ಮಾನವ ಹಕ್ಕು ಅಧಿಕಾರಿಗಳ ಹೆಸರಿನಲ್ಲಿ ವಸೂಲಿಗಿಳಿದಿದ್ದ 7 ವಂಚಕರ ಬಂಧನ

Social Share

ಬೆಂಗಳೂರು, ನ.18- ಹ್ಯೂಮನ್ ರೈಟ್ಸ್ ಆಫೀಸರ್ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಏಳು ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕಾಶ್ ಮೂರ್ತಿ, ಪ್ರದೀಪ್, ದ್ರುವರಾಜ್, ರಮ್ಯ, ಸುಶ್ಮಿತಾ, ಜಯಲಕ್ಷ್ಮಿ ಮತ್ತು ಇಂದ್ರ ಬಂಧಿತ ಆರೋಪಿಗಳು.

ಬಂಧಿತರಿಂದ ಹುಂಡೈ ಕಾರು ಹಾಗೂ ಎರಡು ಸಾವಿರ ಹಣ ವಶಪಡಿಸಿಕೊಂಡಿದ್ದಾರೆ. ನ.14ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಭದ್ರಪ್ಪ ಲೇಔಟ್, ಮಾತಾಜಿ ಹೋಮ್ ಅಪ್ಲೈಯನ್ಸ್ ಅಂಗಡಿಗೆ ಹುಂಡೈ ಕಾರಿನಲ್ಲಿ ಬಂದ ಏಳು ಮಂದಿ ಆರೋಪಿಗಳು ಹ್ಯೂಮನ್ ರೈಟ್ಸ್ ಆಫೀಸರ್ ಎಂದು ಪರಿಚಯಿಸಿಕೊಂಡಿದ್ದಾರೆ.

ನಕಲಿ ಮತದಾರರನ್ನು ಮಾತ್ರ ಪಟ್ಟಿಯಿಂದ ಕೈಬಿಡಲಾಗಿದೆ : ಬಿಬಿಎಂಪಿ ವಿಶೇಷ ಆಯುಕ್ತ

ನಿಮ್ಮ ಶಾಪ್‍ನಲ್ಲಿ ಗ್ಯಾಸ್ ಸಿಲಿಂಡರ್‍ಗಳನ್ನು ಮಾರಾಟ ಮಾಡುತ್ತಿದ್ದೀರ, ನಿಮ್ಮ ಮೇಲೆ ಕೇಸ್ ಹಾಕುತ್ತೇವೆ ಎಂದು ಬೆದರಿಸಿ ಅವರಿಂದ ಎರಡು ಸಾವಿರ ಹಣ ಪಡೆದುಕೊಂಡಿದ್ದಾರೆ. ನಂತರ ನರೇಶ್ ಜಿ ಪಟೇಲ್ ಎಂಬುವರಿಗೆ ಸೇರಿದ ರಾಜಲಕ್ಷ್ಮೀ ಪ್ಯಾನ್ಸಿ ಸ್ಟೋರ್ ಮತ್ತು ಸುವಾಲಾಲ್ ಎಂಬುವವರ ಬಾಲಾಜಿ ಹೋಂ ಅಪ್ಲೈಯನ್ಸ್‍ಗೂ ಹೋಗಿ ಹೆದರಿಸಿ ಅವರಿಂದ 5 ಸಾವಿರ ಹಣ ಪಡೆದುಕೊಂಡು ಹೋಗಿರುವ ಬಗ್ಗೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮತದಾರರ ಪಟ್ಟಿಯಿಂದ ಸಾವಿರಾರು ಮಂದಿಯ ಹೆಸರು ನಾಪತ್ತೆ : ಚಿಲುಮೆ ಕೈವಾಡ ಶಂಕೆ

ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಅನೂಪ್ ಶೆಟ್ಟಿ, ಮಾರ್ಗದರ್ಶನದಲ್ಲಿ ಯಲಹಂಕ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಮಂಜುನಾಥ್ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ರಾಜಣ್ಣ ಅವರನ್ನೊಳಗೊಂಡ ಸಿಬ್ಬಂದಿ ತಂಡ ತನಿಖೆ ಕೈಗೊಂಡು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆ ಹಚ್ಚಿ ಏಳು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

human, rights, money, Collection, 7 Arrest,

Articles You Might Like

Share This Article