ಸಂಸತ್ ಉಭಯ ಸದನಗಳಲ್ಲಿ ಮುಂದುವರೆದ ಗದ್ದಲ : ಮತ್ತೆ ಕಲಾಪ ಮುಂದೂಡಿಕೆ

Social Share

ನವದೆಹಲಿ,ಮಾ.17- ಬಜೆಟ್ ಅಧಿವೇಶನದ ಮುಂದುವರೆದ ಕಲಾಪದಲ್ಲಿ ಸತತ ಐದನೇ ದಿನವೂ ಯಾವುದೇ ಕಲಾಪ ನಡೆಯದೆ ಅಮೂಲ್ಯ ಸಮಯ ವ್ಯರ್ಥವಾಗಿದೆ. ಇಂದು ಕೂಡ ಉಭಯ ಸದನಗಳಲ್ಲಿ ಗದ್ದಲ ಮುಂದುವರೆದಿದ್ದರಿಂದ ದಿನದ ಕಲಾಪ ಮೊಟಕುಗೊಂಡಿದೆ.

ಬ್ರಿಟನ್‍ನಲ್ಲಿ ರಾಹುಲ್‍ಗಾಂಧಿ ಉಪನ್ಯಾಸ ನೀಡುವಾಗ ಭಾರತದಲ್ಲಿ ಪ್ರಜಾಪ್ರಭುತ್ವ ಆಕ್ರಮಣಕ್ಕೆ ಒಳಗಾಗಿದೆ. ಸ್ವಯತ್ತ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಸರ್ಕಾರ ಪ್ರತಿಪಕ್ಷಗಳನ್ನು ಹತ್ತಿಕ್ಕುತ್ತಿದೆ.

ಸಂಸತ್‍ನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ಮಾಧ್ಯಮಗಳು ಪ್ರತಿಪಕ್ಷಗಳ ಮಾತುಗಳನ್ನು ವರದಿ ಮಾಡದಂತೆ ಒತ್ತಡ ಹೇರಲಾಗುತ್ತಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ತಮ್ಮ ವಿರುದ್ಧ ಮಾತನಾಡಿದವರನ್ನು ಬೆದರಿಸಲು ಬಳಸಿಕೊಳ್ಳಲಾಗುತ್ತಿದೆ ಎಂದು ದೂರಿದ್ದರು.

ರಾಹುಲ್‍ಗಾಂಧಿ ಹೇಳಿಕೆಯಿಂದ ಭಾರತಕ್ಕೆ ಅಪಮಾನವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಗದ್ದಲ ನಡೆಸಿದೆ. ಮುಂದಿನ ಸಾಲಿನ ಸಚಿವರು, ಬಿಜೆಪಿ ಮತ್ತು ಅದರ ಮಿತ್ರಕೂಟದ ಸಂಸದರು ರಾಹುಲ್‍ಗಾಂಧಿ ತಮ್ಮ ಹೇಳಿಕೆಗಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

ಮಹಿಳೆಯ ಹೃದಯ ಬಗೆದು ಬೇಯಿಸಿ ತಿಂದಿದ್ದ ನರಭಕ್ಷಕನಿಗೆ ಜಿವಾವಧಿ ಶಿಕ್ಷೆ

ಕಳೆದ ಐದು ದಿನದಿಂದಲೂ ಇದೇ ವಿಷಯಕ್ಕಾಗಿ ಗದ್ದಲ-ಕೋಲಾಹಲ ನಡೆಯುತ್ತಲೇ ಇದೆ. ಮೊನ್ನೆ ಇಂಗ್ಲೆಂಡ್‍ನಿಂದ ಭಾರತಕ್ಕೆ ಮರಳಿದ ರಾಹುಲ್‍ಗಾಂಧಿ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಲೋಕಸಭೆಯಲ್ಲಿ ನನ್ನ ಹೇಳಿಕೆ ಕುರಿತು ಮಾತನಾಡುತ್ತೇನೆ ಎಂದು ಹೇಳಿದ್ದರು.

ಇಂದು ಬೆಳಗ್ಗೆ ಲೋಕಸಭೆಯ ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಸಭಾಧ್ಯಕ್ಷರ ಮುಂದಿನ ಬಾವಿಗೀಳಿದು ಧರಣಿ ನಡೆಸುವ ಮೂಲಕ ಸಂಸತ್‍ನಲ್ಲಿ ರಾಹುಲ್‍ಗಾಂಧಿಗೆ ಮತನಾಡಲು ಅವಕಾಶ ನೀಡಬೇಕು ಮತ್ತು ಅದಾನಿ ಗುಂಪಿನ ಷೇರು ಮೌಲ್ಯ ಹೆಚ್ಚಳದ ಹಗರಣವನ್ನು ಜಂಟಿ ಸದನ ಸಮಿತಿಯ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಇದೇ ಸಮಯಕ್ಕೆ ಆಡಳಿತ ಪಕ್ಷ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳ ಸಂಸದರು ಪ್ರತಿಘೋಷಣೆಗಳನ್ನು ಕೂಗಿ ಗದ್ದಲ ಎಬ್ಬಿಸಿದರು. ಸುಮಾರು 20 ನಿಮಿಷ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ಗದ್ದಲದಿಂದಾಗಿ ಕಲಾಪ ಸಂಪೂರ್ಣ ಅಸ್ತವ್ಯಸ್ಥವಾಗಿತ್ತು.

ಅಲೂಗಡ್ಡೆ ಕೋಲ್ಡ್ ಸ್ಟೋರೇಜ್ ಮೇಲ್ಛಾವಣಿ ಕುಸಿದು 8 ಮಂದಿ ಸಾವು

ಲೋಕಸಭಾಧ್ಯಕ್ಷ ಓಂ ಬಿರ್ಲಾ, ಗೌರವಾನ್ವಿತ ಸದಸ್ಯರೇ ಸದನ ಸುಗಮವಾಗಿ ನಡೆಸಲು ಅವಕಾಶ ನೀಡಿ. ಗದ್ದಲ ಮಾಡಲು ಜನ ನಿಮ್ಮನ್ನು ಇಲ್ಲಿಗೆ ಕಳುಹಿಸಿಲ್ಲ. ನಾನು ಎಲ್ಲಿರಿಗೂ ಮಾತನಾಡಲು ಅವಕಾಶ ನೀಡುತ್ತೇನೆ. ಆದರೆ ಅದಕ್ಕೂ ಮೊದಲು ಸದನ ಕ್ರಮಬದ್ಧವಾಗಿರಬೇಕು ಎಂದು ಮನವಿ ಮಾಡಿದರು. ಅವರ ಮನವಿಗೆ ಸಂಸದರು ಸ್ಪಂದಿಸಲಿಲ್ಲ. ಹೀಗಾಗಿ ಗದ್ದಲ ಮುಂದುವರೆಯಿತು.

ಈ ವೇಳೆ ಕಲಾಪದಲ್ಲಿ ವಿವಾದಿತ ಹೇಳಿಕೆ ನೀಡಿದ ರಾಹುಲ್‍ಗಾಂ, ಯುಪಿಎ ಅಧ್ಯಕ್ಷ ಸೋನಿಯಾ ಗಾಂಧಿ, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಜರಿದ್ದರು. ಅತ್ತ ರಾಜ್ಯಸಭೆಯಲ್ಲೂ ಗದ್ದಲ ನಡೆದಿದೆ. ಪ್ರತಿಪಕ್ಷಗಳು ಅದಾನಿ ಸಮೂಹದ ಹಗರಣವನ್ನು ಜಂಟಿ ಸದನ ಸಮಿತಿ ತನಿಖೆಗೆ ಒಪ್ಪಿಸುವಂತೆ ಒತ್ತಾಯಿಸಿದರೆ, ಆಡಳಿತ ಪಕ್ಷದ ಸದಸ್ಯರು ಭಾರತದ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಿದ ರಾಹುಲ್‍ಗಾಂಧಿ ಅವರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ಕಲಾಪ ಆರಂಭವಾಗುತ್ತಿದ್ದಂತೆ ಕೆಲ ಕಾಗದ ಪತ್ರಗಳ ಮಂಡನೆಯಾಯಿತು. ನಿಯಮ 267ರ ಪ್ರಕಾರ ನಿಲುವಳಿ ಸೂಚನೆಯಡಿ ಚರ್ಚೆಗೆ ಇಂದು 11 ನೋಟಿಸ್‍ಗಳನ್ನು ನೀಡಲಾಗಿದೆ. ಅವೆಲ್ಲವನ್ನೂ ತಿರಸ್ಕರಿಸುತ್ತಿರುವುದಾಗಿ ಸಭಾಪತಿ ಜಗದೀಶ್ ಧನ್ಕರ್ ಹೇಳಿದರು.

ನಾನು ಸೂಚನಾ ಪತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಆದರೆ ಅವುಗಳು ಸ್ವೀಕಾರ್ಹವಲ್ಲ ಎಂದು ಕಂಡುಕೊಂಡಿದ್ದೇನೆ ಎಂದು ಸಭಾಪತಿ ಹೇಳಿದರು.

ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಈ ಸಂದರ್ಭದಲ್ಲಿ ಮಾತನಾಡಲು ಎದ್ದು ನಿಂತರಾದರೂ ಅವಕಾಶ ಸಿಗಲಿಲ್ಲ. ಇದರಿಂದಾಗಿ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿದರು. ಆಡಳಿತ ಪಕ್ಷದಿಂದ ಮುಂದಿನ ಸಾಲಿನ ನಾಯಕರು ಎದ್ದು ತಮ್ಮ ಪ್ರತಿಭಟನೆ ವ್ಯಕ್ತ ಪಡಿಸಿದರು.

ಈ ನಡುವೆ ಖರ್ಗೆ ಅವರು ಪ್ರಸ್ತಾಪಿಸಿ ಕ್ರೀಯಾಲೋಪಕ್ಕೆ ರೂಲಿಂಗ್ ನೀಡಿದ ಸಭಾಪತಿ ಅವರು, ಮಾರ್ಚ್ 13 ಮತ್ತು 14ರ ಪ್ರಸ್ತಾವಗಳನ್ನು ದೃಢಪಡಿಸುವಂತೆ ಸಭಾನಾಯಕ ಪಿಯೂಷ್ ಗೋಯಲ್‍ರಿಗೆ ಸೂಚಿಸಿದರು.
ಈ ನಡುವೆ ಮತ್ತೆ ಆಡಳಿತ ಮತ್ತು ಪ್ರತಿಪಕ್ಷಗಳ ಭಾಗದಿಂದ ಘೋಷಣೆಗಳು ಜೋರಾದವು. ಹೀಗಾಗಿ ದಿನದ ಕಲಾಪವೂ ಬಲಿಯಾಯಿತು.

ರಾಹುಲ್ ಕೆಣಕಿದ ವರುಣ್

ಕಳೆದ ತಿಂಗಳು ನಡೆದಿದ್ದ ಬಜೆಟ್ ಅಧಿವೇಶನದ ಮುಂದುವರೆದ ಭಾಗವಾಗಿ ಸೋಮವಾರದಿಂದ ಕಲಾಪ ಸಮಾವೇಶಗೊಂಡಿತ್ತು. ರಾಹುಲ್ ಹೇಳಿಕೆ ಮತ್ತು ಅದಾನಿ ಗುಂಪಿನ ಹಗರಣಗಳಿಂದಾಗ ಕಳೆದ ಐದು ದಿನಗಳಿಂದಲೂ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಯಾವುದೇ ಕಲಾಪ ನಡೆಯದೆ ಸಮಯ ವ್ಯರ್ಥವಾಗಿದೆ.

ಇಂದು ವಾರದ ಕೊನೆಯ ದಿನವಾಗಿದ್ದು ಮಧ್ಯಾಹ್ನದವರೆಗೂ ಕಲಾಪ ನಡೆಯಬೇಕಿತ್ತು. ಆದರೆ ಗದ್ದಲದಿಂದಾಗಿ ಯಾವುದೇ ಚರ್ಚೆ ನಡೆಯದೇ ಅಧಿವೇಶನ ವ್ಯರ್ಥವಾಗಿದೆ. ಉಭಯ ಸದನಗಳನ್ನು ಸೋಮವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

Houses, Parliament, adjourned, Rahul Gandhi, Adani row,

Articles You Might Like

Share This Article