ಬೆಂಗಳೂರು, ಮಾ.9- ಪತ್ನಿ ಶೀಲ ಶಂಕಿಸಿ ಆಕೆಯೊಂದಿಗೆ ಜಗಳವಾಡಿದ ಪತಿ ಬೆಲ್ಟ್‍ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಎಚ್‍ಎಎಲ್
ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಾಯಚೂರು ಮೂಲದ ನಾಗಮ್ಮ (36) ಕೊಲೆಯಾದ ಮಹಿಳೆ. ಈಕೆಯ ಪತಿ ಆರೋಪಿ ನೀಲಕಂಠ(38)ನನ್ನು ಎಚ್‍ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
17 ವರ್ಷದ ಹಿಂದೆ ನಾಗಮ್ಮ ನೀಲಕಂಠನನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಾಳಪ್ಪ ಲೇಔಟ್‍ನಲ್ಲಿ ಈ ಕುಟುಂಬ ವಾಸವಾಗಿದೆ. ನಾಗಮ್ಮ ಮನೆ ಕೆಲಸಕ್ಕೆ ಹೋಗುತ್ತಿದ್ದರು. ನೀಲಕಂಠ ಕ್ಯಾಬ್ ಚಾಲಕ ವೃತ್ತಿ ಮಾಡುತ್ತಿದ್ದಾನೆ.
ಪತಿ ನೀಲಕಂಠ ಪತ್ನಿ ಶೀಲ ಶಂಕಿಸಿ ಆಗಾಗ ಜಗಳವಾಡು ತ್ತಿದ್ದನು. ನಿನ್ನೆ ಬೆಳಗ್ಗೆ ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಆ ವೇಳೆ ನಿನಗೆ ವಿಚ್ಛೇದನ ಕೊಡುವುದಾಗಿ ನಾಗಮ್ಮ ಹೇಳಿದಾಗ, ಕೋಪಗೊಂಡ ನೀಲಕಂಠ ನಿನೇನು ವಿಚ್ಛೇದನ ಕೊಡುವುದು ಎಂದು ಕೈಗೆ ಸಿಕ್ಕಿದ ಬೆಲ್ಟ್‍ನಿಂದ ಆಕೆಯ ಗುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ.
ಸುದ್ದಿ ತಿಳಿದು ಎಚ್‍ಎಎಲ್ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಆರೋಪಿ ನೀಲಕಂಠನನ್ನು ಬಂಧಿಸಿ ಮುಂದಿನ ಕೈಗೊಂಡಿದ್ದಾರೆ.
