ಬೆಂಗಳೂರು, ಡಿ. 19- ಮನೆ ಕೆಲಸಕ್ಕೆ ಹಾಗೂ ವಯಸ್ಸಾದ ತಂದೆ, ತಾಯಿಯನ್ನು ನೋಡಿಕೊಳ್ಳಲು ಕೆಲಸದವರು ಬೇಕೆಂದು ಆ್ಯಪ್ ಮೂಲಕ ಕರೆಸಿಕೊಂಡ ವ್ಯಕ್ತಿ 21 ವರ್ಷದ ಯುವತಿ ಮೇಲೆ ಅತ್ಯಾಚಾರ ವೆಸಗಿರುವ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಕೂಡ್ಲು ಬಡಾವಣೆಯ ನಿವಾಸಿ ಪರಶಿವ ಮೂರ್ತಿ(47) ಬಂಧಿತ ಆರೋಪಿ. ಈತ ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದು, ಈತ ವಯಸ್ಸಾದ ತಂದೆ, ತಾಯಿ ನೋಡಿಕೊಳ್ಳಲು ಹಾಗೂ ಮನೆ ಕೆಲಸಕ್ಕೆ ಮಹಿಳಾ ಕೆಲಸದವರು ಬೇಕೆಂದು ವಿಲ್ಸನ್ಗಾರ್ಡನ್ನಲ್ಲಿ ಕಚೇರಿ ಇರುವ ಬುಕ್ ಮೈ ಬಾಯಿ ಆ್ಯಪ್ ಸಂಪರ್ಕಿಸಿದ್ದಾನೆ.
BIG BREAKING : ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಈ ಕಚೇರಿಯವರು 21 ವರ್ಷದ ಯುವತಿಯನ್ನು ಇತ್ತೀಚೆಗೆ ಮನೆ ಕೆಲಸಕ್ಕೆ ಕಳುಹಿಸಿದ್ದು, ಪರಶಿವಮೂರ್ತಿ ಆಕೆಯ ಮೇಲೆ ಅತ್ಯಾಚಾರವೆಸಗಿ ಯಾರಿಗೂ ಈ ವಿಷಯ ತಿಳಿಸದಂತೆ ಜೀವ ಬೆದರಿಕೆ ಹಾಕಿ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದನು.
ಆ ಸಂದರ್ಭದಲ್ಲಿ ಯುವತಿ ತನ್ನ ಮೊಬೈಲ್ನಿಂದ ಆ್ಯಪ್ ಕಚೇರಿಗೆ ಕರೆ ಮಾಡಿ ನಡೆದ ಸಂಗತಿಯನ್ನು ತಿಳಿಸಿದ್ದಾಳೆ.
ಕಚೇರಿಯವರು ಪರಪ್ಪನ ಅಗ್ರಹಾರ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ನಂತರ ಮನೆಯ ಬಾಗಿಲು ಒಡೆದು, ಯುವತಿಯನ್ನು ರಕ್ಷಿಸಿದ್ದಾರೆ.
ಮೋದಿ ಸರ್ಕಾರ ಅಸ್ಥಿತ್ವಕ್ಕೆ ಬಂದ ನಂತರ ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ ; ಠಾಕೂರ್
ಆರೋಪಿ ಸೆರೆ:
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ತನಿಖೆ ಕೈಗೊಂಡು ಆರೋಪಿ ಪರಶಿವಮೂರ್ತಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
#housework, #woman #Rape, #Bangalore,