ಹಾಸನ: ಲಕ್ಷಾಂತರ ರೂ ಹಣ ವೆಚ್ಚ ಮಾಡಿ ನಿರ್ಮಿಸಿದ ಮನೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ತಡೆಯಾದ ಹಿನ್ನೆಲೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ಇಡೀ ಕಟ್ಟಡವನ್ನು ಪಕ್ಕಕ್ಕೆ ಸೇರಿಸುವಂತಹ ವಿನೂತನ ಪ್ರಯೋಗ ತಾಲೂಕಿನ ಬೋವಿ ಕಾಲೋನಿಯಲ್ಲಿ ನಡೆದಿದೆ.
ಅರಸೀಕೆರೆ ತಾಲ್ಲೂಕು ಕಸಬಾ ಹೋಬಳಿ ಬೋವಿ ಕಾಲೋನಿಯಲ್ಲಿ ಸಮೀಪ ರಾಷ್ಟ್ರೀಯ ಹೆದ್ದಾರಿ ಅಡ್ಡಲಾಗಿ ಈ ಮನೆ ನಿರ್ಮಾಣ ಮಾಡಲಾಗಿತ್ತು .ಈ ಕಟ್ಟಡವು ಮನು ಹಾಗೂ ಹರ್ಷ ಎಂಬುವರಿಗೆ ಸೇರಿದ್ದಾಗಿದ್ದು ಹೆದ್ದಾರಿಗೆ ಅಡ್ಡಲಾಗಿ ಇರುವುದರಿಂದ ತಮ್ಮ ಕಟ್ಟಡವನ್ನು ಉಳಿಸಿಕೊಳ್ಳಲು ಇಬ್ಬರು ಸಹೋದರರು ಬಿಹಾರ ಮೂಲದ ತಂತ್ರಜ್ಞರು, ಕಾರ್ಮಿಕರ ಸಹಾಯದಿಂದ ಹೈಡ್ರೌಲಿಕ್ ಜಾಕ್ ತಂತ್ರಜ್ಞಾನವನ್ನು ಬಳಸಿ ಕಟ್ಟಡಕ್ಕೆ ಯಾವುದೇ ಹಾನಿಯಾಗದಂತೆ ತಮ್ಮ ಪಕ್ಕದ ಜಾಗಕ್ಕೆ ಸರಿಸುತ್ತಿದ್ದಾರೆ.
ಸುಮಾರು 15 ದಿನಗಳಿಂದ ಈ ಕಾರ್ಯಾಚರಣೆ ನಡೆಯುತ್ತಿದಗದು ಪಕ್ಕದ ಜಾಗದಲ್ಲಿ ಹೊಸದಾಗಿ ನಿರ್ಮಿಸಿಸಿರುವ ಅಡಿಪಾಯಕ್ಕೆ ಸರಿಸುವ ಕಾರ್ಯ ಪ್ರಗತಿಯಲ್ಲಿದೆ. ಸುಮಾರು 30 *40 ವಿಸ್ತರಣೆಯ ಕಟ್ಟಡ ಸ್ಥಳಾಂತರ ಮಾಡಲಾಗುತ್ತಿದೆ. ಈ ಕಾರ್ಯಾಚರಣೆಗೆ ಸುಮಾರು ಏಳರಿಂದ ಎಂಟು ಲಕ್ಷ ವೆಚ್ಚವಾಗಲಿದೆ ಎಂದು ಮನೆ ಮಾಲೀಕರು ತಿಳಿಸಿದ್ದಾರೆ.
ಈ ತಂತ್ರಜ್ಞಾನ ಬಳಕೆಯಿಂದ ಲಕ್ಷಾಂತರ ರು ವ್ಯಯಮಾಡಿ ಕಟ್ಟಿದಂತಹ ಕಟ್ಟಡ ನೆಲಸಮವಾಗುವುದು ತಪ್ಪುತ್ತದೆ ಹಾಗೂ ಕಷ್ಟಪಟ್ಟು ದುಡಿದು ಕಟ್ಟಿದಂತಹ ಕಟ್ಟಡ ಯಾವುದೇ ತೊಡಕಿಲ್ಲದೆ ಪಕ್ಕದ ಸ್ಥಳಾಂತರಗೊಳ್ಳುವುದರೊಂದಿಗೆ ಮೂಲ ವಿನ್ಯಾಸದಲ್ಲಿ ಉಳಿಯಲಿದೆ.
ಹೆದ್ದಾರಿ ಹಾಗೂ ಇನ್ನಿತರ ಸರ್ಕಾರಿ ಕಾಮಗಾರಿ ನಡೆಯುವ ವೇಳೆ ಅಡ್ಡಲಾಗಿ ನಿರ್ಮಿಸಿರುವ ಸಾರ್ವಜನಿಕರ ಕಟ್ಟಡ ಈ ತಂತ್ರಜ್ಞಾನ ಮೂಲಕ ಪಕ್ಕಕ್ಕೆ ಸರಿಸ ಬಹುದಾಗಿದ್ದು ಇದರಿಂದ ಲಕ್ಷಾಂತರ ರೂಗಳ ವೆಚ್ಚ ಮಾಡಿದ ಕಟ್ಟಡವು ಒಂದಿಷ್ಟು ಹಣ ಖರ್ಚು ಮಾಡುವುದರೊಂದಿಗೆ ಉಳಿಸಿಕೊಳ್ಳಬಹುದಾಗಿದೆ .
