ತುಮಕೂರು,ಜ.30- ನಿತ್ಯ ಜಗಳ ಮಾಡುತ್ತಾಳೆ ಎಂದು ಹೆಂಡತಿಯನ್ನು ಕೊಂದು ಕೆರೆಗೆ ಹಾಕಿರುವ ಘಟನೆ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ದರ್ಶಿನಿ (26) ಕೊಲೆಯಾದ ಪತ್ನಿ.
ಘಟನೆ ವಿವರ: ತುರುವೇಕೆರೆ ತಾಲೂಕಿನ ಮಾಯಸಂದ್ರದ ದೊಡ್ಡ ಕೆರೆಯ ಕುಡಿಯುವ ನೀರಿನ
ಶುದ್ಧೀಕರಣ ಘಟಕದ ಬಳಿ ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಪತಿ ವಿನಯ್ ಕುಮಾರ್‍ನನ್ನ ವಶಕ್ಕೆ ಪಡೆದು ವಿಚಾರ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ
ಬಂದಿದೆ.
ಬೆಂಗಳೂರಿನ ಯಲಹಂಕದ ವಾಸಿಯಾಗಿರುವ ವಿನಯ್ ಹಾಗೂ ಪತ್ನಿ ದರ್ಶಿನಿ ನಾಗಮಂಗಲದ ನೆಂಟರ ಮನೆಗೆ ಬಂದಿದ್ದಾಗಲೂ ಜಗಳವಾಡಿದ್ದಾರೆ. ಇದರಿಂದ ಬೇಸರಗೊಂಡು ದರ್ಶಿನಿಯನ್ನು ಕೊಂದು ಮಾಯಸಂದ್ರದ ದೊಡ್ಡಕೆರೆಗೆ ಹಾಕಿದ್ದಾನೆ.
ಬೆಂಗಳೂರಿನಲ್ಲೂ ಬಿಬಿಸಿ ವಿವಾದಾತ್ಮಕ ಸಾಕ್ಷ್ಯಚಿತ್ರದ ಪ್ರಸಾರ
ಕೆರೆಯಲ್ಲಿ ಮಹಿಳೆಯ ಶವ ಪತ್ತೆಯಾದ ನಂತರ ಅನುಮಾನಸ್ಪದ ಪ್ರಕರಣ ದಾಖಲಿಸಿಕೊಂಡಿದ್ದ ತುರುವೇಕೆರೆ ಪೊಲೀಸ್ ಠಾಣಾ ಸಬ್ ಇನ್ಸ್ ಪೆಕ್ಟರ್ ಹೊನ್ನೇಗೌಡ ಅವರು, ಸ್ಥಳಕ್ಕೆ ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದ್ದರು.
ದರ್ಶಿನಿ ಅನುಮಾನಸ್ಪದ ಸಾವಿನ ಬಗ್ಗೆ ಅನುಮಾನ ಬಂದು ಪತಿ ವಿನಯ್ ಅವರನ್ನು ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ, ತನಿಖೆಯಲ್ಲಿ ಸಹಾಯಕ ಸಬ್ ಇನ್ಸ್ ಪೆಕ್ಟರ್ ರಾಮಚಂದ್ರಯ್ಯ, ಪೊಲೀಸ್ ಸಿಬ್ಬಂದಿಗಳಾದ ಗಿರೀಶ್ ,ಪುನೀತ್, ಮಂಜುನಾಥ್, ಅರುಣ್ ಪಾಲ್ಗೊಂಡಿದ್ದರು.
husband, killed, wife, Tumkur,