ಕ್ಯಿವ್, ಮಾ.2- ಉಕ್ರೇನ್‍ಲ್ಲಿ ಯುದ್ಧ ನಿರತವಾಗಿರುವ ರಷ್ಯಾ ಪಡೆಗಳು ಪಾಳು ಬಿದ್ದ ಪ್ರದೇಶಗಳಲ್ಲಿರುವ ದಿನಸಿ ಅಂಗಡಿಗಳನ್ನು ದೋಚುವ ಪ್ರವೃತ್ತಿ ಮುಂದುವರೆಸಿವೆ. ಕಳೆದ ಆರು ದಿನಗಳಿಂದಲೂ ಉಕ್ರೇನ್ ಒಳ ಭಾಗದಲ್ಲಿ ಸಿಲುಕಿರುವ ರಷ್ಯಾ ಪಡೆಗಳಿಗೆ ಊಟ, ನೀರಿನ ಸರಬರಾಜು ವ್ಯತ್ಯಯವಾಗುತ್ತಿದೆ. ಹೀಗಾಗಿ ಸುತ್ತಮುತ್ತಲಿನ ಅಂಗಡಿಗಳನ್ನು ದೋಚಿ ದಿನಸಿ ಹಾಗೂ ಜೀವನವಶ್ಯಕ ವಸ್ತುಗಳನ್ನು ರಷ್ಯಾ ಯೋಧರು ಕದ್ದೊಯ್ಯುತ್ತಿದ್ದಾರೆ.
ಸೆಲ್ ದಾಳಿಯಿಂದ ಕ್ಯಿವ್‍ನ ಬಹುತೇಕ ಭಾಗಗಳ ಜನ ಹೆದರಿ ಮನೆ ಬಿಟ್ಟು ನೆಲಮಹಡಿಯ ಬಂಕರ್‍ಗಳಲ್ಲಿ ಅಡಗಿ ಕುಳಿತಿದ್ದಾರೆ. ನಿರಂತರ ದಾಳಿಯಿಂದಾಗಿ ಯಾರೂ ಹೊರಗೆ ಬರುತ್ತಿಲ್ಲ. ಇದರಿಂದ ನಿರ್ಜನವಾತಾವರಣ ನಿರ್ಮಾಣವಾಗಿದ್ದು, ಸಮಯ ಸಾಧಿಸಿ ರಷ್ಯಾ ಯೋಧರು ಅಗತ್ಯ ದಿನಸಿಗಳನ್ನು ಕದ್ದೊಯ್ಯುತ್ತಿದ್ದಾರೆ. ಈ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಹಂತ ಹಂತವಾಗಿ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡುತ್ತಿದೆ.
