ಚಿಕ್ಕಮಗಳೂರು, ಫೆ.24- ಪ್ರತ್ಯೇಕ ಆರು ಪ್ರಕರಣಗಳಲ್ಲಿ ಬಂದೂಕು ದುರಸ್ತಿ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿದ ಪೊಲೀಸರು ಪರವಾನಗಿ ಇಲ್ಲದ 47 ಅಕ್ರಮ ಬಂದೂಕು ಹಾಗೂ 2 ರಿವಾಲ್ವಾರ್ಗಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.
ಬಾಳೆಹೊನ್ನೂರು ಮತ್ತು ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಿಪೇರಿ ಮಾಡುತ್ತಿದ್ದ ಕೊಪ್ಪ ತಾಲೂಕು ಅಡುಗೆ ಬೈಲ್ ಗ್ರಾಮದ ನೇತ್ರಕೊಂಡ ಕೂಲಿ ಲೈನ್ನ ಸದಾಶಿವ ಆಚಾರಿ, ಮುಡಿಗೆರೆ ತಾಲೂಕು ಕೆಳಗೂರು ಗ್ರಾಮದ ಸುಧಾಕರ ಆಚಾರ್, ಎನ್ಆರ್ಪುರ ಬಾಳೆಹೊನ್ನೂರು ರಂಬಾಪುರಿ ಮಠ ರಸ್ತೆಯ ರಾಮಚಂದ್ರ ಆಚಾರ್ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಈ ಮೂವರಿಂದ 47 ಬಂದೂಕು ಎರಡು ರಿವಾಲ್ವರ್, 24 ಬಂದೂಕು ನಲಿಕೆ, 22 ರೈಫಲ್ ಗುಂಡು, 40 ಭಕ್ಷಟ್ ಗುಂಡು, 15 ಕಾರ್ಟೆಜಸ್ ಮತ್ತು ಏಳು ಮರದ ತುಂಡುಗಳನ್ನು ವಶಪಡಿಸಿಕೊಳ್ಳ ಲಾಗಿದೆ.
ಇತ್ತೀಚಿಗೆ ಅನಕೃತ ಬಂದೂಕುಗಳಿಂದ ಶೂಟ್ ಪ್ರಕರಣಗಳು ನಡೆದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಉಮಾ ಪ್ರಶಾಂತ್ ಮಲೆನಾಡಿನಲ್ಲಿ ಶಿಕಾರಿಗೆ ಉಪಯೋಗಿಸುವ ಅಕ್ರಮ ಬಂದೂಕುಗಳಿಂದ ಮಾನವನ ಪ್ರಾಣ ತೆಗೆಯಲು ಮುಂದಾಗಿರುವುದನ್ನು ಅರಿತು ಬಂದೂಕುಗಳ ಪರಿಶೀಲನೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.
ಮುಖ್ಯ ಅಧಿಕಾರಿಗಳ ಸೂಚನೆ ಮೇರೆಗೆ ಬಾಳೆಹೊನ್ನೂರು ಹಾಗೂ ಬಾಳೂರು ಪೊಲೀಸರು ತನಿಖೆ ನಡೆಸಿ ಸದಾಶಿವ ಆಚಾರ್ಯ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆತ ನೀಡಿದ ಸುಳಿವು ಆಧರಿಸಿ ಕಳಸ ಮತ್ತು ಎನ್ಆರ್ಪುರ ಠಾಣಾ ವ್ಯಾಪ್ತಿಯಲ್ಲಿ ಮೂರು ಪರವಾನಗಿ ಇಲ್ಲದ ಬಂದೂಕು ವಶಪಡಿಸಿಕೊಳ್ಳಲಾಗಿದೆ.
ಕಳಸ ಮಾವಿನಕೆರೆ ಹುಳುವಳ್ಳಿ ಸಂಪಿಗೆ ಗದ್ದೆಯ ಗ್ರಾಮದ ಸುಂದರ ಇದೇ ಗ್ರಾಮದ ಗಂಗಾಧರ ಹಾಗೂ ಶಿವರಾಜ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
#hugequantity, #illegalfirearms, #found, #chikkamagalur,