ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ

ಚಿಕ್ಕಮಗಳೂರು, ಏ.30- ಪ್ರೀತಿಸಿ ಮದುವೆಯಾದ ಕೆಲವೇ ತಿಂಗಳಲ್ಲಿ ದೂರವಾಗಿದ್ದ ಪತ್ನಿ ಜಾತ್ರೆಗೆಂದು ತವರು ಮನೆಗೆ ಬಂದಿದ್ದಾಗ ಮಚ್ಚಿನಿಂದ ಕೊಚ್ಚಿ ಪತಿಯೇ ಕೊಲೆ ಮಾಡಿರುವ ಘಟನೆ ತರೀಕೆರೆ ತಾಲ್ಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಮೇಘನಾ (18) ಕೊಲೆಯಾದ ಪತ್ನಿ. ಚರಣ್‌ (25) ಕೊಲೆ ಮಾಡಿದ ಆರೋಪಿ ಪತಿ. ಕರಕುಚ್ಚಿ ಗ್ರಾಮದ ನಿವಾಸಿ ಚರಣ್‌ ಅದೇ ಗ್ರಾಮದ ಮೇಘನಾಳನ್ನು ಪ್ರೀತಿಸಿ ವಿವಾಹವಾಗಿದ್ದನು. ಪ್ರೀತಿಸುವಾಗಲೇ ಅತ್ಯಾಚಾರ ಎಸಗಿದ್ದ ಕಾರಣ ಈತನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಆದರೂ ಬಾಲಕಿಯಾದ ಮೇಘನಾಳನ್ನು ವಿವಾಹವಾಗಿದ್ದನು. … Continue reading ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ