ಹುಬ್ಬಳ್ಳಿ ಇಸ್ಲಾಂ ಮತಾಂತರ ಪ್ರಕರಣ ಬೆಂಗಳೂರಿಗೆ ಶಿಫ್ಟ್..?

Social Share

ಹುಬ್ಬಳ್ಳಿ,ಸೆ.26- ಬಲವಂತದಿಂದ ಮರ್ಮಾಂಗದ ತುದಿ ಕತ್ತರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಪ್ರಕರಣ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಬಲವಂತದ ಮತಾಂತರಕ್ಕೆ ಒಳಗಾದ ಶ್ರೀಧರ ಗಂಗಾಧರ ಅಲಿಯಾಸ್ ಸಲ್ಮಾನ್ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯುವಕ ಶ್ರೀಧರ ಗಂಗಾಧರನನ್ನು ಬಲವಂತವಾಗಿ ಮತಾಂತರ ಮಾಡಿರುವುದು ಬೆಂಗಳೂರಿನಲ್ಲಿಯೇ. ಹೀಗಾಗಿ ಈ ಪ್ರಕರಣವನ್ನು ಬೆಂಗಳೂರಿನ ಬನಶಂಕರಿ ಠಾಣೆಗೆ ಸ್ಥಳಾಂತರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಪ್ರಕರಣ ಬೆಂಗಳೂರು ಠಾಣೆಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಶ್ರೀಧರ ಗಂಗಾಧರ ಅಲಿಯಾಸ್ ಸಲ್ಮಾನ್ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ತನಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಯಾವ ರೀತಿ ಆಸೆ-ಆಮಿಷ ತೋರಿಸಲಾಯಿತು. ಯಾವ ರೀತಿ ತನ್ನ ಬ್ರೇನ್ವಾಶ್ ಮಾಡಿದ್ದಾರೆ. ಯಾವ ರೀತಿ ತನಗೆ ಹಿಂಸೆ ನೀಡಿದ್ದಾರೆ. ತಾನು ಹುಬ್ಬಳ್ಳಿಗೆ ಹೇಗೆ ಬಂದೆ ಎಂಬ ಬಗ್ಗೆ ವಿಡಿಯೋದಲ್ಲಿ ಆತ ವಿವರಿಸಿದ್ದಾನೆ.

ಬಲವಂತದ ಲವ್ ಜಿಹಾದ್ ಪ್ರಕರಣ: ಶ್ರೀಧರ್ ಅಲಿಯಾಸ್ ಸಲ್ಮಾನ್ ಮಾತನಾಡಿದ ವಿಡಿಯೋದಲ್ಲಿ, ನಾನು ಮೂಲತಃ ಮಂಡ್ಯ ಜಿಲ್ಲೆ ಮದ್ದೂರ ತಾಲೂಕಿನ ಯಡುವಿನಳ್ಳಿ ಗ್ರಾಮದ ನಿವಾಸಿ. ತಂದೆ ತಾಯಿ ಇಬ್ಬರು ಮೃತಪಟ್ಟಿದ್ದಾರೆ. ತಂದೆ ತಾಯಿ ಕಳೆದುಕೊಂಡ ನಾನು ಆಸ್ತಿ ವಿವಾದದಿಂದ ಬೆಸತ್ತು ಸೈಬರ್ ಸೆಂಟರ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ.

ಆಗ ನನಗೆ ಮಂಡ್ಯ ಜಿಲ್ಲೆ ಕೊಪ್ಪದಲ್ಲಿ ಅತ್ತಾವರ್ ರೆಹಮಾನ್ ಪರಿಚಯ ಆಗುತ್ತಾನೆ. ಆತ ಟೀ ಮಾರ್ತೀರ್ತಾನೆ, ನಾನು ಕಷ್ಟದಲ್ಲಿ ಇದೀನಿ ಎಂದು ಹೇಳಿಕೊಂಡಾಗ ಅತ್ತಾವರ ಒಬ್ಬರ ಬಳಿ ಕರೆದುಕೊಂಡು ಹೋಗ್ತಾನೆ. ಒಳ್ಳೆದಾಗತ್ತೆ ಎಂದು ಮದುವೆಗೆ ಕರೆದುಕೊಂಡು ಹೋಗ್ತಾರೆ. ಅಲ್ಲಿ ಇಲಿಯಾಸ್ ನಗರದಲ್ಲಿ ಡಾ. ರಾಫಿಸಾಬ್ ಬಳಿ ಕರೆದುಕೊಂಡು ಹೋಗ್ತಾರೆ. ದೊಡ್ಡ ಗುರುಗಳ ಇಸ್ಲಾಂ ಧರ್ಮ ಹಂಗೆ ಹಿಂಗೆ ಅಂತಾ ನನಗೆ ಬ್ರೇನ್ವಾಷ್ ಮಾಡ್ತಾರೆ. ಆಗ ನಾನು ಇಸ್ಲಾಂ ಧರ್ಮದ ಬಗ್ಗೆ ಆಕರ್ಷಿತನಾಗ್ತೀನಿ ಎಂದು ನೋವು ಬಿಚ್ಚಿಟ್ಟಿದ್ದಾರೆ.

ಇಲಿಯಾಸ್ ನಗರದಲ್ಲಿ ಖಾಲಿದ್ ಡಾಕ್ಟರ್, ನದೀಮ್, ನಯಾಜ್ ಪಾಷಾ ಬಳಿ ನನ್ನ ಕರೆದುಕೊಂಡು ಹೋಗ್ತಾರೆ. ಅಲ್ಲಿ ಖತ್ನಾ ಮಾಡಸ್ತಾರೆ, ಪ್ರೀತಿ ವಿಶ್ವಾಸದಿಂದ ನೋಡಿಕೊಂಡು ಖತ್ನಾ ಮಾಡಸ್ತಾರೆ. ನಂತರ ಮಟನ್ ತಿನ್ನೋಕೆ ಹೇಳ್ತಾರೆ, ನನಗೆ ಇಷ್ಟ ಇಲ್ಲ ಅಂದ್ರೆ ನನಗೆ ಧಮ್ಕಿ ಹಾಕ್ತಾರೆ. ರಿವಾಲ್ವರ್ ಕೊಟ್ಟು ಫೋಟೋ ತಗೆದುಕೊಂಡು ಟೆರರಿಸ್ಟ್ ಎಂದು ಅಪ್ಲೊಡ್ ಮಾಡ್ತೀವಿ ಎಂದು ಬ್ಲಾಕ್ ಮೇಲ್ ಮಾಡ್ತಾರೆ ಎಂದಿದ್ದಾನೆ.

ಟೀಮ್ ಮಾಡಿ ನಮಾಜ್ ಮತ್ತು ಕುರಾನ್ ಕಲಿಯೋಕೆ ಒಂದುವರೆ ತಿಂಗಳು ತಿರುಪತಿಗೆ ಕಳಿಸ್ತಾರೆ. ಅವರ ದೇವರು ಬಿಟ್ಟು ಬೇರೆ ಯಾವ ದೇವರನ್ನು ಪೂಜೆ ಮಾಡದಂತೆ ನನಗೆ ಆರ್ಡರ್ ಮಾಡ್ತಾರೆ. ನಯಾಜ್ ಪಾಶಾ ಮಸೀದಿಯ ಪ್ರೆಸಿಡೆಂಟ್ ಆಗಿರ್ತಾರೆ. ಸುಮಾರು ಐವತ್ತು ಜನರನ್ನು ಮುಸ್ಲಿಂ ಆಗಿ ಕನ್ವರ್ಟ್ ಮಾಡಿದ್ದಾರೆ.

ನಂತರ ಅವರಿಗೆ ಹುಡುಗರು ಮತ್ತು ಹುಡುಗಿಯರನ್ನು ಇಸ್ಮಾಂ ಧರ್ಮಕ್ಕೆ ಕನ್ವರ್ಟ್ ಮಾಡಲು ಹೇಳುತ್ತಾರೆ. ಹುಡುಗ- ಹುಡಗಿಯರನ್ನು ಕನ್ವರ್ಟ್ ಮಾಡೋಕೆ ಟಾರ್ಗೆಟ್ ಕೊಡ್ತಾರೆ. ನನಗೆ ಹುಡುಗಿ ಟಾರ್ಗೆಟ್ ಕೊಟ್ಟಿದ್ದರು. ಅವರೇ ಹುಬ್ಬಳ್ಳಿ ಹುಡುಗಿಯ ಡಿಟೇಲ್ ಕೊಟ್ಟಿದ್ದು, ಐದು ಸಾವಿರ ಹಣ ಕೊಟ್ಟು ಕಳಿಸಿದ್ದರು ಎಂದ ಶ್ರೀಧರ್ ಅಲಿಯಾಸ್ ಸಲ್ಮಾನ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

Articles You Might Like

Share This Article