ಪತ್ನಿ ಮೇಲೆ ಹಲ್ಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಟೆಕ್ಕಿ

Social Share

ಬೆಂಗಳೂರು,ಮಾ.19- ಕುಡಿಯಬೇಡಿ ಕೆಲಸಕ್ಕೆ ಹೋಗಿ ಎಂದ ಪತ್ನಿಯ ತಲೆಯನ್ನು ಗೊಡೆಗೆ ಜಜ್ಜಿದ ಪತಿರಾಯ ತಾನೂ ಕೂಡ ಕುತ್ತಿಗೆಗೆ ಚಾಕು ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಆರ್‍ಆರ್‍ನಗರದಲ್ಲಿ ನಡೆದಿದೆ.
ಮರೆಯಲ್ಲಿ ನಿಂತು ಅಪ್ಪ-ಅಮ್ಮನ ಜಗಳ ನೋಡುತ್ತಿದ್ದ ಮಗ ಮನೆಯಿಂದ ಓಡಿ ಹೋಗಿದ್ದಾನೆ. ಸದ್ಯ ದಂಪತಿ ಇಬ್ಬರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪತಿ -ಪತ್ನಿ ಇಬ್ಬರೂ ಸಾಫ್ಟ್‍ವೇರ್ ಇಂಜಿನಿಯರ್‍ಗಳಾಗಿದ್ದು ಕುಡಿತದಿಮದ ಸಂಸಾರ ಸರ್ವನಾಶ ಎಂಬ ಮಾತಿಗೆ ಈ ಘಟನೆ ಪೂರಕವಾಗಿದೆ. ಮೂಲತಃ ತುಮಕೂರು ನಿವಾಸಿಯಾದ ಹರ್ಷ ಹಾಗೂ ಸುಧಾರಾಣಿ ಮದುವೆಯಾಗಿದ್ದು ಇಬ್ಬರೂ ಸಾಫ್ಟ್‍ವೇರ್ ಇಂಜನಿಯರ್‍ಗಳಾಗಿದ್ದು 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು.

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ ಸಾಧ್ಯತೆ

ಇಬ್ಬರಿಗೂ ಕೈ ತುಂಬ ಸಂಬಳವಿತ್ತು. ಸುಖ, ಸಂತೋಷದಲ್ಲೇ ಮಗ ನೊಂದಿಗೆ ಜೀವನ ನಡೆಸುತ್ತಿದ್ದರು. ಆದ್ರೆ ಇತ್ತೀಚೆಗೆ ತುಮಕೂರಿನಲ್ಲಿ ಜಮೀನು ಮಾರಿದ್ದ ಹರ್ಷನಿಗೆ ಸಾಕಷ್ಟು ಹಣ ಬಂದಿತ್ತು. ಅಂದಿನಿಂದ ಆತ ಸಂಪೂರ್ಣವಾಗಿ ಬದಲಾಗಿದ್ದ.

ಇದ್ದಕ್ಕಿದ್ದಂತೆ ಕೋಟಿ ಕೋಟಿ ಹಣ ನೋಡಿದ ಹರ್ಷ 1ಲಕ್ಷ ಸಂಬಳ ಬರುತ್ತಿದ್ದ ಕೆಲಸ ಬಿಟ್ಟು ಮನೆಯಲ್ಲೇ ಇರುತ್ತಿದ್ದ, ಕಳೆದ ಐದಾರು ತಿಂಗಳಿಂದ್ಲೇ ಪ್ರತಿ ದಿನ ಕುಡಿದು ಬಂದು ಹೆಂಡತಿಗೆ ಹಿಂಸೆ ನೀಡಿ ಹೊಡೆಯುತ್ತಿದ್ದ ಎಂದು ತಿಳಿದುಬಂದಿದೆ

ಕಳೆದ ಶುಕ್ರವಾರ ರಾತ್ರಿ ಕಂಠ ಪೂರ್ತಿ ಕುಡಿದು ಬಂದು ಹರ್ಷ ಗಲಾಟೆ ಶುರು ಮಾಡಿ ಹೆಂಡತಿ ತಲೆಯನ್ನು ಗೋಡೆಗೆ ಹೊಡೆದು ಕೊಲೆಗೆ ಯತ್ನಿಸಿದ ಆಕೆ ಕುಸಿದು ಬಿದ್ದಾಗ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅಪ್ಪ-ಅಮ್ಮನ ಜಗಳ ನೋಡಿದ 12 ವರ್ಷದ ಮಗ ಮನೆಯಿಂದ ಓಡಿ ಹೋಗಿ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾನೆ.

ಅಮಿತ್ ಶಾ ಭೇಟಿ ಮಾಡಿದ ರಮೇಶ ಜಾರಕಿಹೊಳಿ

ಪೋಷಕರ ಬಳಿ ಇರಲು ಮಗ ಭಯಪಡುವಂತಾಗಿದೆ. ಸುಧಾರಣಿ ಸಹೋದರನ ದೂರಿನ ಅನ್ವಯ ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

husband, attacked, wife, tried, suicide,

Articles You Might Like

Share This Article