ಬೆಂಗಳೂರು,ಮಾ.7-ರಾಜಧಾನಿ ಬೆಂಗಳೂರಿನಲ್ಲಿ ಎಷ್ಟು ಬೇಕಾದರೂ ಅಷ್ಟು ಭೂಮಿಯನ್ನು ಒದಗಿಸಲು ನಮ್ಮ ಇಲಾಖೆ ಸಿದ್ದವಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಸಭೆಗೆ ತಿಳಿಸಿದರು. ಶಾಸಕ ಮಂಜುನಾಥ್.ಆರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ವಸತಿ ಯೋಜನೆಗಳನ್ನು ಆರಂಭಿಸಿದರೆ ಕಂದಾಯ ಇಲಾಖೆ ಎಷ್ಟು ಬೇಕಾದರೂ ಜಮೀನು ಕೊಡಲು ಸಿದ್ದವಿದೆ. ಪ್ರತಿಯೊಬ್ಬರಿಗೂ ಸೂರು ಒದಗಿಸಿಕೊಡಲು ನಮ್ಮ ಸರ್ಕಾರ ಬದ್ದವಿದೆ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರು ನಗರ ಜಿಲ್ಲೆ ಉತ್ತರ ತಾಲ್ಲೂಕು ಯಶವಂತಪುರ ಕೆರೆಗುಡ್ಡದಹಳ್ಳಿ ಗ್ರಾಮದಲ್ಲಿ ಶಿಕ್ಷಣ ಸಂಸ್ಥೆಗೆ ನೀಡಿದ್ದ 6.14 ಗುಂಟೆ ಜಮೀನನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.2004ರಲ್ಲಿ ಅಂದಿನ ಸರ್ಕಾರ 1969ರ ನಿಯಮ 19ರಲ್ಲಿನ ಷರತ್ತುಗಳನ್ನು ವಿಸಿ ಎಕರೆವೊಂದಕ್ಕೆ ವಾರ್ಷಿಕ 1 ಸಾವಿರ ರೂ. ಗುತ್ತಿಗೆ ದರ ವಿಸಿ 30 ವರ್ಷಗಳ ಅವಗೆ ಶ್ರೀ ಬಾಲಾಜಿ ಎಜುಕೇಷನ್ ಟ್ರಸ್ಟ್ ಅವರಿಗೆ ನೀಡಲಾಗಿದೆ.
ಈ ಹಿಂದೆಯೂ ಅನೇಕ ಸರ್ಕಾರಗಳು ಶಿಕ್ಷಣ ಸಂಸ್ಥೆಗೆ ಜಮೀನು ಮಂಜೂರು ಮಾಡಿದ್ದಾರೆ. ಹೀಗಾಗಿ ಹಿಂಪಡೆಯುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಪುನರುಚ್ಚರಿಸಿದರು.ಶಿಕ್ಷಣ ಸಂಸ್ಥೆಗೆ ಖಾಯಂ ಆಗಿ ನೀಡಲು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 69ಎ ಹಾಗೂ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22ಎ ತಿದ್ದುಪಡಿ ಮಾಡಲಾಗಿದೆ ಎಂದರು.
ಸರ್ವೇ ನಂ. 8ರಲ್ಲಿ 4 ಎಕರೆ ಜಮೀನನ್ನು ಮಾರ್ಗಸೂಚಿ ದರ ಹಾಗೂ ಇತರೆ ಶಾಸನಬದ್ದ ಶುಲ್ಕ ವಿಸಿ ಗುತ್ತಿಗೆ ನೀಡಲಾಗಿದೆ. ನಿಯಮಗಳ ಪ್ರಕಾರ ನೀಡಿರುವುದರಿಂದ ಜಮೀನು ಹಿಂಪಡೆಯಲಾಗುವುದಿಲ್ಲ ಎಂದರು.
