ಮುಂಬೈ, ಜ. 10- ಬಾಲಿವುಡ್‍ನ ಖ್ಯಾತ ನಟ ಹೃತಿಕ್ ರೋಷನ್ ಅವರು ಇಂದು ತಮ್ಮ 48ನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು ಇಂದೇ ಅವರ ನಟನೆಯ ವಿಕ್ರಮ್ ವೇದಾ ಚಿತ್ರದ ಪೋಸ್ಟರ್ ಬಿಡುಗಡೆಯಾಗಿರುವುದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿದೆ.
ತಮಿಳು ಭಾಷೆಯ ವಿಕ್ರಂ ವೇದಾ ಚಿತ್ರವು ಸಾಕಷ್ಟು ಸದ್ದು ಮಾಡಿ ಯಶಸ್ಸು ಗಳಿಸಿದ ನಂತರ ಬಾಲಿವುಡ್‍ನಲ್ಲಿ ಆ ಚಿತ್ರವನ್ನು ನಿರ್ದೇಶಿಸಲು ನಿರ್ದೇಶಕರಾದ ಪುಷ್ಕರ್- ಗಾಯತ್ರಿ ಅವರು ಮುಂದಾದರು, ಆಗ ತಮಿಳಿನ ಮೂಲ ಚಿತ್ರದಲ್ಲಿ ವಿಜಯ್‍ಸೇತುಪತಿ ನಟಿಸಿದ್ದ ವೇದ ಪಾತ್ರದಲ್ಲಿ ಹೃತಿಕ್ ರೋಷನ್ ಆಯ್ಕೆಯಾದರೆ, ವಿಕ್ರಮ್ ಪಾತ್ರದಲ್ಲಿ ಸೈಫ್ ಅಲಿಖಾನ್ ನಟಿಸುತ್ತಿದ್ದಾರೆ.
ಹೃತಿಕ್‍ರ ಹುಟ್ಟು ಹಬ್ಬದ ಅಂಗವಾಗಿ ಬಿಡುಗಡೆಗೊಂಡಿ ರುವ ಚಿತ್ರದ ಪೋಸ್ಟರ್‍ನಲ್ಲಿ ಹೃತಿಕ್ ರೋಷನ್ ಕಪ್ಪು ಖುರ್ತಾ ಧರಿಸಿ ಜಬರ್‍ದಸ್ತಾಗಿ ಕಾಣಿಸುತ್ತಿದ್ದಾರೆ. ವಿಕ್ರಂ ವೇದಾ ಚಿತ್ರದ ನಾಯಕ ಹೃತಿಕ್‍ರೋಷನ್‍ಗೆ ಜನ್ಮ ದಿನದ ಶುಭಾಶಯ ಕೋರಿರುವ ನಿರ್ದೇಶಕರಾದ ಪುಷ್ಕರ್ ಹಾಗೂ ಗಾಯತ್ರಿ ಅವರು ಹೃತಿಕ್ ಒಬ್ಬ ಸರ್ವಶ್ರೇಷ್ಠ ನಟನಾಗಿದ್ದು ಅವರೊಂದಿಗೆ ಕೆಲಸ ಮಾಡಿದ್ದು ತುಂಬಾ ಸಂತಸವಾಗಿದೆ, ಅವರ ಜನ್ಮದಿನದ ಅಂಗವಾಗಿ ಚಿತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು ಸೆಪ್ಟೆಂಬರ್ 30, 2022ರಂದು ಸಿನಿಮಾವನ್ನು ಬೆಳ್ಳಿ ತೆರೆಗೆ ತರುತ್ತಿದ್ದೇವೆ ಎಂದು ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿದರು.
ಅಕ್ಟೋಬರ್ 15, 2021 ರ ದಸರಾ ಹಬ್ಬದ ವೇಳೆ ಹೃತಿಕ್ ಹಾಗೂ ಸೈಫ್ ನಟನೆಯ ವಿಕ್ರಂ ವೇದಾ ಚಿತ್ರದ ಮುಹೂರ್ತ ಸಮಾರಂಭವಾಗಿದ್ದು , ಈ ಚಿತ್ರವು ಪ್ರಾಚೀನ ಜಾನಪದ ಕಥೆಯಾದ ಬೈಟಾಲ್‍ನಿಂದ ಸೂರ್ತಿಯಿಂದ ರಚಿಸಲಾಗಿದ್ದು, ಒಬ್ಬ ದರೋಡೆಕೋರ ಹಾಗೂ ಆತನನ್ನು ಕೊಲ್ಲುವ ಕಾರ್ಯಾಚರಣೆಗೆ ನೇಮಕಗೊಂಡ ಇನ್ಸ್‍ಪೆಕ್ಟರ್ ನಡುವೆ ಕೇಂದ್ರಿಕೃತವಾಗಿದೆ.
ವಿಕ್ರಂ ವೇದಾ ಚಿತ್ರವನ್ನು ಭೂಷಣ್‍ಕುಮಾರ್, ಶಶಿಕಾಂತ್ ನಿರ್ಮಿಸುತ್ತಿದ್ದು ಹೃತಿಕ್ ರೋಷನ್, ಸೈಫ್‍ಅಲಿಖಾನ್, ರಾಕಾ ಆಪ್ಟೆ, ಶರೀಬ್ ಹಶ್ಮಿ, ಸತ್ಯದೀಪ್ ಮಿಶ್ರಾ, ಯೋಗಿತಾ ಭಿಯಾನಿ ಮುಂತಾದವರು ನಟಿಸುತ್ತಿದ್ದಾರೆ.
ಪ್ರಾಣಿ ಪ್ರಿಯವಾಗಿರುವ ಸೂಪರ್‍ಸ್ಟಾರ್ ಹೃತಿಕ್ ರೋಷನ್ ತನ್ನ ಹುಟ್ಟುಹಬ್ಬದ ಸಂದರ್ಭದಲ್ಲೇ ಮೌಗ್ಲಿ ಎಂಬ ನಾಯಿಯನ್ನು ದತ್ತುಪಡೆದುಕೊಂಡಿದ್ದಾರೆ.
