ಬೆಂಗಳೂರು,ಮಾ.2- ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ವಿಷ ಉಣಿಸಿ ಸಾಯಿಸಿ ಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಂಬೂಸವಾರಿದಿಣ್ಣೆಯ ವಡ್ಡರಪಾಳ್ಯ ನಿವಾಸಿಗಳಾದ ವಿಜಯ(27), ಪುತ್ರಿಯರಾದ ದೀಪಾ (7) ಹಾಗೂ ಖುಷಿ (5) ಮೃತಪಟ್ಟವರು. ಪತಿ ನಾಗೇಂದ್ರ ಅಸ್ವಸ್ಥಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಬೆಳಗ್ಗೆ 10 ಗಂಟೆ ಸುಮಾರಿನಲ್ಲಿ ನಾಗೇಂದ್ರ ಪತ್ನಿ ಹಾಗೂ ಇಬ್ಬರು ಪುತ್ರಿಯರಿಗೆ ವಿಷ ಉಣಿಸಿ ಸಾಯಿಸಿ ನಂತರ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.
11 ಸಾವಿರ ಕೋಟಿಯ ಬಿಬಿಎಂಪಿ ದಾಖಲೆ ಬಜೆಟ್
ಇದನ್ನು ಪತ್ನಿಯ ಸಹೋದರ ನೋಡಿ ತಕ್ಷಣ ರೂಮಿನ ಬಾಗಿಲು ಒಡೆದು ನೇಣಿನಿಂದ ನಾಗೇಂದ್ರ ಅವರನ್ನು ಬಿಡಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರು ಸಂಚಾರ ದಟ್ಟಣೆಗೆ ನಿಯಂತ್ರಣಕ್ಕೆ ಬಿಬಿಎಂಪಿ ಮಹತ್ವದ ನಿರ್ಣಯ
ಸುದ್ದಿ ತಿಳಿದು ಕೋಣನಕುಂಟೆ ಠಾಣೆ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮೂವರ ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Husband, killed, wife, two daughters,