ಹೊಯ್ಸಳರ ಕಾಲದ ವೀರಗಲ್ಲು ಶಾಸನ ಪತ್ತೆ

Social Share

ದೇವನಹಳ್ಳಿ, ಜ. 22- ತಾಲ್ಲೂಕಿನ ಕಸಬಾ ಹೋಬಳಿಯ ಜಿ.ಎಸ್.ಜಿ. ರಿಯಾಲಿಟಿ ಲೇಔಟ್ನಲ್ಲಿ ಒಂದು ಅಪ್ರಕಟಿತ ಹೊಯ್ಸಳರ ಕಾಲದ ಶಿಲಾಶಾಸನ ದೊರೆತಿದ್ದು ಇದು ಯಾರಿಂದ ರಚಿತವಾಯಿತು ಇದರ ಸಾರಾಂಶವೇನು ಎಂಬುದನ್ನು ತಿಳಿಯಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಮೈಸೂರಿನ ಶಾಸನ ತಜ್ಞ ಡಾ|| ಎಸ್.ನಾಗರಾಜಪ್ಪನವರಿಗೆ ಶಾಸನದ ಫೋಟೋಗಳನ್ನು ಕಳುಹಿಸಿಕೊಟ್ಟು ಅವರಿಂದ ಶಾಸನದ ಅರ್ಥವನ್ನು ಇಲ್ಲಿ ಪ್ರಕಟಿಸಿದ್ದೇವೆ ಎಂದು ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯ ತಿಳಿಸಿದರು.
ಅಪೂರ್ಣ ಶಾಸನ ಕ್ರಿ.ಶ. 1343 ರಲ್ಲಿ ಬಲ್ಲಾಳನು ತಿರುವಣ್ಣಾಮಲೈ ಪಟ್ಟಣದಿಂದ ಆಳುತ್ತಿರುವಾಗ, ಅವನ ಸಾಮಂತಾೀಪತಿ, ಮಂಚೆಯನಾಯಕನ ಮಗ ಸೊಣ್ಣಯನಾಯಕನೂ, ನಲ್ಲೂರ ನಾಡಪ್ರಭು ಬೊಮ್ಮಿಜೀಯ, ಬಯಿರಿಜೀಯ, ಮಾರಪ್ಪಜೀಯ ಸೇರಿದಂತೆ ಸಮಸ್ತ ಗೌಡ ಪ್ರಜೆಗಳು, ಬಯಿರಿ ಸೆಟಿಗೆ ದಾನ ನೀಡಿದಂತೆ ತೋರುತ್ತದೆ,
ಶಾಸನ ಅಪೂರ್ಣವಾಗಿರುವುದರಿಂದ ಇತರ ಮಾಹಿತಿ ಲಭ್ಯವಿಲ್ಲ ಎಂದು ಅಧ್ಯಯನ ಮಾಡಿ ಮೈಸೂರಿನ ಸಹಾಯಕ ಅೀಕ್ಷಕ ಶಾಸನ ತಜ್ಞ ಡಾ|| ಎಸ್. ನಾಗರಾಜಪ್ಪ ಶಾಸನದ ಪಾಠವನ್ನು ಓದಿ ಮಾಹಿತಿಯನ್ನು ನೀಡಿರುತ್ತಾರೆ.
ಕಸಬಾ ಹೋಬಳಿಯ ಪ್ರಸನ್ನಹಳ್ಳಿ ಗ್ರಾಮದ ಸಮೀಪ ಅಕ್ಕೂಪೇಟೆ, ಉಪ್ಪಾರಹಳ್ಳಿ, ಹೊಸತೋಟಗಳ ಜಮೀನಿನಲ್ಲಿ ಜಿ.ಎಸ್.ಜಿ ಲೇಔಟ್ನಲ್ಲಿ ವಸತಿಗೃಹಗಳನ್ನು ನಿರ್ಮಿಸುತ್ತಿದ್ದು ಈ ಗ್ರಾಮಗಳಲ್ಲಿ ಒಂದು ಶಾಸನ, ಒಂದು ವೀರಗಲ್ಲು ಹಾಗೂ ಒಂದು ಶಂಖುಮುದ್ರೆವುಳ್ಳ ಶಿಲಾಫಲಕಗಳು ಪತ್ತೆಯಾಗಿದ್ದು, ಲೇಔಟ್ ನಿರ್ಮಾಣದಿಂದಾಗಿ ಮಣ್ಣಿನಲ್ಲಿ ಕಣ್ಮರೆಯಾಗಿ ಹೋಗುತ್ತಿದ್ದವು.
ಇವುಗಳನ್ನು ಗಮನಿಸಿದ ಇತಿಹಾಸ ಸಂಶೋಧಕ ಬಿಟ್ಟಸಂದ್ರ ಗುರುಸಿದ್ದಯ್ಯನವರು ಪ್ರಸನ್ನಹಳ್ಳಿ ಗ್ರಾಮದ ಹಿರಿಯ ಮುಖಂಡ ಪಿ.ಶಾಮಣ್ಣ, ಜೆ.ಸಿ.ಐ. ನಿಕಟಪೂರ್ವ ಅಧ್ಯಕ್ಷ ಎಸ್. ವಿಜಯಕುಮಾರ್, ಜಿ.ಎಸ್.ಜಿ ರಿಯಾಲಿಟಿ ಲೇಔಟ್ನ ಮ್ಯಾನೇಜರ್ ನಿತೀಶ್, ಇಂಜಿನಿಯರ್ ಕುಮಾರ್, ಸೂಪರ್ವೈಸರ್ ನೆಲ್ಸನ್ಬೋರಾ ಹಾಗೂ ಗ್ರಾಮಸ್ಥರ ಗಮನಕ್ಕೆ ತಂದು ಇವರುಗಳ ಸಹಕಾರದಿಂದ ಜೆ.ಸಿ.ಬಿ. ಮೂಲಕ ಹೊರತೆಗೆದು, ರಸ್ತೆ ಬದಿಯಲ್ಲಿರುವ ಜಿ.ಎಸ್.ಜಿ. ರಿಯಾಲಿಟಿ ಲೇಔಟ್ನ ಉದ್ಯಾನವನದಲ್ಲಿ ಮರುಸ್ಥಾಪನೆ ಮಾಡಿ ಸಂರಕ್ಷಿಸಲಾಗಿದೆ.

Articles You Might Like

Share This Article