ನಬರಂಗಪುರ,ಫೆ.9- ಒಡಿಶಾದ ಕೊರಾಪುಟ್ ಜಿಲ್ಲೆಯ 35 ವರ್ಷದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದ ತನ್ನ ಪತ್ನಿಯ ಶವವನ್ನು ಹಲವಾರು ಕಿ.ಮೀ.ಗಳ ದೂರ ಭುಜದ ಮೇಲೆ ಹೊತ್ತು ಸಾಗಿರುವ ಸುದ್ದಿ ಹೊರಬಿದ್ದಿದೆ. ಸಮುಲು ಪಾಂಗಿ ಎಂಬ ವ್ಯಕ್ತಿ ನೆರೆಯ ಆಂಧ್ರಪ್ರದೇಶದ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ತನ್ನ ಪತ್ನಿ ಈಡೆಗುರು ಎಂಬಾಕೆಯ ಶವವನ್ನು ಹಲವು ಕಿ.ಮೀ.ಗಳ ದೂರ ಹೊತ್ತೋಯ್ದಿದ್ದಾನೆ.
ಶವವನ್ನು ಹೊತ್ತೋಯ್ಯುತ್ತಿದ್ದ ಸಮುಲು ಪಾಂಗಿಯನ್ನು ಗುರುತಿಸಿದ ಪೊಲೀಸರು ಆತನಿಗೆ ಪತ್ನಿ ಶವ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪಾಂಗಿ ತನ್ನ ಅಸ್ವಸ್ಥ ಪತ್ನಿಯನ್ನು ವಿಶಾಖಪಟ್ಟಣಂ ಜಿಲ್ಲೆಯ ಆಸ್ಪತ್ರೆಯೊಂದಕ್ಕೆ ದಾಖಲಿಸಿದ್ದರು. ಆದರೆ, ಆಕೆ ಚಿಕಿತ್ಸೆಗೆ ಸ್ಪಂಸುತ್ತಿಲ್ಲ ಎಂದು ತಿಳಿಸಿದ ವೈದ್ಯರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು.
100 ಕಿ.ಮೀ. ದೂರದಲ್ಲಿರುವ ತನ್ನ ಮನೆಗೆ ಪಾಂಗಿ ಪತ್ನಿಯನ್ನು ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಮಾರ್ಗ ಮಧ್ಯೆ ಆಕೆ ಮೃತಪಟ್ಟಿದ್ದರಿಂದ ಆಟೋ ಚಾಲಕ ಶವ ಸಾಗಿಸಲು ಹಿಂದೇಟು ಹಾಕಿ ಚೆಲ್ಲೂರು ರಿಂಗ್ ರಸ್ತೆಯಲ್ಲಿ ಶವ ಇಳಿಸಿ ಹೋಗಿದ್ದಾನೆ.
ಖಾಸಗಿ ಬ್ಯಾಂಕ್‍ನಲ್ಲಿ ಬೆಂಕಿ ಅವಗಡ
ಬೇರೆ ದಾರಿ ಕಾಣದೆ ಕಂಗಲಾದ ಪಾಂಗಿ ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಹೊತ್ತು ಸುಮಾರು 80 ಕಿ.ಮೀ ದೂರದಲ್ಲಿದ್ದ ತನ್ನ ಮನೆಯತ್ತ ಹೆಜ್ಜೆ ಹಾಕತೊಡಗಿದ.
ಪತ್ನಿ ಶವ ಹೊತ್ತು ಸಾಗುತ್ತಿದ್ದ ಪಾಂಗಿ ವಿಷಯವನ್ನು ಕೆಲವರು ಗ್ರಾಮಾಂತರ ವೃತ್ತ ನಿರೀಕ್ಷಕ ತಿರುಪತಿರಾವ್ ಅವರ ಗಮನಕ್ಕೆ ತಂದಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪಾಂಗಿಯನ್ನು ತಡೆದಿದ್ದಾರೆ.
ತೆಲುಗು ಬಾರದ ಪಾಂಗಿ ಹೇಳುವ ವಿಷಯ ತಿಳಿಯದೆ ಪೊಲೀಸರು ಕೊನೆಗೆ ಒಡಿಶಾ ಭಾಷೆ ತಿಳಿಯುವ ವ್ಯಕ್ತಿಯೊಬ್ಬರ ಸಹಾಯದಿಂದ ಆತನ ಕಷ್ಟಕ್ಕೆ ಮರುಗಿದ ಪೊಲೀಸರು ಮಾನವಿಯತೆ ದೃಷ್ಟಿಯಿಂದ ಆತನ ಪತ್ನಿ ಶವ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಪೊಲೀಸರ ಈ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದೆ.
ಭಾರತ ಮಾನವೀಯತೆ ಪರ ಸದಾ ನಿಲ್ಲುತ್ತದೆ: ಜೈಶಂಕರ್
ಕಳೆದ 2016ರಲ್ಲೂ ಒಡಿಶಾದ ಭವಾನಿಪಟ್ಟಣಂನಲ್ಲಿ ದಾನಾ ಮಾಝಿ ಎಂಬ ವ್ಯಕ್ತಿ ತನ್ನ ಪತ್ನಿ ಶವವನ್ನು 12 ಕಿ.ಮೀ ದೂರ ಹೆಗಲ ಮೇಲೆ ಹೊತ್ತು ಸುದ್ದಿಯಾಗಿದ್ದ . ಅದೇ ರೀತಿಯ ಘಟನೆ ಇದೀಗ ಮತ್ತೊಮ್ಮೆ ನಡೆದಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ.
husband, carried, wife, dead body, Vizianagaram,