ಬೆಂಗಳೂರು, ಡಿ.13- ಮನೆಗಳ್ಳತನ ಮಾಡಲು ಬಂದಿದ್ದ ಕಳ್ಳ ಮನೆ ಮಾಲೀಕ ಬಂದೂಕಿನಿಂದ ಹಾರಿಸಿದ ಗುಂಡಿನಿಂದ ಗಾಯಗೊಂಡಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಆರೋಪಿ ಲಕ್ಷ್ಮಣ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಾಚೇನಹಳ್ಳಿಯ ನಿವಾಸಿ ವೆಂಕಟೇಶ್ ಎಂಬುವವರ ಮನೆಗೆ ಮುಂಜಾನೆ 2 ಗಂಟೆ ಸುಮಾರಿನಲ್ಲಿ
ಕಳ್ಳತನ ಮಾಡಲು ಆರೋಪಿ ಲಕ್ಷ್ಮಣ ಬಂದಿದ್ದಾನೆ. ಶಬ್ಧದಿಂದ ಎಚ್ಚರಗೊಂಡ ವೆಂಕಟೇಶ್ ಅವರು ಮನೆಗೆ ಕಳ್ಳ ನುಗ್ಗಿದ್ದಾನೆಂದು ತಿಳಿದು, ತಕ್ಷಣ ತಮ್ಮ ಡಬಲ್ ಬ್ಯಾರೆಲ್ ಗನ್ ತೆಗೆದುಕೊಂಡು ಒಂದು ಸುತ್ತು ಗುಂಡು ಹಾರಿಸಿದಾಗ ಆ ಗುಂಡು ಕಳ್ಳನ ಕಾಲಿಗೆ ತಗುಲಿ ಕುಸಿದುಬಿದ್ದಿದ್ದಾನೆ.
ಚುನಾವಣೆ ಎದುರಿಸಲು ರಾಜ್ಯ ಬಿಜೆಪಿಯಲ್ಲಿ ವರ್ಚಸ್ವಿ ನಾಯಕನ ಕೊರತೆ
ತಕ್ಷಣ ವೆಂಕಟೇಶ್ ಅವರು ಸಮೀಪ ಹೋಗಿ ನೋಡಿ ಗಾಯಗೊಂಡಿದ್ದ ಕಳ್ಳನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಮನೆ ಮಾಲೀಕ ವೆಂಕಟೇಶ್ ಅವರಿಂದ ಘಟನೆ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
ಮಹದಾಯಿ ಯೋಜನೆಗೆ ಅನುಮೋದನೆ ಸಿಗುವುದಾಗಿ ಕಾರಜೋಳ ವಿಶ್ವಾಸ
house owner, shot, thief, Bengaluru,