ಹುಚ್ಚ ವೆಂಕಟ್ ಪ್ರೆಸ್ ಮೀಟ್ ಮಾಡಿದ್ದೇಕೆ..?

Social Share

ಬೆಂಗಳೂರು, ಜ.11- ನನ್ನ ಜೀವನದಲ್ಲಿ ಸುಮಾರು ಏಳು ಬೀಳುಗಳನ್ನು ಕಂಡಿದ್ದೇನೆ. ಹಿಂದೆ ಆದ ಕೆಲವು ಲೋಪಗಳನ್ನು ಸರಿಪಡಿಸಿ ಮುಂಬರುವ ದಿನಗಳಲ್ಲಿ ಹೊಸ ಆಲೋಚನೆಗಳೊಂದಿಗೆ ಮುನ್ನಡೆಯಲು ನಿರ್ಧರಿಸಿದ್ದೇನೆ ಎಂದು ನಟ, ನಿರ್ದೇಶಕ, ನಿರ್ಮಾಪಕ ಹುಚ್ಚ ವೆಂಕಟ್ ಹೇಳಿದರು.ಪ್ರೆಸ್‍ಕ್ಲಬ್ ಆವರಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಗೆದ್ದಾಗ ಸಂತೋಷಪಟ್ಟು, ಬಿದ್ದಾಗ ಕೈಯೆತ್ತಿ ನಿಲ್ಲಿಸಿದ ನನ್ನ ಅಭಿಮಾನಿಗಳು ಮತ್ತು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಲು ಇಂದು ಮಾಧ್ಯಮದ ಮುಂದೆ ಬಂದಿದ್ದೇನೆ ಎಂದರು.
ನನ್ನಲ್ಲಿರುವ ಕೋಪವನ್ನು ಬಿಟ್ಟು ಸೌಮ್ಯ ಸ್ವಭಾವವನ್ನು ಅಳವಡಿಸಿ ಕೊಳ್ಳಲು ಪ್ರಯತ್ನ ಪಡುತ್ತಿದ್ದೇನೆ ಈ ಕಾರಣದಿಂದಾಗಿ ಸುಮಾರು ಚಿತ್ರಗಳಲ್ಲಿ ಗೆಸ್ಟ್ ಅಪಿಯರೆನ್ಸ್ ಪಾತ್ರಗಳು ಸಿಗುತ್ತಿದ್ದು ನನ್ನ ಜೀವನ ದಲ್ಲಿ ಉತ್ತಮ ಬೆಳವಣಿಗೆಗಳು ಆಗುತ್ತಿವೆ. ಇತ್ತೀಚಿಗೆ ಅಂತಿಮ ಸತ್ಯ ಚಿತ್ರಕ್ಕೆ ಸಹಿ ಹಾಕಿದ್ದೇನೆ ಎಂದರು.
ನನ್ನ ನಡು ವಳಿಕೆಗಳನ್ನು ಬದ ಲಾಯಿಸಿಕೊಂಡು ಸಮಾಜದ ಜೊತೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕೆಂಬ ಆಸೆ ನನ್ನದು. ಹಾಗೂ ಮುಂಬರುವ ದಿನಗಳಲ್ಲಿ ಹುಚ್ಚ ವೆಂಕಟ್ ಬ್ಯಾನರಡಿಯಲಿ ಉತ್ತಮ ಚಿತ್ರಗಳನ್ನು ನಿರ್ದೇಶನ ಮಾಡಬೇಕೆಂಬ ಗುರಿ ಇದೆ ಎಂದು ಭವಿಷ್ಯದ ಕನಸುಗಳು ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಮದುವೆ ಯಾವಾಗ? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ, ನನ್ನ ಜೀವನದಲ್ಲಿ ಮದುವೆ ಇಲ್ಲ. ಹಿಂದೆ ಪ್ರೀತಿ ಪ್ರೇಮ ಆಗಿದ್ದು ಸಹಜ. ಕಾರಣಾಂತಗಳಿಂದ ಅದು ದೂರವಾಯಿತು ಈಗ ಮತ್ತೊಮ್ಮೆ ಪ್ರೀತಿಗೆ ಮನಸೋಲುವ ಪ್ರಶ್ನೆಯೇ ಇಲ್ಲ ಏನಿದ್ದರೂ ನನ್ನ ವೃತ್ತಿಯ ಕಡೆಗೆ ನನ್ನ ಗಮನ ಯಾರೇ ಬಂದರೂ ಹೊಸ ಸಿನಿಮಾಗಳಲ್ಲಿ ಅಭಿನಯಿಸಲು ನಾನು ಸಿದ್ಧ ಎಂದರು.

Articles You Might Like

Share This Article