ಬೆಂಗಳೂರು, ಜ.7- ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂಜಯ ಗಾಂಧಿ ನಗರದ ನಿವಾಸಿ ಅನಿತಾ(31) ಮತ್ತು ಆಕೆಯ ಪ್ರಿಯಕರ ರಾಕೇಶ್(24) ಬಂಧಿತರು.
ಸಂಜಯನಗರದ ನಿವಾಸಿಯಾದ ಆಂಜನೇಯ- ಅನಿತಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆಂಜನೇಯ ಕುಡಿತದ ಚಟ ಹೊಂದಿದ್ದನು. ಗಾರ್ಮೆಂಟ್ಸ್ ಉದ್ಯೋಗಿಯಾಗಿರುವ ಅನಿತಾ, ತನ್ನ ಪ್ರಿಯಕರ ರಾಕೇಶ್ನೊಂದಿಗೆ ಸೇರಿ ಕಳೆದ ಜೂನ್ 18ರಂದು ರಾತ್ರಿ ತನ್ನ ಮನೆಯಲ್ಲೇ ಪತಿ ಆಂಜನೇಯ(45)ನನ್ನು ಬೆಡ್ಶೀಟ್ ನಿಂದ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.
ವಿಷಾಹಾರ ಸೇವನೆ : ಕೇರಳದ ಯುವತಿ ಮಂಗಳೂರಿನಲ್ಲಿ ನಿಧನ
ಕುಡಿತದ ಚಟ ಹೊಂದಿದ್ದ ಪತಿ ಕುಡಿದು ಕುಡಿದು ಸತ್ತನು ಎಂದು ಎಲ್ಲರೊಂದಿಗೂ ಅನಿತಾ ಹೇಳಿದ್ದಾಳೆ. ಇವರ ಮಗಳು ಸಂಬಂಧಿಕರಿಗೆ ಅಪ್ಪನನ್ನು ಅಮ್ಮನೇ ಕೊಲೆ ಮಾಡಿದ್ದಾರೆಂದು ತಿಳಿಸಿದ್ದರಿಂದ ಸಂಬಂಧಿಕರು ಅನಿತಾ ವಿರುದ್ಧ ಜ. 4ರಂದು ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಅನಿತಾಳ ಚಲನವಲನ ಗಮನಿಸಿ ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ತಮ್ಮ ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸುತ್ತಿದ್ದರಿಂದ ಪ್ರಿಯಕರ ರಾಕೇಶ್ನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಗಿ ತಿಳಿಸಿದ್ದಾಳೆ. ಈಕೆಯ ಮಾಹಿತಿ ಮೇರೆಗೆ ಪೊಲೀಸರು ರಾಕೇಶ್ ನನ್ನ ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
Husband, murdered, wife, lover, arrested,