ಮನೆ ವಿಚಾರಕ್ಕಾಗಿ ಪತ್ನಿಯನ್ನು ಕೊಂದಿದ್ದ ಪತಿ ಬಂಧನ

Social Share

ಬೆಂಗಳೂರು, ಫೆ.3- ಮನೆಯನ್ನು ತನ್ನ ಹೆಸರಿಗೆ ಬರೆದು ಕೊಡಲಿಲ್ಲವೆಂಬ ಕಾರಣಕ್ಕೆ ಪತ್ನಿಯನ್ನು ಕೊಲೆ ಮಾಡಿದ್ದ ಪತಿಯನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂಲತ ಮಂಡ್ಯ ತಾಲೂಕು ಕೆರಗೋಡು ಹೋಬಳಿಯ ಹೊನ್ನನಾಯಕನಹಳ್ಳಿ ನಿವಾಸಿ ರಘು(38) ಬಂಧಿತ ಆರೋಪಿ.
ಆಟೋ ಚಾಲಕ ವೃತ್ತಿ ಮಾಡುವ ರಘು, ಗಾಮೆರ್ಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಭಾರತಿ ಎಂಬುವರನ್ನು ಪ್ರೀತಿಸಿ 14 ವರ್ಷದ ಹಿಂದೆ ಮದುವೆಯಾಗಿದ್ದು , ದಂಪತಿಗೆ 12 ವರ್ಷದ ಹೆಣ್ಣು ಮಗುವಿದೆ. ಆನೇಕಲ್ ತಾಲೂಕು ಜಿಗಣಿ ಹೋಬಳಿ ಕರಿಯಪ್ಪನ ಹಳ್ಳಿ ಗ್ರಾಮದಲ್ಲಿ ಮನೆಯನ್ನು ಕಟ್ಟಿದ್ದು , ಈ ಮನೆಯು ಪತ್ನಿ ಭಾರತಿ ಹೆಸರಿನಲ್ಲಿದೆ.
ತನ್ನ ಹೆಸರಿಗೆ ಮನೆ ಬರೆದುಕೊಡುವಂತೆ ಆಗಾಗ್ಗೆ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಈ ನಡುವೆ ಭಾರತಿ ಗಾರೆ ಮೇಸ್ತ್ರಿ ಮಂಜುನಾಥ್ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಹಲವಾರು ಬಾರಿ ಆಕೆಗೆ ಬುದ್ಧಿ ಹೇಳಿದರೂ ಸಹ ಕೇಳದೆ ಆತನೊಂದಿಗೆ ಸಲುಗೆಯಿಂದ ಇದ್ದರೆಂಬ ಆರೋಪ ಸಹ ಕೇಳಿ ಬಂದಿದೆ.
ಇದೇ ಕೋಪದಿಂದ ಪತ್ನಿಯನ್ನು ಕೊಲೆ ಮಾಡಲು ರಘು ತೀರ್ಮಾನಿಸಿ ಜನವರಿ 22ರಂದು ಮಧ್ಯಾಹ್ನ 2 ಗಂಟೆ ಸುಮಾರಿನಲ್ಲಿ ಆಕೆಯೊಂದಿಗೆ ಜಗಳವಾಡಿ ಕತ್ತು ಹಿಸುಕಿ ಕೆಳಕ್ಕೆ ಬೀಳಿಸಿ ಕಾಲಿನಿಂದ ಕುತ್ತಿಗೆ ತುಳಿದು ಸಾಯಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಐಜಿಪಿ ಚಂದ್ರಶೇಖರ್, ಎಸ್‍ಪಿ ವಂಶಿಕೃಷ್ಣ ಅವರ ನೇತೃತ್ವ, ಅಡಿಷನಲ್ ಎಸ್‍ಪಿ ಲಕ್ಷ್ಮೀ ಗಣೇಶ್, ಡಿವೈಎಸ್‍ಪಿ ಮಲ್ಲೇಶ್ ಅವರ ಮಾರ್ಗದರ್ಶನದಲ್ಲಿ ಆನೇಕಲ್ ವೃತ್ತ ನಿರೀಕ್ಷಕ ಮಹಾನಂದ, ಬನ್ನೇರುಘಟ್ಟ ಪಿಎಸ್‍ಐ ಅಂಜನ್‍ಕುಮಾರ್ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆಯನ್ನು ಕೈಗೊಂಡು ಆರೋಪಿಯನ್ನು ಬಂಸಿ ಕೃತ್ಯಕ್ಕೆ ಬಳಸಿದ್ದ ದೊಣ್ಣೆ ಮತ್ತು ವೇಲ್‍ನ್ನು ವಶಪಡಿಸಿಕೊಂಡಿದ್ದಾರೆ.

Articles You Might Like

Share This Article