ದುಷ್ಕರ್ಮಿಗಳಿಂದ ಮನೆ, ದೇವಾಲಯ ಧ್ವಂಸ

Social Share

ನೆಲಮಂಗಲ, ನ.13- ಸ್ವಂತ ಜಾಗದಲ್ಲಿ ಮನೆ ಕಟ್ಟಿಕೊಂಡಿದ್ದ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿ ಏಕಾಏಕಿ ಮನೆಯಿಂದ ಹೊರಹಾಕಿ ಮನೆ ಹಾಗೂ ಪಕ್ಕದಲ್ಲಿದ್ದ ದೇವಾಲಯವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಮಾರನಹಳ್ಳಿಯಲ್ಲಿ ನಡೆದಿದೆ.

ಮನೆ ಖಾಲಿ ಮಾಡುವಂತೆ ಲಾಂಗು, ಮಚ್ಚುಗಳಿಂದ ಬೆದರಿಸಿದ ಕೆಲ ದುಷ್ಕರ್ಮಿಗಳು ಜೆಸಿಬಿಗಳ ಮೂಲಕ ಮನೆ ಮತ್ತು ದೇಗುಲವನ್ನು ಕೆಡವಿದ್ದಾರೆ. ಸುಮಾರು 25ಕ್ಕೂ ಹೆಚ್ಚು ದುಷ್ಕರ್ಮಿಗಳು ಮನೆಗೆ ನುಗ್ಗಿ ದಾಂಧಲೆ ಮಾಡಿ ಮನೆಯನ್ನು ಧ್ವಂಸ ಮಾಡುತ್ತಿದ್ದಾಗ ಆಟೋ, ಕಾರು ಹಾಗೂ ಜೆಸಿಬಿಗಳ ಮೇಲೆ ಗ್ರಾಮಸ್ಥರು ಕಲ್ಲು ತೂರಿ 8 ಮಂದಿ ಕಿಡಿಗೇಡಿಗಳನ್ನು ಹಿಡಿದು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.

ವಿಶೇಷ ಬಸ್‍ನಲ್ಲಿ ಕೋಲಾರಕ್ಕೆ ಬಂದ ಸಿದ್ದರಾಮಯ್ಯ

ಪ್ರಕರಣದ ಹಿನ್ನೆಲೆ: ಎಸ್.ಲಕ್ಷ್ಮೀನಾರಾಯಣ ಮತ್ತು ಕುಟುಂಬ ಹಲವು ವರ್ಷಗಳಿಂದ ನೆಲಮಂಗಲದ ಚಿಕ್ಕಮಾರನಹಳ್ಳಿ ಗ್ರಾಮದ ಸರ್ವೆ ನಂ.128/4ರ 33 ಗುಂಟೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದರು.

2018ರಲ್ಲಿ ಇದೇ ಗ್ರಾಮದ ನಿವಾಸಿ ಹಾಗೂ ಸಂಘಟನೆಯೊಂದರ ರಾಜ್ಯಾಧ್ಯಕ್ಷರಿಗೆ 33 ಗುಂಟೆ ಪೈಕೆ 10 ಗುಂಟೆ ಜಾಗವನ್ನು 19 ಲಕ್ಷಕ್ಕೆ ಈ ಜಮೀನನ್ನು ವ್ಯಾಪಾರ ಮಾಡಿ 50 ಸಾವಿರ ಹಣ ಮುಂಗಡ ಹಣ ನೀಡಿದ್ದು, ಬಾಕಿ ಹಣ ನೀಡಿರಲಿಲ್ಲವಂತೆ. ಇವರು ಬಾಕಿ ಹಣ ಕೇಳಲು ಹೋದರೆ ಧಮ್ಕಿ ಹಾಕುತ್ತಿದ್ದರು ಎಂದು ಹೇಳಲಾಗುತ್ತಿದೆ.

ಕಳೆದ ಎರಡು ದಿನಗಳ ಹಿಂದೆ ಏಕಾಏಕಿ ಮಧ್ಯರಾತ್ರಿ ದುಷ್ಕರ್ಮಿಗಳು ಆಗಮಿಸಿ ಮನೆಯನ್ನು ಧ್ವಂಸಗೊಳಿಸಿ ಬೀದಿ ಪಾಲು ಮಾಡಿದ್ದಾರೆ ಎಂದು ಮನೆ ಮಾಲೀಕ ಆರೋಪಿಸಿದ್ದಾರೆ.

ಕುಟುಂಬ ಬೀದಿ ಪಾಲು: ರಾತ್ರಿ ಮನೆ ಬಾಗಿಲು ಬಡಿದು, ಇಬ್ಬರಿಗೆ ಅಪಘಾತವಾಗಿದೆ ನೀರು ಕೊಡಿ ಎಂದು ಕೇಳಿದ್ದು, ನೀರು ತರಲು ಒಳಗೆ ಹೋಗುತ್ತಿದ್ದಂತೆ ಮಗುವಿನ ಕುತ್ತಿಗೆಗೆ ಮಾರಕಾಸ್ತ್ರ ಇಟ್ಟು ಬೆದರಿಕೆ ಹಾಕಿದ್ದಾರೆ.

ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಮತ್ತೊಬ್ಬ ಆರೋಪಿ ಬಂಧನ

ಬಳಿಕ ಮನೆಯಿಂದ ಹೊರಹಾಕಿ ಎರಡು ಜೆಸಿಬಿಗಳಿಂದ ಮನೆ ಸೇರಿದಂತೆ ಪಕ್ಕದಲ್ಲಿದ್ದ ದೇಗುಲವನ್ನು ಧ್ವಂಸಗೊಳಿಸಿದ್ದಾರೆ. ಈ ವೇಳೆ, ಗ್ರಾಮಸ್ಥರು ಜೆಸಿಬಿಯನ್ನು ಅಡ್ಡಗಟ್ಟಿ, ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ನೆಲಮಂಗಲ ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ರಕರಣ ಸಂಬಂಧ ಆಟೋ ರಿಕ್ಷಾ, ಎರಡು ಜೆಸಿಬಿ, ಮಾರಕಾಸ್ತ್ರಗಳು ಸೇರಿದಂತೆ 8 ಆರೋಪಿಗಳನ್ನು ಪೆÇಲೀಸರು ವಶಕ್ಕೆ ಪಡೆದು ತನಿಖೆ ನಡೆಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆದರೆ, ಪ್ರಮುಖ ಆರೋಪಿಯಾಗಿರುವ ಸಂಘಟನೆ ರಾಜ್ಯಾಧ್ಯಕ್ಷನನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ದೂರುದಾರ ಬೇಸರ ವ್ಯಕ್ತಪಡಿಸಿದ್ದಾರೆ.

Articles You Might Like

Share This Article