ಮೈಸೂರು,ಸೆ.15- ಹಣಕ್ಕಾಗಿ ಪತ್ನಿಗೆ ಕಿರುಕುಳ ನೀಡಿ ಬ್ಲೇಡ್‍ನಿಂದ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮಲಾಪುರ ಹುಂಡಿಯಲ್ಲಿ ನಡೆದಿದೆ. ಶೋಭಾ(26) ಕೊಲೆಯಾದ ದುರ್ದೈವಿ. 8 ವರ್ಷಗಳ ಹಿಂದೆ ಶೋಭಾ ಹಾಗೂ ಮಂಜು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದರು. ಒಂದು ಮಗುವಿನ ತಾಯಿ ಆಗಿದ್ದ ಶೋಭಾ ಎರಡನೇ ಮಗುವಿಗೆ 8 ತಿಂಗಳ ಗರ್ಭಿಣಿ.
ಮದುವೆಯಾದಾಗ ಶೋಭಾಳನ್ನ ಮಂಜು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ನಂತರದ ದಿನಗಳಲ್ಲಿ ಹಣದ ಹಿಂದೆ ಬಿದ್ದ ಮಂಜು ಪತ್ನಿಗೆ ಕಿರುಕುಳ ನೀಡಲಾರಂಭಿಸಿ ಆಗಾಗ ತವರು ಮನೆಗೆ ಕಳುಹಿಸಿ ಹಣ ತರಿಸಿಕೊಳ್ಳುತ್ತಿದ್ದ.
ಶೋಭಾಳ ತಂದೆ 5 ವರ್ಷಗಳ ಹಿಂದೆ ಮೃತಪಟ್ಟಿದ್ದು, ಆಕೆಯ ತಾಯಿ ಪದ್ಮಾ ಅವರಿಗೆ ವಿಮೆ ಹಣ ಬಂದಿತ್ತು. ಆ ಹಣದ ಮೇಲೆ ಕಣ್ಣು ಹಾಕಿದ ಮಂಜು 3 ಲಕ್ಷ ರೂ. ಪಡೆದುಕೊಂಡಿದ್ದ.ಇಷ್ಟಾಗಿಯೂ ಹಣದ ದಾಹ ತೀರಿರಲಿಲ್ಲ. ತುಂಬು ಗರ್ಭಿಣಿಯಾಗಿದ್ದ ಶೋಭಾಳನ್ನ ಹೆರಿಗೆಗಾಗಿ ತಾಯಿ ಮನೆಗೆ ಕರೆತಂದಿದ್ದರು.
ಆಫ್ರಿಕಾದಿಂದ ತಂದ ಚಿರತೆಗಳ ಸಾವಿಗೆ ರೇಡಿಯೋ ಕಾಲರ್ ಕಾರಣವಲ್ಲ
ನಿನ್ನೆ ಅಲ್ಲಿಗೂ ಹೋದ ಮಂಜು ನೆರೆಹೊರೆಯವರ ಮುಂದೆ ಹಣಕ್ಕಾಗಿ ಕ್ಯಾತೆ ತೆಗೆದಿದ್ದಾನೆ. ದುಡ್ಡು ತಗೊಂಡು ಬಾ ಎಂದು ಕೂಗಾಡಿ ತುಂಬು ಗರ್ಭಿಣಿಯನ್ನ ಎಳೆದಾಡಿ ತಾಯಿ ಪದ್ಮ ಮುಂದೆಯೇ ಬ್ಲೇಡ್‍ನಿಂದ ಶೋಭಾಳ ಕುತ್ತಿಗೆ ಕುಯ್ದಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲಿದ ಶೊಭಾಳನ್ನ ತಕ್ಷಣ ನೆರೆಹೊರೆಯವರು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ 8 ತಿಂಗಳ ಗರ್ಭಿಣಿ ಶೋಭಾ ರಾತ್ರಿ ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನಂಜನಗೂಡು ಟೌನ್ ಠಾಣಾ ಪೊಲಿಸರು ಆರೋಪಿ ಮಂಜುನನ್ನು ಬಂಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
#Husband, #killed, #pregnantwife, #money,