3ನೇ ಬಾರಿಗೆ ಸಭಾಪತಿಯಾಗಿ ಹೊಸ ದಾಖಲೆ ಬರೆದ ಹೊರಟ್ಟಿ

Social Share

ಬೆಳಗಾವಿ, ಡಿ.21- ವಿಧಾನ ಪರಿಷತ್ತಿನ ಬಿಜೆಪಿಯ ಹಿರಿಯ ಸದಸ್ಯ ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಅವರು ನಿರೀಕ್ಷೆಯಂತೆ ಮೇಲ್ಮನೆಯ ನೂತನ ಸಭಾಪತಿಯಾಗಿ ಸರ್ವಾನುಮತದಿಂದ ಆಯ್ಕೆಯಾದರು.

ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ವಿಧಾನಪರಿಷತ್ತಿನ ಸದಸ್ಯರಾಗಿರುವ ಬಸವರಾಜ ಹೊರಟ್ಟಿ ಅವರು, 2018ರ ಜೂನ್‍ನಿಂದ ಡಿಸೆಂಬರ್‍ವರೆಗೆ ಮೊದಲ ಬಾರಿಗೆ ಸಭಾಪತಿಯಾಗಿದ್ದರು. ಬಳಿಕ 2021 ಫೆಬ್ರವರಿಯಿಂದ 2022ರ ಮೇ ವರೆಗೆ ಎರಡನೇ ಬಾರಿಗೆ ಸಭಾಪತಿಯಾಗಿ, ಪ್ರಸ್ತುತ ಮೂರನೇ ಬಾರಿಗೆ ರಾಜ್ಯ ವಿಧಾನ ಪರಿಷತ್ತಿನ ಸಭಾಪತಿಯಾಗುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಇಂದು ಬೆಳಿಗ್ಗೆ ವಿಧಾನಪರಿಷತ್ತಿನ ಸದನ ಸಮಾವೇಶಗೊಂಡಾಗ ಹಂಗಾಮಿ ಸಭಾಪತಿ ರಘುನಾಥ್ ಮಲ್ಕಾಪುರೆ ಅವರು ಸಭಾಪತಿ ಸ್ಥಾನದ ಚುನಾವಣೆ ಪ್ರಕ್ರಿಯೆಗೆ ಅವಕಾಶ ನೀಡಿದರು. ಬಿಜೆಪಿಯ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಡಾ.ತೇಜಸ್ವಿನಿಗೌಡ, ಶಾಂತಾರಾಮ್ ಬುಡ್ನ ಸಿದ್ದಿ, ಅ.ದೇವೇಗೌಡ ಅವರು ಬಸವರಾಜ ಹೊರಟ್ಟಿ ಅವರನ್ನು ವಿಧಾನ ಪರಿಷತ್ತಿನ ಸಭಾಪತಿ ಅವರನ್ನಾಗಿ ಚುನಾಯಿಸಬೇಕೆಂದು ಸೂಚಿಸಿದರು.

ಆಡಳಿತ ಪಕ್ಷದ ಸದಸ್ಯರಾದ ಆಯನೂರು ಮಂಜುನಾಥ್, ಎಸ್.ವಿ.ಸಂಕನೂರ ಹಾಗೂ ಪ್ರದೀಪ್ ಶೆಟ್ಟರ್ ಅವರು ಚುನಾವಣೆ ಪ್ರಸ್ತಾವನ್ನು ಅನುಮೋದಿಸಿದರು. ಸಭಾಪತಿ ಪೀಠದಲ್ಲಿದ್ದ ರಘುನಾಥ್ ಮಲ್ಕಾಪುರೆ ಅವರು ಪ್ರಸ್ತಾವನೆಯನ್ನು ಮತಕ್ಕೆ ಹಾಕಿದಾಗ ಧ್ವನಿಮತ ಅಂಗೀಕಾರ ದೊರೆಯಿತು.

ಕರ್ನಾಟಕಕ್ಕೆ ನುಗ್ಗುತ್ತೇವೆ, ನಮಗೆ ಯಾರ ಅನುಮತಿಯೂ ಬೇಕಿಲ್ಲ : ಸಂಜಯ್ ರಾವತ್

ಆಗ ಸಭಾಪತಿ ಅವರು ನೂತನ ಸಭಾಪತಿಯಾಗಿ ಹೊರಟ್ಟಿ ಅವರು ಸರ್ವಾನುಮತ ಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಿಸಿ, ಮುಖ್ಯಮಂತ್ರಿ, ಸಭಾ ನಾಯಕರು ಹಾಗೂ ವಿರೋಪಕ್ಷದ ನಾಯಕರು ಮತ್ತು ಹಿರಿಯರು ಹೊರಟ್ಟಿ ಅವರನ್ನು ಪೀಠದ ಬಳಿಗೆ ಕರೆ ತರಬೇಕೆಂದು ಕೋರಿದರು.

ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಭಾನಾಯಕ ಸಮಾಜಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಎಸ್.ಎಲ್.ಭೋಜೇಗೌಡ ಅವರು ನೂತನ ಸಭಾಪತಿ ಹೊರಟ್ಟಿ ಅವರನ್ನು ಸಭಾಪತಿ ಪೀಠದ ಬಳಿಗೆ ಸತ್ಸಂಪ್ರದಾಯದಂತೆ ಗೌರವ ಪೂರ್ವಕವಾಗಿ ಕರೆತಂದರು.

ಬಳಿಕ, ರಘುನಾಥ್ ಮಲ್ಕಾಪುರೆ ಅವರು ಬಸವರಾಜ ಹೊರಟ್ಟಿ ಅವರನ್ನು ಅಭಿನಂದಿಸಿ ಪೀಠದಲ್ಲಿ ಕೊರುವಂತೆ ಮನವಿ ಮಾಡಿ, ನಿರ್ಗಮಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಭಾನಾಯಕರು, ವಿರೋಧ ಪಕ್ಷದ ನಾಯಕರು ಸೇರಿದಂತೆ ಹಲವು ಸದಸ್ಯರು ಪಕ್ಷಭೇದ ಮರೆತು ನೂತನ ಸಭಾಪತಿಗಳ ಸೇವೆಯನ್ನು ಶ್ಲಾಘಿಸಿದರು.

ಬಾಗಲಕೋಟೆಯ ಮುಧೋಳ ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಜನಿಸಿದ ಬಸವರಾಜ ಹೊರಟ್ಟಿ ಅವರು, ಪದವಿ ಶಿಕ್ಷಣವನ್ನು ಮುಧೋಳದ ಕಾಡಸಿದ್ಧೇಶ್ವರ ಕಾಲೇಜನಲ್ಲಿ ಮುಗಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕ್ಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಪ್ರಬಲ ಭೂಕಂಪ, ಧರೆಗುರುಳಿದ ಮನೆಗಳು

1975ರಿಂದ 1980ರವರೆಗೆ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ಪ್ರೌಢ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಅವರು, 1980ರಲ್ಲಿ ಪ್ರಥಮ ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾದರು. ಆನಂತರ 1980, 1986, 1992, 1998, 2004, 2010, 2016 ಹಾಗೂ 2022ರಲ್ಲಿ ಸತತ ಎಂಟನೇ ಅವಗೆ ಪಶ್ಚಿಮ ಶಿಕ್ಷಕ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ರ್ಪಸಿ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಸತತವಾಗಿ 8ನೇ ಬಾರಿಗೆ ವಿಧಾನ ಪರಿಷತ್ತಿಗೆ ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಆಗಿರುವುದು ರಾಷ್ಟ್ರದ ಇತಿಹಾಸದಲ್ಲಿಯೇ ದಾಖಲೆಯಾಗಿದೆ. 2004ರಲ್ಲಿನ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರದಲ್ಲಿ ಸಚಿವರಾಗಿದರು. ಈ ಅವಯಲ್ಲಿ ವಿಜ್ಞಾನ-ತಂತ್ರಜ್ಞಾನ, ಸಣ್ಣ ಉಳಿತಾಯ ಹಾಗೂ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

2006ರ ಜೆಡಿಎಸ್ ಮತ್ತು ಬಿಜೆಪಿ ಸಮಿಶ್ರ ಸರ್ಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಾಗೂ ಕಾನೂನು ಮತ್ತು ಸಂಸದೀಯ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

Basavaraja Horatti, Council, Chairman, again,

Articles You Might Like

Share This Article