ಸ್ಯಾಂಟ್ರೋ ರವಿ ಸುಳಿವು ಕೊಟ್ಟಿದ್ದು ಸ್ನೇಹಿತನ ಮೊಬೈಲ್

Social Share

ಬೆಂಗಳೂರು, ಜ. 14- ಸ್ನೇಹಿತನ ಮೊಬೈಲ್ ಟ್ರ್ಯಾಕ್ನಿಂದ ಸ್ಯಾಂಟ್ರೋ ರವಿ ಪೊಲೀಸರಿಗೆ ಸಿಕ್ಕಿ ಬಿದ್ದಿದಾನೆ ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ.ಹೈಪೊ್ರೀಫೈಲ್ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದ ಸ್ಯಾಂಟ್ರೋ ರವಿ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದರು.

ಆತನ ಸ್ಥಳೀಯ ಸ್ನೇಹಿತರಲ್ಲದೆ ಹೊರ ರಾಜ್ಯದ ಸ್ನೇಹಿತರ ಚಲನವಲನಗಳ ಬಗ್ಗೆಯೂ ಪೊಲೀಸರು ನಿಗಾವಹಿಸಿದ್ದರು. ಮಾತ್ರವಲ್ಲ ರವಿ ಬಂಧನಕ್ಕೆ 11 ವಿಶೇಷ ಪೊಲೀಸ್ ತಂಡಗಳನ್ನು ರಕ್ಷಿಸಿ ಒಂದೊಂದು ತಂಡಕ್ಕೆ ಒಂದೊಂದು ಕೆಲಸ ವಹಿಸಲಾಗಿತ್ತು.ಈ ನಡುವೆ ರವಿ ಸ್ನೇಹಿತರ ಚಲನವಲಗಳ ಮೇಲೆ ಗಮನ ಇಟ್ಟಿದ್ದ ಒಂದು ತಂಡ ಸ್ಯಾಂಟ್ರೋ ರವಿಯ ಆಪ್ತ ಲಕ್ಷೀತ್ನನ್ನು ಮಂತ್ರಾಲಯದಲ್ಲಿ ಬಂಧಿಸಿವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಲವು ಮಾಹಿತಿ ಹೊರಬಿದ್ದಿತ್ತು.

ಅಲ್ಲದೆ, ಹೊರ ರಾಜ್ಯದ ಆತನ ನಾಲ್ವರು ಸ್ನೇಹಿತರ ಮೇಲೂ ಪೊಲೀಸರು ಹೆಚ್ಚು ನಿಗಾ ಇಟ್ಟಿದ್ದರು ಈ ನಡುವೆ ಸ್ಯಾಂಟ್ರೋ ರವಿ ಕೊಚ್ಚಿಗೆ ಹೋಗಿರುವ ಮಾಹಿತಿ ಲಭಿಸಿತ್ತು.ಸ್ಯಾಂಟ್ರೋ ರವಿಯ ಮೂವರು ಸ್ನೇಹಿತರು ತಮ್ಮ ತಮ್ಮ ಊರಿನಲ್ಲಿಯೇ ಇದ್ದರು. ಒಬ್ಬಾತ ಮಾತ್ರ ಊರಿನಲ್ಲಿರಲಿಲ್ಲ ಎಂಬ ಖಚಿತ ಮಾಹಿತಿಯೊಂದು ಲಭ್ಯವಾದ ನಂತರ ಆತನ ಮೊಬೈಲ್ ಟ್ರ್ಯಾಕ್ ಮಾಡಿದಾಗ ಅದು ಸ್ವಿಚ್ ಆಪ್ ಆಗಿತ್ತು.

ಆತನ ಮೊಬೈಲ್ ಮೇಲೆಯೇ ಪೊಲೀಸರು ಹೆಚ್ಚು ಗಮನಹರಿಸಿದ್ದಾಗ ಆತನ ಮೊಬೈಲ್ ಒಂದು ದಿನದ ಹಿಂದೆ ಚಾಲನೆಯಲ್ಲಿತ್ತು ಎಂಬುದು ಪತ್ತೆಯಾಗುತ್ತಿದ್ದಂತೆ ಪೊಲೀಸರು ತಕ್ಷಣ ಆತನ ಮೊಬೈಲ್ ಟ್ರ್ಯಾಕ್ ಮಾಡಿದಾಗ ಅದು ಗುಜರಾತ್ ಲೊಕೇಷನ್ ತೋರಿಸಿದೆ.

ಇದೇ ಆಧಾರದ ಮೇಲೆ ಗುಜರಾತ್ಗೆ ತೆರಳಿ ಮುಂಬೈನಲ್ಲಿದ್ದ ಮೈಸೂರು ಪೊಲೀಸರ ತಂಡ ಮಾಹಿತಿ ಸಿಕ್ಕಿದ ತಕ್ಷಣ ಆಹಮದಾಬಾದ್ಗೆ ತೆರಳಿ ಸ್ಯಾಂಟ್ರೋ ರವಿ ಇರುವ ಜಾಗ ಪತ್ತೆ ಹಚ್ಚಿ ಆತನನ್ನು ಬಂಸುವಲ್ಲಿ ಯಶಸ್ವಿಯಾಗಿದೆ.

ಹೈಪೊ್ರಫೈಲ್ ಪ್ರಕರಣದ ಆರೋಪಿ ಸ್ಯಾಂಟ್ರೋ ರವಿ ವಿರುದ್ಧ ಆತನ 2ನೇ ಪತ್ನಿ ವಿಜಯನಗರ ಪೊಲೀಸ್ ಠಾಣೆ ಜ. 2ರಂದು ದೂರು ನೀಡುತ್ತಿದ್ದಂತೆ ಆತ ನಾಪತ್ತೆಯಾಗಿದ್ದ.

ಸ್ಯಾಂಟ್ರೋ ರವಿ ನಾಪತ್ತೆ ಪ್ರಕರಣ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿತ್ತು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಮೈಸೂರಿಗೆ ಹೋಗಿ ಆತನ 2ನೇ ಪತ್ನಿಯನ್ನು ಕರೆದು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದರು.

ರೇಖಾ ಚಿತ್ರದಿಂದ ಬಯಲು:
ಈ ನಡುವೆ ಸ್ಯಾಂಟ್ರೋ ರವಿ ಬಂಧನಕ್ಕಾಗಿ ರೇಖಾ ಚಿತ್ರವನ್ನು ತಯಾರಿಸಲಾಗಿತ್ತು. ಆತನ ವಿವಿಧ ವಯಸ್ಸಿನ ಫೋಟೋಗಳನ್ನು ಸಂಗ್ರಹಿಸಿ ಪೊಲೀಸರು ರೇಖಾ ಚಿತ್ರವನ್ನು ತಯಾರಿಸಿದ್ದರು. ಆತ ವಿಗ್ ತೆಗೆದಾಗ ಯಾವ ರೀತಿ ಕಾಣಿಸುತ್ತಾನೆ. ಗಡ್ಡ, ಮೀಸೆ ಬೋಳಿಸಿದಾಗ ಯಾವ ರೀತಿ ಕಾಣುತ್ತಾನೆ ಎಂಬಂತೆ ರೇಖಾ ಚಿತ್ರವನ್ನು ಬಿಡಿಸಲಾಗಿತ್ತು.

ಈ ರೇಖಾಚಿತ್ರಗಳನ್ನು ಆತನ ಬಂಧನಕ್ಕೆ ರಚಿಸಲಾಗಿದ್ದ 11 ತಂಡಗಳಿಗೂ ರವಾನಿಸಲಾಗಿತ್ತು. ಆ ತಂಡಗಳು ಈ ರೇಖಾ ಚಿತ್ರಗಳನ್ನಿಟ್ಟುಕೊಂಡು ಸ್ಯಾಂಟ್ರೋ ರವಿ ಬಂಧನಕ್ಕೆ ಇನ್ನಿಲ್ಲದ ಕಸರತ್ತು ನಡೆಸಿತ್ತು. ರೇಖಾಚಿತ್ರ ಹೋಲಿಕೆಯಾದ್ದರಿಂದ ಸ್ಯಾಂಟ್ರೋ ರವಿ ಬಂಧನಕ್ಕೆ ಸಹಾಯವಾಯಿತು.

#SantroRavi

Articles You Might Like

Share This Article