ದಿಪು, ಜ 23 -ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿ ಸಂಘಟನೆ ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಬೃಹತ್ ಸಂಗ್ರಹವನ್ನು ದಿಫು-ಲುಮ್ಡಿಂಗ್ ಬಳಿ ಇಂದು ಬೆಳ್ಳಿಗ್ಗೆ ಪೊಲೀಸರು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ದಿಫು-ಲುಮ್ಡಿಂಗ್ ರಸ್ತೆಯ ಸಸ್ಯೋ ದ್ಯಾನದ ಹಿಂಭಾಗದ ಕಾಡಿನಲ್ಲಿ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಹೂತು ಅದರ ಮೇಲೆ ಅನುಮಾನ ಬರದ ರೀತಿ ಶೀಟ್ ಕಾಕಿ ಗಿಡ ಬೆಳೆಸಲಾಗಿತ್ತು ಎಂದು ಡಿಫು ಪೊಲೀಸ್‍ಠಾಣ ಅಧೀಕಾರಿಗಳು ಇಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್‍ನಲ್ಲಿ ಭದ್ರತಾ ಪಡೆಗಳೊಂದಿಗಿನ ಗುಂಡಿನ ಚಕಮಕಿಯಲ್ಲಿ ಹತನಾದ ಕಾರ್ಬಿ ಡೆಮಾಕ್ರಟಿಕ್ ಲಿಬರೇಶನ್ ಫ್ರಂಟ್ (ಕೆಡಿಎಲïಎಫï) ಸ್ವಯಂ-ಘೋಷಿತ ಅಧ್ಯಕ್ಷ ಜಾಕ್ಸನ್ ರೊಂಗ್ಹಾಂಗ್ ಅಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಬಚ್ಚಿಟ್ಟಿರಬಹುದು ನಮಗೆ ಸಿಕ್ಕ ಸುಳಿವಿನ ಮೇರೆಗೆಕಾರ್ಯಚರನೆ ನಡೆಸಲಾಗಿದೆ.
ಘಟನೆಗೆ ಸಂಬಂಸಿದಂತೆ ಇದುವರೆಗೆ ಯಾವುದೇ ಬಂಧನವಾಗಿಲ್ಲ ಎಂದು ಅವರು ಅಧೀಕಾರಿಗಳು ತಿಳಿಸಿದ್ದಾರೆ.ವಶಪಡಿಸಿಕೊಂಡಿರುವುದರಲ್ಲಿ 22 ರೈಫಲ್ಸ್ , .303 ರೈಫಲ್ಸ್, ಕೈಯಿಂದ ತಯಾರಿಸಿದ ಪಿಸ್ತೂಲ್ ಗ್ರೆನೇಡ್‍ಗಳು ಮತ್ತು ಡಿಟೋನೇಟರ್‍ಗಳು ಮತ್ತು ವಿವಿಧ ರೀತಿಯ ಸೋಟಕಗಳು ಸೇರಿವೆ
