ಮನೆಗೆಲಸಕ್ಕಿದ್ದು ಚಿನ್ನಾಭರಣ ಕದಿಯುತ್ತಿದ್ದ 17 ಮಂದಿ ನೇಪಾಳಿ ಗ್ಯಾಂಗ್ ಸೆರೆ

Social Share

ಬೆಂಗಳೂರು,ಮಾ.11- ದಕ್ಷಿಣ ವಿಭಾಗದ ಜೆಪಿನಗರ ಹಾಗೂ ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಉದ್ಯಮಿಗಳು ಹಾಗೂ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿಯ ಮನೆಗಳಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಮಹಿಳೆಯರೂ ಸೇರಿದಂತೆ ಕುಖ್ಯಾತ 17 ಮಂದಿ ಆರೋಪಿಗಳನ್ನು ಬಂಧಿಸಿ 2 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು, ಪಿಸ್ತೂಲು ಹಾಗೂ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಳ್ಳಲಾಗಿದೆ.

ಬಿಲ್ಡರ್ ಮನೆಯಲ್ಲಿ ಕಳ್ಳತನ: ಜೆಪಿನಗರದ 2ನೇ ಹಂತದಲ್ಲಿ ವಾಸವಿರುವ ಬಿಲ್ಡರ್ ಕಿರಣ್ ಮನೆಯಲ್ಲಿ ಕಳ್ಳತನ ಮಾಡಿದ್ದ 8 ಮಂದಿಯನ್ನು ಜೆಪಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ನೇತ್ರಾ ಶಾಹಿ(43), ಲಕ್ಷ್ಮಿ ಸೇಜುವಲ್(33), ಗೋರಕ್ ಬಹದ್ದೂರ್ ಶಾಹಿ(50), ಭೀಮ್ ಬಹದ್ದೂರ್ ಶಾಹಿ(45), ಅಂಜಲಿ(31), ಅಭೇಶ್ ಶಾಹಿ(21), ಪ್ರಶಾಂತ್(21), ಪ್ರಕಾಶ್ ಶಾಹಿ(31) ಎಂಬುವರನ್ನು ಬಂಧಿಸಲಾಗಿದೆ.

ಆರೋಪಿಗಳಿಂದ ಒಂದು ಪಿಸ್ತೂಲ್, 2 ಮ್ಯಾಗ್ಜೀನ್, ಮೂರು ಜೀವಂತ ಗುಂಡುಗಳು, ಒಂದು ಆಟಿಕೆ ಪಿಸ್ತೂಲ್, 1.173 ತೂಕದ ಚಿನ್ನದ ಒಡವೆಗಳು, 350 ಗ್ರಾಂ ಬೆಳ್ಳಿವಸ್ತುಗಳು, 77.69 ಲಕ್ಷ ನಗದು ಹಾಗೂ 13 ವಿದೇಶಿ ಕರೆನ್ಸಿಗಳು ಸೇರಿದಂತೆ ಒಟ್ಟು 1.40 ಕೋಟಿಗೂ ಹೆಚ್ಚು ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಲ್ಡರ್ ಕಿರಣ್ ಅವರ ಮನೆಯವರೆಲ್ಲರೂ ತಿರುಪತಿಗೆ ಹೋಗಿದ್ದು ಅನಾರೋಗ್ಯದ ಕಾರಣ ಕಿರಣ್ ಮಾತ್ರ ಮನೆಯಲ್ಲಿದ್ದರು. ಫೆ.28ರಂದು ಬೆಳಗಿನ ಜಾವ 3.45ರ ಸುಮಾರಿನಲ್ಲಿ ಕಿರಣ್ ಅವರಿಗೆ ಎಚ್ಚರವಾಗಿ ಹಸಿವಾದ್ದರಿಂದ ಫ್ರಿಡ್ಜ್‍ನಲ್ಲಿ ಏನಾದರು ಇರುತ್ತದೆ. ತಿನ್ನೋಣವೆಂದು ಹೋದಾಗ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದೆ.

ಮದ್ಯದಮಲಿನಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕುಡುಕ

ತಂದೆ-ತಾಯಿ ರೂಮ್‍ನ ವಾಡ್ರೂಬ್ ಹಾಗೂ ಕಬ್ಬಿಣದ ಬೀರು ತೆರೆದ ಸ್ಥಿತಿಯಲ್ಲಿರುವುದು ಕಂಡು ತಕ್ಷಣ ಕೆಳಗಡೆ ಸೆಕ್ಯೂರಿಟಿ ರೂಮ್ ಬಳಿ ಹೋಗಿ ನೋಡಿದಾಗ ಕೆಲಸಕ್ಕಿದ್ದ ಸೆಕ್ಯುರಿಟಿ ದಂಪತಿ ನಾಪತ್ತೆಯಾಗಿರುವುದು ಕಂಡುಬಂದಿದೆ.

ತಕ್ಷಣ ಅವರು ಜೆಪಿನಗರ ಪೊಲೀಸರಿಗೆ ದೂರು ನೀಡಿದ್ದು, ಮನೆಯಲ್ಲಿ ಸೆಕ್ಯುರಿಟಿ ಕೆಲಸಕ್ಕಿದ್ದ ನೇಪಾಳ ದೇಶದ ಪ್ರೇಮ್-ಲಕ್ಷ್ಮಿ ಸೆಜುವಲ್ ದಂಪತಿ ಮನೆಯಲ್ಲಿದ್ದ ಸುಮಾರು 1.900 ಕೆಜಿ ತೂಕದ ಚಿನ್ನಾಭರಣ, ಪಿಸ್ತೂಲು, ಗುಂಡುಗಳು ಹಾಗು ಹಣ ದೋಚಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

6 ತಂಡ ರಚನೆ: ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡು ಆರೋಪಿಗಳ ಬಂಧನಕ್ಕೆ ಆರು ತಂಡಗಳನ್ನು ರಚಿಸಿ ನೇಪಾಳ ದೇಶದ ಗಡಿಭಾಗ ದೆಹಲಿ, ಉತ್ತರಪ್ರದೇಶದ ಲಖ್ನೋ, ಹರಿಯಾಣದ ಝಾನ್ಸಿಗೆ ಹೋಗಿ ಪತ್ತೆ ಕಾರ್ಯದಲ್ಲಿ ತೊಡಗಿ ಮಾಹಿತಿ ಕಲೆ ಹಾಕಿದಾಗ ಈ ಕೃತ್ಯದಲ್ಲಿ 9 ಜನ ಭಾಗಿಯಾಗಿರುವುದು ಗೊತ್ತಾಗಿ ಅವರನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಉದ್ಯಮಿ ಮನೆಯಲ್ಲಿ ಕಳ್ಳತನ: ಇದೇ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2ನೇ ಹಂತದಲ್ಲಿ ವಾಸವಿರುವ ಉದ್ಯಮಿ ಬ್ರಿಜ್ ಭೂಷಣ್ ಅವರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡು ತನ್ನ ಗ್ಯಾಂಗ್‍ನೊಂದಿಗೆ ಸೇರಿ ಕಳ್ಳತನ ಮಾಡಿದ್ದ ನಾಲ್ವರನ್ನು ತನಿಖಾ ತಂಡವು ಬಂಧಿಸಿ 25 ಲಕ್ಷಕ್ಕೂ ಹೆಚ್ಚು ಮೌಲ್ಯದ 320 ಗ್ರಾಂ ತೂಕದ ಚಿನ್ನಾಭರಣ, 6.12 ಲಕ್ಷ ನಗದು, 197 ಗ್ರಾಂ ಬೆಳ್ಳಿವಸ್ತುಗಳನ್ನು ವಶಪಡಿಸಿಕೊಂಡಿದೆ.

ಅರ್ಜುನ್ ಶಾಯಿ, ಪೂರನ್ ಶಾಯಿ, ಹರೀಶ್ ಶಾಯಿ ಮತ್ತು ರಮಿತ ಅಲಿಯಾಸ್ ರಮಿತ ಠಾಕೂರ್ ಬಂಧಿತ ಆರೋಪಿಗಳು. ಉದ್ಯಮಿ ಬ್ರಿಜ್ ಭೂಷಣ್ ಅವರು ನಟ್ಟು-ಬೋಲ್ಟ್ ಕಾರ್ಖಾನೆ ನಡೆಸುತ್ತಿದ್ದು ಜೆಸಿ ರಸ್ತೆಯಲ್ಲಿ ಶೋರೂಮ್ ಇಟ್ಟುಕೊಂಡಿದ್ದಾರೆ. ಡಿ.2ರಂದು ಮನೆಯವರೆಲ್ಲರೂ ಕೆಲಸಕ್ಕೆಂದು ಅಂಗಡಿಗೆ ಹೋಗಿದ್ದು, ಮನೆಯಲ್ಲಿ ಅವರ ತಾಯಿ ಮಾತ್ರ ಇದ್ದರು.

ಆ ಸಂದರ್ಭದಲ್ಲಿ ಆರೋಪಿಗಳು ಆಹಾರದಲ್ಲಿ ಮತ್ತುಬರುವ ಔಷ ಬೆರೆಸಿದ್ದಾರೆ. ಈ ಆಹಾರವನ್ನು ಸೇವಿಸಿದ ಅವರ ತಾಯಿ ನಿದ್ರೆಗೆ ಜಾರಿದಾಗ ಇವರ ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳ ದೇಶದ ವಿಮಲ ಎಂಬಾಕೆ ಮನೆಯಲ್ಲಿದ್ದ 35 ಲಕ್ಷ ಹಣ ಹಾಗೂ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಳು. ಈ ಬಗ್ಗೆ ಜೆಪಿ ನಗರ ಠಾಣೆ ಪೊಲೀಸರಿಗೆ ಬ್ರಿಜ್ ಅವರು ದೂರು ನೀಡಿದ್ದರು.

ಸೌದಿ ಪ್ರಜೆಗಳಿಗೆ ಇ-ವೀಸಾ ಸೌಲಭ್ಯ ಮರು ಜಾರಿ ಮಾಡಿದ ಭಾರತ

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಆರು ತಂಡ ರಚಿಸಿದ್ದರು. ಈ ತಂಡಗಳು ನೇಪಾಳ ದೇಶದ ಗಡಿಭಾಗ ದೆಹಲಿ, ಉತ್ತರ ಪ್ರದೇಶದ ಲಕ್ನೋ, ರಾಜಸ್ಥಾನದ ಜೈಪುರದಲ್ಲಿ ಕಾರ್ಯಾಚರಣೆ ನಡೆಸಿ ನಾಲ್ಕು ಮಂದಿಯನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಜಯನಗರ: ಜಯನಗರದ 6ನೇ ಬ್ಲಾಕ್‍ನಲ್ಲಿ ವಾಸವಿರುವ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಒಬೆದುಲ್ಲಾ ಖಾನ್ ಅವರ ಮನೆಯಲ್ಲಿ ಕಳ್ಳತನ ಮಾಡಿದ್ದ ನೇಪಾಳ ದೇಶದ ಐದು ಮಂದಿಯನ್ನು ಪೊಲೀಸರು ಬಂಧಿಸಿ 21.27 ಲಕ್ಷಕ್ಕೂ ಹೆಚ್ಚು ಮೌಲ್ಯದ 292 ಗ್ರಾಂ ಚಿನ್ನಾಭರಣ 15 ಸಾವಿರ ಹಣ, 168 ಗ್ರಾಂ ಬೆಳ್ಳಿ ವಸ್ತುಗಳು, ವಿವಿಧ ಬ್ರಾಂಡ್‍ನ 18 ವಾಚುಗಳು, ಸ್ಯಾಮ್‍ಸಂಗ್ ಟ್ಯಾಬ್, ಒನ್‍ಪ್ಲಸ್ ಮೊಬೈಲ್ ವಶಪಡಿಸಿಕೊಂಡಿದ್ದಾರೆ.

ಬಿಕಾಸ್, ಹೇಮಂತ್ ಅಲಿಯಾಸ್ ಹಿರ್ಧಮ್, ಸುಷ್ಮಿತಾ, ರೋಷನ್ ಪದಮ್ ಷಾಹಿ ಮತ್ತು ಪ್ರೇಮ್ ಬಂಧಿತ ಆರೋಪಿಗಳು. ಇವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಬಿಕಾಸ್ ಮತ್ತು ಸುಷ್ಮಿತಾ ದಂಪತಿ ಫೆ. 13ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮನೆಯ ಬಾಗಿಲನ್ನು ಒಡೆದು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಬಗ್ಗೆ ಒಬೆದುಲ್ಲಾ ಅವರು ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ತಂಡದ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ನೇಪಾಳಕ್ಕೆ ಹೊರಡಲು ಸಿದ್ದವಾಗಿದ್ದ ಕಳ್ಳರನ್ನು ಕೇವಲ 2 ಗಂಟೆಯ ಅವಧಿಯಲ್ಲಿ ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.

ಉನ್ನತ ಶಿಕ್ಷಣದಲ್ಲಿ ಭಾರತ ವಿಶ್ವಪ್ರಸಿದ್ಧವಾಗಿದೆ; ಅಲ್ಬನಿಸ್

ದಕ್ಷಿಣ ವಿಭಾಗದ ಉಪಪೊಲೀಸ್ ಆಯುಕ್ತರಾದ ಕೃಷ್ಣಕಾಂತ್ ಅವರ ಮಾರ್ಗದರ್ಶನದಲ್ಲಿ ಹಾಗೂ ಜಯನಗರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಕೆ.ವಿ. ಶ್ರೀನಿವಾಸ್ ಅವರ ನೇತೃತ್ವದಲ್ಲಿ ಜೆಪಿ ನಗರ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಟಿ.ಎಸ್. ರಾಧಾಕೃಷ್ಣ ಹಾಗೂ ಸಿಬ್ಬಂದಿ ಒಳಗೊಂಡ ತಂಡ ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಗಳನ್ನು ಬಂಧಿಸಿ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ತಂಡದ ಉತ್ತಮ ಕಾರ್ಯವನ್ನು ಮೇಲಾಧಿಕಾರಿಗಳು ಶ್ಲಾಘಿಸಿದ್ದಾರೆ.

houses, stolen, 17 Nepali, gang, arrested, Bengaluru,

Articles You Might Like

Share This Article