Saturday, September 23, 2023
Homeಇದೀಗ ಬಂದ ಸುದ್ದಿವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳ ದೇವಾಲಯ

ವಿಶ್ವ ಪಾರಂಪರಿಕ ಪಟ್ಟಿಗೆ ಹೊಯ್ಸಳ ದೇವಾಲಯ

- Advertisement -

ನವದೆಹಲಿ, ಸೆ.19- ಕರ್ನಾಟಕದ ಸುಪ್ರಿಸಿದ್ಧ ಹಳೇಬೀಡು ಮತ್ತು ಸೋಮನಾಥಪುರದ ಪ್ರಸಿದ್ಧ ಹೊಯ್ಸಳ ದೇವಾಲಯಗಳನ್ನು ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೊ) ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲಾಗಿದೆ.ಈ ಮೂಲಕ ಭಾರತದ 42 ತಾಣಗಳು ಅಂತಾರಾಷ್ಟ್ರೀಯ ಮನ್ನಣೆ ಪಡೆದಂತಾಗಿದೆ.

2022- 23ರ ವಿಶ್ವ ಪಾರಂಪರಿಕ ಪಟ್ಟಿಗೆ ಕರ್ನಾಟಕದ ಐತಿಹಾಸಿಕ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ಹೊಯ್ಸಳರ ಕಾಲದ ದೇವಾಲಯಗಳನ್ನು ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಗೆ ಭಾರತ ನಾಮನಿರ್ದೇಶನ ಮಾಡಿತ್ತು. ಇದೀಗ ದೇವಾಲಯ ಗಳನ್ನು ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಯುನೆಸ್ಕೋದ ಭಾರತದ ಪ್ರತಿನಿಧಿ ವಿಶಾಲ್ ಶರ್ಮಾ ಘೋಷಿಸಿದ್ದಾರೆ.

- Advertisement -

ಈ ಬಗ್ಗೆ ತನ್ನ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಹಂಚಿಕೊಂಡಿರುವ ಯುನೆಸ್ಕೋ, ಹೊಯ್ಸಳರ ಕಾಲದಲ್ಲಿ ನಿರ್ಮಾಣ ಮಾಡಲಾಗಿರುವ ವಿಶಿಷ್ಠ ಮತ್ತು ವಿಶೇಷ ವಾಸ್ತುಶಿಲ್ಪದ ಕೆತ್ತನೆಗಳು ಇದೀಗ ಯುನೆಸ್ಕೋ ವಿಶ್ವಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಭಾರತಕ್ಕೆ ಅಭಿನಂದನೆಗಳು ಎಂದಿದೆ.
ಈ ಮೂರು ಹೊಯ್ಸಳ ದೇವಾಲಯಗಳು ಈಗಾಗಲೇ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ರಕ್ಷಿತ ಸ್ಮಾರಕಗಳಾಗಿವೆ. ಹೊಯ್ಸಳರು 12 ಮತ್ತು 13ನೇ ಶತಮಾನದಲ್ಲಿ ಕರ್ನಾಟಕವನ್ನು ಆಳಿದ ಪ್ರಮುಖ ರಾಜವಂಶಜರು. ಕಲೆ, ಸಾಹಿತ್ಯ ಮತ್ತು ಪ್ರಮುಖವಾಗಿ ದೇವಾಲಯದ ವಾಸ್ತುಶಿಲ್ಪದ ಮೇಲೆ ಪ್ರಭಾವ ಬೀರಿದ್ದಾರೆ.

ಮಹಿಳಾ ಮೀಸಲಾತಿ ಮಸೂದೆ ಮಂಡನೆ : ವಿಧಾನಸೌದದಲ್ಲೂ ನಾರಿ ಶಕ್ತಿ ಹೆಚ್ಚಳ

ಹೊಯ್ಸಳ ಶಿಲ್ಪಕಲೆ ದ್ರಾವಿಡ ಶೈಲಿ ಮತ್ತು ಆರ್ಯ ಶೈಲಿಗಳೆರಡರ ಮಿಶ್ರಣವಾಗಿದೆ. ಹೊಯ್ಸಳ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು. ರಾಮಾಯಣ ಮಹಾಭಾರತಗಳ ದೃಶ್ಯಗಳು, ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿವೆ. ಅದರಲ್ಲೂ ಬೇಲೂರು, ಹಳೇಬೀಡು ಮತ್ತು ಮೈಸೂರಿನ ಸೋಮನಾಥಪುರದಲ್ಲಿನ ಶಿಲ್ಪಕಲೆಗಳು ಅಪ್ರತಿಮವಾಗಿವೆ. ಸ್ಮಾರಕಗಳ ನಿರ್ಮಾಣಕ್ಕೆ 127 ವರ್ಷಗಳ ಕಾಲ ತೆಗೆದುಕೊಂಡಿದ್ದಾರೆ ಎಂದು ದಾಖಲೆಗಳಲ್ಲಿ ಉಲ್ಲೇಖವಾಗಿದೆ.

ನೊಬೆಲ್ ಪುರಸ್ಕøತ ಜಗತ್ ಪ್ರಸಿದ್ಧ ಸಾಹಿತಿ ರವೀಂದ್ರನಾಥ ಠಾಗೋರ್ ಅವರು ಬದುಕಿ ಬಾಳಿದ ಮನೆಯಾದ ಪಶ್ಚಿಮ ಬಂಗಾಳದಲ್ಲಿರುವ ಶಾಂತಿನಿಕೇತನವನ್ನು ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಸೇರ್ಪಡೆಗೊಳಿಸಲಾಗಿತ್ತು.

ಖಾವಿ ಕಳಚಿ ಟೀ-ಶರ್ಟ್ ಧರಿಸಿದ್ದ ಹಾಲಶ್ರೀ ಸ್ವಾಮೀಜಿ

ಕಲ್ಲಿನ ಕೆತ್ತನೆಗಳು ತುಂಬಾ ಸೂಕ್ಷ್ಮವಾಗಿವೆ. ಹೊಯ್ಸಳ ದೇವಾಲಯಗಳು ಮತ್ತು ಪಶ್ಚಿಮ ಬಂಗಾಳದ ಶಾಂತಿನಿಕೇತನವು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿರುವುದು ದೇಶಕ್ಕೆ ಸಂತೋಷದ ವಿಷಯ. ಈ ಸಂತಸದ ಸಂದರ್ಭದಲ್ಲಿ ದೇಶದ ಜನತೆಗೆ ಶುಭಾಶಯ ಕೋರುತ್ತೇನೆ ಎಂದು ಗೃಹ ಸಚಿವ ಅಮಿತ್ ಷಾ ಪೋಸ್ಟ್ ಮಾಡಿದ್ದಾರೆ.

ವಿಶ್ವ ಪಾರಂಪರಿಕ ತಾಣಗಳ ಪಟ್ಟಿಗೆ ಕರುನಾಡಿನ ಹೊಯ್ಸಳರ ಕಾಲದ ದೇವಾಲಯಗಳು ಸೇರ್ಪಡೆಗೊಂಡಿರುವುದು ಖುಷಿಯ ಜೊತೆಗೆ ಹೆಮ್ಮೆಯ ಸಂಗತಿ ಎಂದು ಸಿಎಂ ತಿಳಿಸಿದ್ದಾರೆ.

Hoysala, #Temples, #UNESCO, #WorldHeritage, #site,

- Advertisement -
RELATED ARTICLES
- Advertisment -

Most Popular