ಹುಬ್ಬಳ್ಳಿ ಕೋಮು ಗಲಭೆ : ಮೌಲ್ವಿಯ ಅಸಲಿ ಬಣ್ಣ ಬಟಾ ಬಯಲು

Spread the love

ಹುಬ್ಬಳ್ಳಿ, ಏ.21- ಶನಿವಾರ ರಾತ್ರಿ ನಡೆದ ಹುಬ್ಬಳ್ಳಿ ಗಲಭೆಯಲ್ಲಿ ಕಾಣಿಸಿಕೊಂಡಿದ್ದ ಮೌಲ್ವಿಯ ಅಸಲಿ ರೂಪ ಬಯಲಾಗಿದೆ. ಆತ ಮೌಲ್ವಿಯೇ ಅಲ್ಲ. ಮೌಲ್ವಿಯ ವೇಷ ಧರಿಸಿ ಬಂದಿದ್ದ ಲಾರಿಚಾಲಕ ಎಂಬುದು ಗೊತ್ತಾಗಿದೆ. ಹುಬ್ಬಳ್ಳಿ ಗಲಾಟೆಯಲ್ಲಿ ಮೌಲ್ವಿ ವೇಷದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ಅಸಲಿಗೆ ಮೌಲ್ವಿಯೇ ಅಲ್ಲ. ಆತ ಲಾರಿ ಚಾಲಕ ವಾಸಿಂ. ಈ ಹಿಂದೆ ಲಾರಿ ಚಾಲಕನಾಗಿದ್ದ ಈತ ಮೌಲ್ವಿಯಂತೆ ವೇಷ ಹಾಕಿಕೊಂಡು ಓಡಾಡುತ್ತಿದ್ದ. ಈ ವೇಷ ಹಾಕಿ ತನ್ನದೇ ಆದ ಅಭಿಮಾನಿಗಳನ್ನು ಬೆಳೆಸಿಕೊಂಡಿದ್ದ ಎಂಬ ರಹಸ್ಯ ಬಯಲಾಗಿದೆ.

ಹುಬ್ಬಳ್ಳಿಯಲ್ಲಿನ ಗಲಭೆಯ ಹಿಂದೆ ಮೌಲ್ವಿಯೊಬ್ಬರ ಕೈವಾಡ ಇರುವ ಶಂಕೆ ವ್ಯಕ್ತವಾಗಿತ್ತು. ಗಲಾಟೆಗೂ ಮುನ್ನ ಮೌಲ್ವಿಯೊಬ್ಬರು ಕಮಿಷನರ್ ಅವರ ಇನ್ನೋವಾ ಕಾರಿನ ಮೇಲೆ ಹತ್ತಿ ಭಾಷಣ ಮಾಡಿರುವ ವೀಡಿಯೋ ವೈರಲ್ ಆಗಿತ್ತು. ಅಲ್ಲದೆ, ಇದು ಗಲಭೆಗೆ ಪ್ರಚೋದನೆ ನೀಡಿರುವ ಭಾಷಣ ಎಂದು ಹೇಳಲಾಗಿತ್ತು.

ಪೊಲೀಸ್ ಠಾಣೆ ಅನ್ನೋದನ್ನೂ ನೋಡದೇ ಪ್ರಚೋದನೆ ಕೊಟ್ಟಿದ್ದೇ ಇಷ್ಟು ದೊಡ್ಡ ಗಲಾಟೆಗೆ ಕಾರಣ ಎಂದು ದ್ದಾಲೀಸರು ಹೇಳಿದ್ದರು. ಹುಬ್ಬಳ್ಳಿಯ ದರ್ಗಾವೊಂದರ ಮೌಲ್ವಿ ಎಂಬ ಮಾಹಿತಿ ಸಿಕ್ಕಿತ್ತು. ಈಗ ಈತನ ಬಗ್ಗೆ ತನಿಖೆ ನಡೆಸುತ್ತಿದ್ದಾಗ ವಾಸೀಂ ಮೌಲ್ವಿಯೇ ಅಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ಅಲ್ಲದೆ, ಹುಬ್ಬಳ್ಳಿ ಧಾರವಾಡ ಮಹಾನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅಲ್ತಾಫ್ ಕಿತ್ತೂರು ಸಹ ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದಕ್ಕಿಂತ ಇನ್ನೊಂದು ಮಹತ್ವದ ಮಾಹಿತಿ ಹೊರಬಿದ್ದಿದ್ದು, ಕಾಂಗ್ರೆಸ್ ಮಹಾನಗರ ಪಾಲಿಕೆಯ ಮಾಜಿ ಸದಸ್ಯರೊಬ್ಬರು ಸಹ ಗಲಾಟೆಗೆ ಕುಮ್ಮಕ್ಕು ನೀಡಿದ್ದಾರೆ ಎನ್ನಲಾಗಿದೆ.

Facebook Comments