ರಾಯ್‍ಪುರ.ಫೆ.22- ನವವಿವಾಹಿತರಿಬ್ಬರು ತಮ್ಮ ಆರತಕ್ಷತೆಗೆ ಮುನ್ನವೇ ಶವವಾಗಿ ಪತ್ತೆಯಾಗಿರುವ ಘಟನೆ ಛತ್ತಿಸ್‍ಗಢದಲ್ಲಿ ನಡೆದಿದೆ. ಮೃತಪಟ್ಟಿರುವ ಅಸ್ಲಾಂ(24) ಮತ್ತು ಕಹಕಸ ಬಾನು(22) ಭಾನುವಾರ ವಿವಾಹವಾಗಿದ್ದು, ನಿನ್ನೆ ರಾತ್ರಿ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು.
ಇಬ್ಬರು ಆರತಕ್ಷತೆಗಾಗಿ ಕೊನೆಯೊಳಗೆ ತಯಾರಾಗುತ್ತಿದ್ದರು, ಈ ವೇಳೆ ವಧು ಜೋರಾಗಿ ಕಿರುಚಿಕೊಂಡಿರುವ ಸದ್ದು ಕೇಳಿ ಮನೆಯವರೆಲ್ಲ ಕೋಣೆಯತ್ತ ಧಾವಿಸಿದ್ದಾರೆ. ಕೋಣೆ ಬಾಗಿಲು ಒಳಭಾಗದಿಂದ ಲಾಕ್ ಆಗಿತ್ತು. ಸಂಬಂಧಿಕರು ಕಿಟಕಿಯಲ್ಲಿ ಇಣುಕಿ ನೋಡಿದಾಗ ಇಬ್ಬರು ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ.
ಭಾರತೀಯರ ವೀಸಾ ಸಮಸ್ಯೆ ನಿವಾರಣೆಗೆ ಅಮೆರಿಕ ಆದ್ಯತೆ
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಗಿಲು ಮುರಿದು ಕೋಣೆಯೋಳಗೆ ತೆರಳಿದ ಪೊಲೀಸರು, ಮೃತದೇಹಗಳನ್ನು ಶವ ಪರೀಕ್ಷೆಗೆ ಕಳುಹಿಸಿ, ಅಲ್ಲೇ ಇದ್ದ ಚೂರಿಯನ್ನು ವಶಪಡಿಸಿಕೊಂಡಿದ್ದಾರೆ.
2024ರ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ವಿವೇಕ್ ರಾಮಸ್ವಾಮಿ ಬಿಡ್
ಗಂಡ – ಹೆಂಡತಿ ನಡುವೆ ವಾಗ್ವಾದ ನಡೆದು, ಗಂಡ ಹೆಂಡತಿಗೆ ಚೂರಿಯಲ್ಲಿ ಚುಚ್ಚಿ ಬಳಿಕ ತಾನು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
Husband, killed, bride, wedding, raipur,