ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ-ಪ್ರಿಯಕರನ ಸೆರೆ

Social Share

ಬೆಂಗಳೂರು,ಅ.27- ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಾನೆಂದು ಪತಿಯನ್ನೇ ಕೊಲೆ ಮಾಡಿಸಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೊಂಡಪ್ಪಲೇಔಟ್‍ನ ಶ್ವೇತ (21) ಮತ್ತು ಪ್ರಿಯಕರ ಆಂಧ್ರಪ್ರದೇಶದ ಪೆನುಗೊಂಡ ನಿವಾಸಿ ಸುರೇಶ್ ಅಲಿಯಾಸ್ ಮೂಲಿ ಸೂರಿ (25) ಬಂಧಿತರು.

ಕೊಂಡಪ್ಪಲೇಔಟ್‍ನಲ್ಲಿ ವಾಸವಾಗಿದ್ದ ಅಳಿಯ ಚಂದ್ರಶೇಖರ್ ಅವರನ್ನು ಮನೆಯ ಮೂರನೇ ಟೆರಸ್‍ನಲ್ಲಿ ಅ.21ರಂದು ರಾತ್ರಿ 8 ಗಂಟೆ ಸುಮಾರಿನಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರುವುದಾಗಿ ಮಾವ ಶಿವಪ್ಪ ಎಂಬುವರು ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು, ಚಂದ್ರಶೇಖರ್ ಅವರ ಪತ್ನಿ ಶ್ವೇತ ಮದುವೆಯಾಗುವುದಕ್ಕಿಂತ ಮೊದಲು ಸುರೇಶ್ ಎಂಬಾತನೊಂದಿಗೆ ಪ್ರೀತಿ ಬೆಳೆದಿದ್ದು, ಇವರಿಬ್ಬರ ನಡುವೆ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದಾರೆ.

ಖರ್ಗೆ AICC ಅಧ್ಯಕ್ಷರಾಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ‘ಸಂಚಲನ’

ಮದುವೆ ಇಷ್ಟ ಇಲ್ಲದಿದ್ದರೂ ತಂದೆ-ತಾಯಿಯ ಇಚ್ಚೆಯಂತೆ ಸೋದರಮಾವ ಚಂದ್ರಶೇಖರನನ್ನು ಶ್ವೇತ ಮದುವೆಯಾಗಿದ್ದು, ತದನಂತರವೂ ತನ್ನ ಪ್ರಿಯಕರನೊಂದಿಗೆ ಆಕೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು.

ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಪಡಿಸುತ್ತಿದ್ದ ಪತಿಯನ್ನು ಹೇಗಾದರೂ ಮುಗಿಸು ಎಂದು ಪ್ರಿಯಕರನಿಗೆ ಶ್ವೇತ ಹೇಳಿಕೊಟ್ಟು ವ್ಯವಸ್ಥಿತವಾಗಿ ಸಂಚು ರೂಪಿಸಿ ಅದರಂತೆ ಅಂದು ಕೊಲೆ ಮಾಡಿಸಿ ಯಾರಿಗೂ ತಿಳಿಯದಂತೆ ಶ್ವೇತ ನಾಟಕವಾಡಿದ್ದನ್ನು ಪೊಲೀಸರು ಬೆಳಕಿಗೆ ತಂದಿದ್ದಾರೆ.

ಚೀನಾ ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದ ಭಾರತ, ಯಾವ ಕ್ಷೇತ್ರದಲ್ಲಿ ಗೊತ್ತೇ..?

ಈಶಾನ್ಯ ವಿಭಾಗದ ಡಿಸಿಪಿ ಅನೂಪ್ ಎ.ಶೆಟ್ಟಿ ಮತ್ತು ಯಲಂಹಕ ಉಪ ವಿಭಾಗದ ಎಸಿಪಿ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ಇನ್ಸ್‍ಪೆಕ್ಟರ್ ಬಾಲಾಜಿ, ಸಬ್‍ಇನ್ಸ್‍ಪೆಕ್ಟರ್ ಹರೀಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article