1.15 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ : ಸೋಮಣ್ಣ

Social Share

ಬೆಂಗಳೂರು,ಮಾ.14- ನಾವು ಅಧಿಕಾರಕ್ಕೆ ಬಂದಾಗ 1821 ಕೊಳಚೆ (ಸ್ಲಮ್)ಪ್ರದೇಶಗಳು ಇದ್ದವು. ಅವುಗಳನ್ನು ಈಗ ಅಭಿವೃದ್ಧಿ ಪಡಿಸಿದ್ದೇವೆ. 8ಸಾವಿರ ಎಕರೆಯಲ್ಲಿ 1.15 ಲಕ್ಷ ಕುಟುಂಬಗಳಿಗೆ ಪುರಸಭೆ ಮತ್ತು ಬಿಬಿಎಂಪಿ ವತಿಯಿಂದ ಹಕ್ಕು ಪತ್ರ ವಿತರಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದರು.

ಕಾವೇರಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲೇ ಸುಮಾರು 8 ಸಾವಿರ ಮಂದಿಗೆ ಹಕ್ಕು ಪತ್ರ ನೀಡಲಾಗಿದೆ. ಇದಲ್ಲದೆ ಒಂದು ಲಕ್ಷ ಮನೆಗಳನ್ನು 78 ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ 52,735(1ಬಿಎಚ್‍ಕೆ), ಆರು ಸಾವಿರ (2ಬಿಎಚ್‍ಕೆ) ಮನೆಗಳನ್ನು ಕಟ್ಟಲಾಗಿದೆ ಎಂದು ಹೇಳಿದರು.

ಸುಮಾರು 493 ಎಕರೆ ಜಾಗದಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಯಲಹಂಕದ ಮುದ್ದೇನಪಾಳ್ಯ,ಆನೇಕಲ್, ಕೆ.ಆರ್.ಪುರ ಸೇರಿದಂತೆ ಏಳು ಸ್ಥಳಗಳಲ್ಲಿ 2300 ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ.

ಇನ್ನು ಶಹಪುರ, ಚಿತ್ತಾಪುರ,ಹುಬ್ಬಳ್ಳಿ, ಉಡುಪಿ, ಗೋವಿಂದರಾಜ ನಗರ, ಶಿರಾ, ಬಂಗಾರಪೇಟೆ ಸೇರಿದಂತೆ ಹಲವೆಡೆ 7,746ಮನೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ವಿತರಿಸಿ ಹಕ್ಕು ಪತ್ರ ನೀಡಲಾಗಿದೆ ಎಂದು ತಿಳಿಸಿದರು.

ರೋಹಿಂಗ್ಯಗಳ ಒಳನುಸಳುವಿಕೆಗೆ ನೆರವು ನೀಡುತ್ತಿದ್ದ ಆರೋಪಿಯ ಬಂಧನ

ಕೆಲವರು ಒಂದು ಮನೆ ಯನ್ನು ಕಟ್ಟಿಲ್ಲ ಎಂದು ಹೇಳುತ್ತಿದ್ದರು. ಆದರೆ, ನಾವು ಅವುಗಳನ್ನು ಕಟ್ಟಿ ಜನರಿಗೆ ನೀಡಿದ್ದೇವೆ ಎಂದು ಸೋಮಣ್ಣ ತಿರುಗೇಟು ನೀಡಿದರು.

ಮನೆ ಕಟ್ಟುವುದು ಎಂದರೆ ಒಳಚರಂಡಿ ನಿರ್ಮಿಸಿದಂತೆ ಅಲ್ಲ. ನಮ್ಮ ಸರ್ಕಾರ 52 ಸಾವಿರ ಮನೆಗಳನ್ನು ಕಟ್ಟಿ ಪೂರೈಸಿದೆ. ಇನ್ನೂ ಪ್ರಗತಿಯಲ್ಲಿದ್ದು, ಮುಂದಿನ ಸರ್ಕಾರ ಬರುವುದರೊಳಗೆ ಕೇವಲ 8ಸಾವಿರ ಮನೆಗಳು ಮಾತ್ರ ಬಾಕಿ ಉಳಿಯುತ್ತವೆ ಎಂದು ಸ್ಪಷ್ಟಪಡಿಸಿದರು.

ನನ್ನ 45 ವರ್ಷಗಳ ರಾಜಕೀಯ ಇತಿಹಾಸದಲ್ಲೇ ಯಾರೂ ಕೂಡ ಇಷ್ಟು ಕೆಲಸ ಮಾಡಿಲ್ಲ. ಇದೆಲ್ಲದರ ಮಾಹಿತಿಯನ್ನು ಪುಸ್ತಕದಲ್ಲಿ ನಮೂದಿಸಿದ್ದೇನೆ. ನೀತಿ ಸಂಹಿತೆ ಜಾರಿಗೆ ಬರುವ ಮುನ್ನ ಅದನ್ನು ಬಿಡುಗಡೆ ಮಾಡುತ್ತೇನೆ ಎಂದರು.

ಯಡಿಯೂರಪ್ಪ ಅವರು ನನ್ನನ್ನು ವಸತಿ ಸಚಿವನನ್ನಾಗಿ ಮಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅನುದಾನ ನೀಡಿದರು ಎಂದು ಗುಣಗಾನ ಮಾಡಿದರು.

ಹಾಸನ ವಿಮಾನ ನಿಲ್ದಾಣ ನೆನೆಗುದಿಗೆ ಬಿದ್ದಿತ್ತು. ಅದನ್ನು ಈಗ ಪೂರ್ಣಗೊಳಿಸಲು ಮುಂದಾಗಿದ್ದೇವೆ. ಸಾಮಾನ್ಯ ಜನರ ಜೀವನ ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ ಎಂದರು. ಮನೆಗಳ ಹಂಚಿಕೆಯಲ್ಲೂ ಪಾರದರ್ಶಕ ಕಾಯ್ದುಕೊಳ್ಳಲಾಗಿದೆ. ಕೆಲ ಕುಟುಂಬಗಳಲ್ಲಿ ನಾಲ್ಕರಿಂದ ಐದು ಅರ್ಜಿಗಳು ಬಂದಿವೆ.

ವುಗಳನ್ನೆಲ್ಲಾ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಪ್ರಧಾನಮಂತ್ರಿ ಆವಾಜ್ ಯೋಜನೆಯಿಂದ 5,24,426 ಮನೆಗಳನ್ನು ನಿರ್ಮಿಸಿ ಫಲಾನುಭವಿಗಳಿಗೆ ವಾಸ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ 8381 ಕೋಟಿ ಖರ್ಚು ಮಾಡಿದ್ದು, 2 ಲಕ್ಷ ಫಲಾನುಭವಿಗಳನ್ನು ಗುರುತಿಸಿ ಮನೆ ನೀಡಲಾಗಿದೆ ಎಂದರು.
ಮಾರ್ಚ್ ಅಂತ್ಯದೊಳಗೆ 7 ಲಕ್ಷ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ನೆರೆ ಸಂತ್ರಸರಿಗೆ 2,780 ಕೋಟಿ ರೂ.ನೆರವಿಗಾಗಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಅಸಮಾಧಾನಿತರ ಮನವೊಲಿಕೆಗೆ ಸಿಎಂ-ಬಿಎಸ್‌ವೈ ರಹಸ್ಯ ಸಭೆ

ಕುಶಲಕರ್ಮಿಗಳಿಗೆ 2ಬಿಎಚ್‍ಕೆ ಮನೆಗಳನ್ನು ನೀಡಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲೇ ಅದು ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು. ಮೂರು ಲಕ್ಷ ಮನೆ ಮಾಲೀಕರಿಗೆ ಹಕ್ಕು ಪತ್ರ ನೀಡಿ ಮನೆ ಮಾಲೀಕರು ಎಂದು ಘೋಷಣೆ ಮಾಡಿದ್ದೇವೆ. ಮೊದಲು ಒಂದು ಲಕ್ಷ ಡೆಪಾಜಿಟ್ ಇತ್ತು. ಈಗ ಅದನ್ನು 50 ಸಾವಿರಕ್ಕೆ ಇಳಿಸಲಾಗಿದೆ. ಈ ಠೇವಣಿ ಇಟ್ಟುವವರಿಗೆ ಮನೆ ಸಂಪೂರ್ಣ ಆದ ನಂತರ ಆದಷ್ಟು ಬೇಗ ಮನೆ ಕೀ ಕೊಡಲಾಗುವುದು. ಬೇಡವೆಂದರೆ ಹಣ ವಾಪಸ್ ಕೊಡುತ್ತೇವೆ ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸೋಮಣ್ಣ ಹೇಳಿದರು.

Housing, Minister Somanna,

Articles You Might Like

Share This Article