ್ನು ಬ್ಲಾಕ್ ಮಾಡಿ ರಿಪೋರ್ಟ್ ಮಾಡುವ ಮೂಲಕ ತಮ್ಮನ್ನು ತಾವು ರಕ್ಷಿಸಿಕೊಳ್ಳಬಹುದಾಗಿದೆ.

ಇತ್ತೀಚೆಗೆ ಚಿತ್ರದುರ್ಗದ ಶಾಸಕರ ಪೋನ್ ನಂಬರ್‍ಗೂ ಇದೇ ರೀತಿಯ ಸಂದೇಶ ಬಂದು ಹನಿಟ್ರಾಪ್ ಮಾಡುವ ಪ್ರಯತ್ನ ನಡೆದಿತ್ತು. ಆ ಪ್ರಕರಣದ ತನಿಖೆ ನಡೆಯುತ್ತಿದೆ. ನ್ಯಾಯಾಲಯದ ನೌಕರರೊಬ್ಬರನ್ನು ಹನಿಟ್ರಾಪ್ ಮಾಡುವ ಪ್ರಯತ್ನಕ್ಕೆ ಸಂಬಂಧಪಟ್ಟಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಇಬ್ಬರು ಮಹಿಳೆಯರು ಸೇರಿದಂತೆ 10 ಮಂದಿಯನ್ನು ಬಂಧಿಸಿದ್ದಾರೆ.

SC,ST ಸಮುದಾಯದ ಭೂ ಪರಿವರ್ತನೆ ಅಧಿಕಾರ ಜಿಲ್ಲಾಧಿಕಾರಿಗೆ

ಬಹಳಷ್ಟು ಮಂದಿ ಈ ರೀತಿಯ ಸಂಕಷ್ಟಕ್ಕೆ ಸಿಲುಕಿದಾಗ ಮರ್ಯಾದೆಗೆ ಅಂಜಿ ದೂರು ನೀಡದೆ ಉಳಿಯುತ್ತಿದ್ದಾರೆ. ಈ ದೌರ್ಬಲ್ಯವನ್ನು ಬಂಡವಾಳ ಮಾಡಿಕೊಳ್ಳುವ ಆರೋಪಿಗಳು ಹನಿಟ್ರಾಪ್ ನಡೆಸುತ್ತಿದ್ದಾರೆ. ಎಚ್ಚರ… ಎಚ್ಚರ.

Articles You Might Like

Share This Article