ಈದ್ಗಾ ಮೈದಾನದಲ್ಲಿ ಕಾಮಣ್ಣ-ರತಿ ಪ್ರತಿಷ್ಠಾಪನೆಗೆ ಪಟ್ಟು : ಹುಬ್ಬಳ್ಳಿ ಉದ್ವಿಗ್ನ

Social Share

ಹುಬ್ಬಳ್ಳಿ, ಮಾ.9- ನಗರದ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ, ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅವಕಾಶ ನೀಡಿದ್ದ ಹಿನ್ನೆಲೆಯಲ್ಲಿ ಹೋಳಿ ಹಬ್ಬದ ಆಚರಣೆ ಸಂದರ್ಭದಲ್ಲಿ ಕಾಮಣ್ಣ-ರತಿ ಮೂರ್ತಿ ಪ್ರತಿಷ್ಠಾಪಿಸಿ ಹೋಳಿ ಹಬ್ಬಕ್ಕೂ ಅವಕಾಶ ನೀಡಬೇಕು ಎಂದು ನಗರದ ವಿವಿಧ ಸಂಘ-ಸಂಸ್ಥೆಗಳು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ, ಮೇಯರ್‍ಗೆ ಮನವಿ ಸಲ್ಲಿಸಿ ಪಟ್ಟು ಹಿಡಿದಿವೆ.

ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಮೇಯರ್ ಈರೇಶ ಅಂಚಟಗೇರಿ ಪಾಲಿಕೆ ಸಭಾ ನಾಯಕರು, ವಿರೋಧ ಪಕ್ಷದ ನಾಯಕರು, ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸರ್ವ ಪಕ್ಷದ ಸದಸ್ಯರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಚರ್ಚೆ ನಡೆಸಿದರು.

ಸುಮಲತಾ ಅಂಬರೀಷ್ ಬಿಜೆಪಿ ಸೇರ್ಪಡೆಗೆ ಮಹೂರ್ತ ಫಿಕ್ಸ್..?

ಈ ಕುರಿತು ಮಾಹಿತಿ ನೀಡಿದ ಅವರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ರಾಣಿ ಚನ್ನಮ್ಮ ಮೈದಾನ ಗಜಾನನ ಉತ್ಸವ ಮಹಾಮಂಡಳಿ ಸಮಿತಿಗೆ ಕಾಮಣ್ಣ-ರತಿ ಮೂರ್ತಿ ಪ್ರತಿಷ್ಠಾಪಿಸಲು ಅನುಮತಿ ನೀಡುವ ನಿರ್ಣಯ ಕೈಗೊಳ್ಳಲಾಗಿದ್ದು, ಮುಂದಿನ ಕ್ರಮಕ್ಕೆ ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಆದರೆ ರಾತ್ರಿಯಾದರೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಅನುಮತಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡ ಮಹಾಮಂಡಳಿ ಸಮಿತಿ ಸದಸ್ಯರು ವಿಶ್ವ ಹಿಂದೂ ಪರಿಷತ್ ಪ್ರಮುಖರ ಜೊತೆಗೆ ಸೇರಿಕೊಂಡು ಈದ್ಗಾ ಮೈದಾನದ ಎದುರು ಪ್ರತಿಭಟನೆ ನಡೆಸಿದರು. ಹಲಗೆ, ತಮಟೆ ಬಾರಿಸಿ, ಕಾಮಣ್ಣ-ರತಿ ಮೂರ್ತಿ ಪ್ರತಿಷ್ಠಾಪಿಸಿ, ಹೋಳಿ ಹಬ್ಬ ಆಚರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಮುಖಂಡರಾದ ಸಂಜಯ ಬಡಸ್ಕರ್, ಕೆ. ಗೋವರ್ಧನರಾವ್, ವಿಜಯ ಕ್ಷೀರಸಾಗರ, ರಮೇಶ ಕದಂ, ವಿವೇಕ ಎಂ., ರಾಘು ಯಲ್ಲಕ್ಕನವರ, ಶರಣಯ್ಯ ಹಿರೇಮಠ, ರಾಜು ಪಿ., ಅರುಣ ಪ್ರಭು, ಸುನೀಲ ಕಟ್ಟಿಮನಿ, ಗಂಗಾಧರ ಶೆಟ್ಟರ್, ದೀಪಕ ಬೊಮ್ಮಸಾಗರ ಪ್ರತಿಭಟನಾ ನೇತೃತ್ವ ವಹಿಸಿದ್ದರು.

ವಿಶ್ವ ಹಿಂದು ಪರಿಷತ್ ಪ್ರಾಂತೀಯ ಕಾರ್ಯದರ್ಶಿ ಸಂಜಯ ಬಡಸ್ಕರ್ ಮಾತನಾಡಿ, ಈದ್ಗಾ ಮೈದಾನದಲ್ಲಿ ಕಾಮಣ್ಣ ಮೂರ್ತಿ ಪ್ರತಿಷ್ಠಾಪನೆ ಮಾಡಿಯೇ ತೀರುತ್ತೇವೆ.

ನಮ್ಮ ಹೋರಾಟ ಹಿಂದಕ್ಕೆ ಪಡೆಯಲ್ಲ. ಈಗಾಗಲೇ ನಾವು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಕಮಿಷನರ್‍ಗೆ ಈದ್ಗಾ ಮೈದಾನದಲ್ಲಿ ಕಾಮಣ್ಣನ ಪ್ರತಿಷ್ಠಾನಗೆ ಅನುಮತಿ ಕೋರಿ ಮನವಿ ನೀಡಲಾಗಿತ್ತು. ತಮ್ಮ ಎಲ್ಲಾ ನಿಯಮಗಳನ್ನು ಪಾಲಿಸುತ್ತೇವೆ ಎಂದು ಲಿಖಿತವಾಗಿ ಸಹ ತಿಳಿಸಿದ್ದೇವೆ.

ಇದಕ್ಕೆ ಹುಬ್ಬಳ್ಳಿ ಮೇಯರ್ ಅನುಮತಿ ಕೊಟ್ಟಿದ್ದು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಸಹ ನಿರ್ದೇಶನ ಸಹ ಕೊಟಿದ್ದಾರೆ. ಆದರೆ ಆಯುಕ್ತರು ಮಾತ್ರ ಪರವಾನಗಿ ಕೊಡುತ್ತಿಲ್ಲ.

ಕೇಂದ್ರ ಚುನಾವಣಾ ಆಯುಕ್ತರಿಂದ ಚುನಾವಣೆ ಪೂರ್ವ ತಯಾರಿ ಪರಿವೀಕ್ಷಣೆ

ಕಮಿಷನರ್ ಒಂದು ಕೋಮಿನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಒಂದು ವೇಳೆ ನಮಗೆ ಈದ್ಗಾ ಮೈದಾನದಲ್ಲಿ ಪರವಾನಗೆ ನೀಡದಿದ್ದರೆ ಮೈದಾನ ಹೊರಗಡೆ ಆಚರಣೆ ಮಾಡುತ್ತೇವೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಯಾವುದೇ ತೊಂದರೆ ಆಗಲ್ಲ. ಮೋದಿ ಅವರು ಧಾರವಾಡಕ್ಕೆ ಬರುತ್ತಾರೆ, ಹುಬ್ಬಳ್ಳಿಗಲ್ಲ ಎಂದರು.

ಬಿಗಿ ಭದ್ರತೆ: ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಇಲಾಖೆ ಈದ್ಗಾ ಮೈದಾನದಲ್ಲಿ ವಾಹನಗಳ ನಿಲುಗಡೆ ಹಾಗೂ ಸಾರ್ವಜನಿಕರಿಗೆ ಪ್ರವೇಶ ನಿಷೇಸಿದ್ದು, ಬಿಗಿ ಪೊಲೀಸ್ ಬಂದೋಬ¸್ತï ಮಾಡಲಾಗಿದೆ. ಮೈದಾನ ಪ್ರವೇಶಿಸುವ ಎರಡೂ ದ್ವಾರಗಳಿಗೆ ಬೀಗ ಹಾಕಲಾಗಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಮೈದಾನಕ್ಕೆ ತೆರಳಿ ಪರಿಶೀಲನೆ ನಡೆಸಿ, ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ.

Hubballi, Idgah Maidan, Holi, Kamanna-Rati, idol,

Articles You Might Like

Share This Article