ಬೆಂಗಳೂರು, ಡಿ.26- ನಗರದ ಹೊಟೇಲ್ಗಳಲ್ಲಿ 30ಕ್ಕಿಂತ ಹೆಚ್ಚು ಆಸನಗಳಿದ್ದರೆ ಸ್ಮೋಕಿಂಗ್ ಜೋನ್ ಕಡ್ಡಾಯಕ್ಕೆ ಬಿಬಿಎಂಪಿ ಆದೇಶ ಹೊರಡಿಸಿದೆ. ಬೆಂಗಳೂರಿನ ಎಲ್ಲಾ ಹೊಟೇಲ್ಗಳಿಗೂ ಪಾಲಿಕೆ ನೊಟೀಸ್ ನೀಡಿದ್ದು ಹೊಟೇಲ್ಗಳಲ್ಲಿ 30ಕ್ಕಿಂತ ಹೆಚ್ಚು ಆಸನಗಳ ವ್ಯವಸ್ಥೆಗಳಿದ್ದರೆ ಕಡ್ಡಾಯವಾಗಿ ಸ್ಮೋಕಿಂಗ್ ಜೋನ್ ನಿರ್ಮಾಣ ಮಾಡುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಆದೇಶದಲ್ಲೇನಿದೆ: ಸಿಒಟಿಪಿಎ 2003ರ ಅಡಿಯಲ್ಲಿ ಪ್ರತ್ಯೇಕ ಸ್ಮೋಕಿಂಗ್ ಜೋನ್ ಮಾಡುವುದು ಕಡ್ಡಾಯ ಬಾರು, ರೆಸ್ಟೋರೆಂಟ್ ಕಾಫಿ ಡೇ ಗಳಲ್ಲೂ ಜೋನ್ ನಿರ್ಮಾಣ ಮಾಡಬೇಕು. ನಿಗದಿತ ಧೂಮಪಾನ ಪ್ರದೇಶ ಮೀಸಲಿಡುವುದು ಕಾನೂನುಗಳಲ್ಲಿ ಕಡ್ಡಾಯವಾಗಿದೆ.
ಶ್ರದ್ಧಾ ಹತ್ಯೆ ಬಳಿಕ ಹೆದರಿ ತುನಿಶಾಳಿಂದ ದೂರವಾಗಿದ್ದೆ : ಆರೋಪಿ ಹೇಳಿಕೆ
ಧೂಮಪಾನ ಪ್ರದೇಶ ಮೀಸಲಿಡದೇ ಉದ್ಯಮ ನಡೆಸಿದರೆ ಕಾನೂನು ಉಲ್ಲಂಘನೆಯಾಗಲಿದೆ. ಕೂಡಲೇ ಜೋನ್ಗಳನ್ನು ನಿರ್ಮಿಸಬೇಕು. ಇಲ್ಲದಿದ್ದರೆ ಪರಾವಾನಗಿಯನ್ನು ರದ್ದು ಮಾಡಲಾಗುವುದು. ಹೊಟೇಲ್ಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆಕ್ರೋಶ : ಬಿಬಿಎಂಪಿಯ ಹೊಸ ಆದೇಶ ಬೆಂಗಳೂರು ಹೊಟೇಲ್ ಮಾಲೀಕರಿಗೆ ಸಂಕಷ್ಟ ತಂದಿದೆ. ಇದು ಅವೈಜ್ಞಾನಿಕ ಆದೇಶವಾಗಿದೆ ಎಂದು ಮಾಲೀಕರು ಆಕ್ರೋಶ ಹೊರ ಹಾಕಿದ್ದಾರೆ. ಕೂಡಲೇ ಆದೇಶವನ್ನು ಹಿಂಪಡೆಯುವಂತೆ ಮಾಲೀಕರು ಆಗ್ರಹಿಸಿದ್ದಾರೆ.
ಶಾಲಾ ಮೈದಾನದಲ್ಲೇ ಇಬ್ಬರು ಯುವಕರ ಭೀಕರ ಕೊಲೆ..
ಧೂಮಪಾನ ಪ್ರದೇಶ ನಿರ್ಮಾಣ ಮಾಡಿದರೆ ಮಕ್ಕಳು, ಮಹಿಳೆಯರು ಹೊಟೇಲ್ಗೆ ಬರುವುದಿಲ್ಲ. ಇದರಿಂದ ನಮಗೆ ಭಾರಿ ಆರ್ಥಿಕ ಹೊಡೆತ ಬೀಳಲಿದೆ. ಶೀಘ್ರವೇ ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದಾರೆ. ನೂತನ ಆದೇಶವನ್ನು ಹಿಂಪಡೆಯುವಂತೆ ಶೀಘ್ರವೇ ಹೊಟೇಲ್ ಮಾಲೀಕರ ಸಂಘ ಬಿಬಿಎಂಪಿ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಿದೆ.
hotels, smoking zone, BBMP, orders,