ಬೆಂಗಳೂರು, ಮೇ 28- ಮಧ್ಯರಾತ್ರಿ ಆಟೋ ಚಾಲಕರೊಬ್ಬರ ಮನೆಗೆ ನುಗ್ಗಿ ಬೆದರಿಸಿ ಹಲ್ಲೆ ಮಾಡಿ ಚಿನ್ನಾಭರಣ, ನಗದು ದರೋಡೆ ಮಾಡಿಕೊಂಡು ಪರಾರಿಯಾಗಿದ್ದ ಏಳು ಮಂದಿ ದರೋಡೆಕೋರರಲ್ಲಿ ಮೂವರನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ಸಣ್ಣಕ್ಕಿ ಬೈಲು ನಿವಾಸಿ ಪ್ರೀತಂ ಅಲಿಯಾಸ್ ಅಪ್ಪು(21), ರಂಜಿತ್(22) ಹಾಗೂ ವಿನಯ್ ಕುಮಾರ್(19) ಎಂಬುವರನ್ನು ಬಂಧಿಸಲಾಗಿದ್ದು, ಇದರಲ್ಲಿ ಪ್ರಮುಖ ಆರೋಪಿಯಾದ ಪ್ರವೀಣ್, ಅಲ್ತಾಫ್ ಭರತ್, ಮನೋಜ್ ಅಲಿಯಾಸ್ ಜರಿ ಎಂಬುವರು ತಲೆಮರೆಸಿಕೊಂಡಿದ್ದಾರೆ.
ಖಾಲಿ ಇರುವ ಹುದ್ದೆಗಳಿಗೆ ಪಾರದರ್ಶಕವಾಗಿ ನೇಮಕ : ಡಿಸಿಎಂ
ಕಳೆದ ಮೇ 26ರಂದು ರಾತ್ರಿ 1 ಗಂಟೆ ಸಂದರ್ಭದಲ್ಲಿ ಕಾಮಾಕ್ಷಿಪಾಳ್ಯದ ನಿವಾಸಿ ಆಟೋ ಚಾಲಕ ನಾಗೇಶ್ ಎಂಬುವರ ಮನೆಗೆ ನುಗ್ಗಿದ ದರೋಡೆಕೋರರು ಕಲ್ಲಿನಿಂದ ಹಲ್ಲೆ ಮಾಡಿ ಕುತ್ತಿಗೆಗೆ ಡ್ರ್ಯಾಗನ್ ಇಟ್ಟು ಬೆದರಿಸಿ ಅವರ ಬಳಿ ಇದ್ದ ಎರಡು ಮೊಬೈಲ್ ಫೋನ್, 30 ಗ್ರಾಂ ಚಿನ್ನಾಭರಣ, 35 ಸಾವಿರ ನಗದನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಾಗಿತ್ತು. ಇನ್ಸ್‍ಪೆಕ್ಟರ್ ಲೋಹಿತ್ ಅವರ ನೇತೃತ್ವದಲ್ಲಿ ಪಿಎಸ್‍ಐ ಮೂರ್ತಿ, ಧರ್ಮರಾಜ್, ಎಎಸ್‍ಐ ಶ್ರೀನಿವಾಸ್ ಅವರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
houserobbery, #Threearrested, #Bengaluru, #Police,