ಹುಬ್ಬಳ್ಳಿ ಗಲಭೆ : ಕಾರ್ಯ ನಿರ್ವಹಿಸುತ್ತಿರಲಿಲ್ಲ ಪ್ರಮುಖ ಸಾಕ್ಷಿಯಾಗುತ್ತಿದ್ದ ಸಿಸಿಟಿವಿಗಳು

ಹುಬ್ಬಳ್ಳಿ, ಏ.19- ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ಆವರಣದಲ್ಲಿ ನಡೆದ ಕಲ್ಲುತೂರಾಟ ಪ್ರಕರಣದ ಸಂಬಂಧ ಪೊಲೀಸರು ಈಗಾಗಲೇ ಆರೋಪಿಗಳನ್ನು ಬಂಧಿಸುತ್ತಿದ್ದಾರೆ. ಈ ಹಿಂಸಾಚಾರಕ್ಕೆ ಪ್ರಮುಖ ಸಾಕ್ಷಿಯಾಗಿದ್ದ ಸಿಸಿಟಿವಿಗಳನ್ನು ಪೊಲೀಸರು ತನಿಖೆಗೆ ಬಳಸಿದ್ದು, ಈ ನಡುವೆ ಹಲವು ಕಡೆಗಳಲ್ಲಿ ಸಿಸಿ ಟಿವಿಗಳಿದ್ದರೂ ಕಾರ್ಯ ನಿರ್ವಹಿಸದೆ ಇರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.

ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ದುಷ್ಕರ್ಮಿಗಳ ಬಂಧನಕ್ಕೆ ಯೋಜನೆ ರೂಪಿಸಿದ್ದ ಪೊಲೀಸರಿಗೆ ನಿರಾಶೆಯಾಗಿದೆ. 2000 ಗಲಭೆಕೋರರ ಪೈಕಿ ಈವರೆಗೆ ಕೇವಲ 104 ಜನರನ್ನು ಮಾತ್ರ ಬಂಧಿಸಲಾಗಿದೆ. ಹಲವೆಡೆ ಸಿಸಿಟಿವಿ ಇದ್ದರೂ ಕಾರ್ಯನಿರ್ವಹಿಸದೆ ಇರುವುದೇ ಪೊಲೀಸರ ತನಿಖೆಗೆ ಅಡ್ಡಿಯುಂಟಾಗಿದೆ.

ಕಲ್ಲು ತೂರಾಟ ನಡೆದ ಹಳೆ ಹುಬ್ಬಳ್ಳಿಯ ಸುತ್ತಮುತ್ತ ಅಳವಡಿಸಿದ್ದ 48 ಸಿಸಿ ಕ್ಯಾಮೆರಾಗಳ ಪೈಕಿ ಕೇವಲ 21 ಸಿಸಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳ ಪೈಕಿ 7 ಕ್ಯಾಮೆರಾಗಳು ನಾಪತ್ತೆಯಾಗಿದ್ದು, 20 ಕ್ಯಾಮೆರಾಗಳು ನಿಷ್ಕ್ರಿಯಗೊಂಡಿವೆ. ಇದರಿಂದ ಆರೋಪಿಗಳ ಬಂಧನಕ್ಕೆ ಅಡ್ಡಿಯಾಗಿದೆ.

ಸಿಸಿಟಿವಿಯ ವಿವರಗಳು ಇನ್ನೂ ಸಿಸಿಟಿವಿ ಕ್ಯಾಮೆರಾ ನಿರ್ವಹಣೆ ಹೊಣೆ ಹೊತ್ತ ವರ್ಟಿP್ಸï ಏಜೆನ್ಸಿಯ ಹೊಣೆಗೇಡಿತನದಿಂದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರೇಟ್ ಪೇಚಿಗೆ ಸಿಲುಕಿದಂತಾಗಿದೆ. ಏಜೆನ್ಸಿಯ ಹೊಣಗೇಡಿತನದಿಂದ ಇಂತಹದ್ದೊಂದು ಪ್ರಕರಣವನ್ನು ಬೇಧಿಸಲು ಪೊಲೀಸ್ ಇಲಾಖೆ ಪರದಾಡುವಂತಾಗಿದೆ.