ಬಲವಂತದ ಮತಾಂತರ ವಿಚಾರಕ್ಕೆ ದಂಪತಿ ನಡುವೆ ಬಿರುಕು

Social Share

ಹುಬ್ಬಳ್ಳಿ, ನ.16- ವಾಣಿಜ್ಯ ನಗರಿಯಲ್ಲಿ ಮತ್ತೆ ಮತಾಂತರ ವಿವಾದ ಕೇಳಿ ಬಂದಿದ್ದು, ಹಳೆ ಹುಬ್ಬಳ್ಳಿಯಲ್ಲಿ ಶಿಕ್ಕಲಿಗಾರ ಸಮುದಾಯವನ್ನು ಗುರಿಯಾಗಿಸಿಕೊಂಡು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಒತ್ತಡ ಹಾಕುತ್ತಿದ್ದು, ಈ ವಿವಾದ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹಳೇ ಹುಬ್ಬಳ್ಳಿಯ ಶಿಕ್ಕಲಿಗಾರ ಸಮುದಾಯದ ಒಂದು ಕುಟುಂಬದ ನಡುವೆ ಮತಾಂತರದ ವಿಚಾರವಾಗಿ ದಂಪತಿ ನಡುವೆ ಬಿರುಕು ಮೂಡಿದೆ. ಕ್ರೈಸ್ತ ಧರ್ಮಕ್ಕೆ ಮತಾಂತರವಾಗುವಂತೆ ಪತಿಗೆ ಪತ್ನಿ ಒತ್ತಡ ಹಾಕುತ್ತಿದ್ದು, ಮತಾಂತರವಾಗದಿದ್ದರೆ ಸಂಸಾರ ಮಾಡುವುದಿಲ್ಲವೆಂದು ಬೆದರಿಕೆ ಹಾಕಿದ್ದು, ಇದೇ ವಿಚಾರವಾಗಿ ಹಲವಾರು ಬಾರಿ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

BIG NEWS: ನ್ಯಾಟೊ ಸದಸ್ಯ ಪೊಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ

ದಂಪತಿ ಪ್ರತಿ ಬಾರಿ ಪೊಲೀಸ್ ಠಾಣೆಗೆ ಹೋದಾಗ ಅಲ್ಲಿನ ಸಿಬ್ಬಂದಿ ರಾಜಿ ಸಂದಾನ ಮಾಡಿ ಕಳುಹಿಸುತ್ತಿದ್ದರು. ಮನೆಯಲ್ಲಿ ಪತ್ನಿ ಕ್ರೈಸ್ತ ಸಮುದಾಯಕ್ಕೆ ಮತಾಂತರವಾಗುವಂತೆ ಹೆಚ್ಚಿನ ಒತ್ತಡ ಹಾಕುತ್ತಿದ್ದಾಳೆ ಎಂದು ಸಮುದಾಯದ ಮುಖಂಡರಿಗೆ ಆಕೆಯ ಪತಿ ಗಮನಕ್ಕೆ ತಂದಿದ್ದು, ಇದನ್ನು ವಿರೋಧಿಸಿ ಪೊಲೀಸ್ ಠಾಣೆ ಎದುರು ಶಿಕ್ಕಲಿಗಾರ ಸಮುದಾಯ ಪ್ರತಿಭಟನೆ ನಡೆಸಿತು.

ಶ್ರದ್ದಾ ಹತ್ಯೆ ಮಾಸುವ ಮುನ್ನವೇ ಮತ್ತೊಂದು ವಿಕೃತ ಘಟನೆ ಬೆಳಕಿಗೆ..!

ಪ್ರಕರಣ ಸಂಬಂಧ ಶಿಕ್ಕಲಿಗಾರ ಸಮುದಾಯದ ಮದನ್ ಬುಗುಡಿ ಸೇರಿದಂತೆ 15 ಮಂದಿ ವಿರುದ್ಧ ದೂರು ದಾಖಲಾಗಿದೆ. ಮದನ್ ಬುಗುಡಿ ರೌಡಿ ಶೀಟರ್ ಎಂದು ಪೊಲೀಸರು ತಿಳಿಸಿದ್ದಾರೆ.

Articles You Might Like

Share This Article