8 ವರ್ಷಗಳಾದರೂ ವಾಪಸ್ಸಾಗದ ಹೆರಿಗೆಗೆ ತವರಿಗೆ ಹೋಗಿದ್ದ ಮಡದಿ, ಪತಿ ಆತ್ಮಹತ್ಯೆ

Social Share

ಕೊರಟಗೆರೆ, ಸೆ.1- ತವರು ಮನೆಗೆ ಹೆರಿಗೆಗೆ ಹೋದ ಮಡದಿ 8 ವರ್ಷಗಳಾದರೂ ಮತ್ತೆ ವಾಪಸ್ ಬಾರದ ಕಾರಣ ಮನನೊಂದು ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ತಾಲೂಕಿನ ಮಾವತ್ತೂರು ಬಳಿಯ ಮಿಣಸಂದ್ರ ಗ್ರಾಮದಲ್ಲಿ ಈ ಘಟನೆ ಜರಗಿದ್ದು, ಮಹೇಂದ್ರ (34) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.ಮಹೇಂದ್ರನ ಪತ್ನಿ ಹೆರಿಗೆಗೆಂದು ತವರು ಮನೆಗೆ ಹೋಗಿದ್ದಾರೆ. ಇವರಿಬ್ಬರ ಮಧ್ಯೆ ಕ್ಷುಲ್ಲಕ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಎಂಟು ವರ್ಷಗಳಾದರೂ ಮನೆಗೆ ಬಾರದ ಕಾರಣ ಹಲವು ಬಾರಿ ರಾಜಿ-ಸಂಧಾನ ಮಾಡಿದರೂ ಪ್ರಯೋಜನವಾಗಿರಲಿಲ್ಲ.

ಮಡದಿ ಮತ್ತು ಮಕ್ಕಳಿಂದ ದೂರವಿದ್ದ ಕಾರಣ ಮನನೊಂದು ಕ್ರಿಮಿನಾಶಕ ಸೇವಿಸಿ ಮಹೇಂದ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ.ಸುರೇಶ್ ಹಾಗೂ ಪಿಎಸ್‍ಐ ಮಹಾಲಕ್ಷ್ಮಮ್ಮ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Articles You Might Like

Share This Article