ಬೆಂಗಳೂರು, ಡಿ. 5- ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯನ್ನು ಸೆಲ್ಲರ್‍ನಲ್ಲಿ ತುಂಬಿಕೊಂಡಿದ್ದ ನೀರಿಗೆ ಎಸೆದು ಪತಿ ಕೊಲೆ ಮಾಡಿರುವ ಘಟನೆ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಶಿವಮ್ಮ(50) ಕೊಲೆಯಾದ ದುರ್ದೈವಿ. ಆರೋಪಿ ಪತಿ ಶಂಕರಪ್ಪ(60) ತಲೆಮರೆಸಿಕೊಂಡಿದ್ದಾನೆ.
ತುರಹಳ್ಳಿಯ 80 ಅಡಿ ರಸ್ತೆ ಸಮೀಪ ವಿಶ್ವನಾಥ್ ಎಂಬುವರು ಅಪಾರ್ಟ್ ಮೆಂಟ್ ಕಟ್ಟುತ್ತಿದ್ದು, ಪ್ರಸ್ತುತ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿದೆ. ಈ ಅಪಾರ್ಟ್‍ಮೆಂಟಿಗೆ ಮಹಾರಾಜ ಪ್ಯಾಲೇಸ್ ಎಂದು ಹೆಸರಿಟ್ಟಿದ್ದಾರೆ.
ಈ ಅಪಾರ್ಟ್‍ಮೆಂಟ್‍ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಶಂಕರಪ್ಪ ಕೆಲಸ ಮಾಡುತ್ತಿದ್ದು, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದಾರೆ. ಶಿವಮ್ಮ ಅವರು ಕಳೆದೆರೆಡು ವರ್ಷಗಳಿಂದ
ಪ್ಯಾರಲಿಸಿಸ್‍ಗೆ ತುತ್ತಾಗಿ ಕೈಕಾಲುಗಳು ಸ್ವಾದೀನವಿಲ್ಲದೆ, ನಡೆದಾಡಲಾಗದೇ ಮಲಗಿದ್ದಲ್ಲೇ ಇರುತ್ತಿದ್ದರು.
ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ : ಶಾಸಕ ಜಮೀರ್
ಇದರಿಂದ ಪತಿ ಶಂಕರಪ್ಪ ಬೇಸರಗೊಂಡಿದ್ದನು. ನಿನ್ನೆ ಮಗಳು ಕೆಲಸಕ್ಕೆ ಹೋಗಿದ್ದು, ಮಗ ಅಂಗಡಿಗೆ ಹೋಗಿದ್ದನು. ಇದೇ ಸಮಯವನ್ನು ಕಾದಿದ್ದ ಪತಿ ನಿನ್ನೆ ಮಧ್ಯಾಹ್ನ 1.30ರಿಂದ 2 ಗಂಟೆ ಮಧ್ಯೆ ಶಂಕರಪ್ಪ ಕೊಲೆ ಮಾಡುವ ಉದ್ದೇಶದಿಂದ ಪತ್ನಿಯನ್ನು ಎತ್ತಿಕೊಂಡು ಹೋಗಿ ಸೆಲ್ಲರ್‍ನಲ್ಲಿ ತುಂಬಿಕೊಂಡಿದ್ದ ನೀರಿಗೆ ಎಸೆದು ಕೊಲೆ ಮಾಡಿದ್ದಾನೆ.
ಕೆಲ ಸಮಯದ ಬಳಿಕ ಮಗ ಮನೆಗೆ ಬಂದಾಗ ತಾಯಿ ಕಾಣಿಸದಿರುವ ಬಗ್ಗೆ ತಂದೆ ಶಂಕರಪ್ಪನಿಗೆ ಕೇಳಿದಾಗ ತನಗೆ ಗೊತ್ತಿಲ್ಲ ಎಂದು ಸ್ಥಳದಿಂದ ಪರಾರಿಯಾಗಿದ್ದಾನೆ.
ಅಮರನಾಥಗೌಡ ಹಾಗೂ ದ್ವಾರಕೀಶ್‍ಗೆ ಗೌರವ ಡಾಕ್ಟರೇಟ್ ಪ್ರದಾನ
ಇತ್ತ ಮಗ ಸೆಲ್ಲರ್‍ನಲ್ಲಿ ಹೋಗಿ ನೋಡಿದಾಗ ನೀರಿನಲ್ಲಿ ಅಮ್ಮನ ಶವ ಪತ್ತೆಯಾಗಿದೆ. ಸುದ್ದಿ ತಿಳಿದ ತಲಘಟ್ಟಪುರ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
#Husband, #Killed, #Wife, Bangalore,