Monday, September 16, 2024
Homeಬೆಂಗಳೂರುಪತ್ನಿ ಕೊಲೆ ಮಾಡಿ ನಾಟಕವಾಡಿದ್ದ ಪತಿ ಅರೆಸ್ಟ್

ಪತ್ನಿ ಕೊಲೆ ಮಾಡಿ ನಾಟಕವಾಡಿದ್ದ ಪತಿ ಅರೆಸ್ಟ್

husband who killed his wife and played drama was arrested

ಬೆಂಗಳೂರು,ಆ.28- ತರಕಾರಿ ಬಿಡಿಸಿಕೊಂಡು ಬರೋಣವೆಂದು ಪತ್ನಿಯನ್ನು ತೋಟಕ್ಕೆ ಕರೆದೊಯ್ದು ಕೊಲೆ ಮಾಡಿ ನಾಟಕವಾಡಿದ್ದ ಪತಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಪ್ರಕರಣದ ದಾಖಲಾದ 48 ಗಂಟೆಯೊಳಗೆ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಹೊಸಹಳ್ಳಿ ಗ್ರಾಮದ ಜಮೀನುವೊಂದರಲ್ಲಿ ದುಷ್ಕರ್ಮಿಗಳು ನನ್ನ ಪತ್ನಿಯ ತಲೆಗೆ ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿದ್ದಾರೆಂದು ಪತಿ ದೂರು ನೀಡಿದ್ದ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸ ತಂಡ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದಾಗ ದೂರು ಕೊಟ್ಟಿರುವ ವ್ಯಕ್ತಿಯೇ ತನ್ನ ಹೆಂಡತಿಯನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

ಆ.24ರಂದು ರಾತ್ರಿ 8.30ರ ಸುಮಾರಿನಲ್ಲಿ ತೋಟದಲ್ಲಿ ತರಕಾರಿ ಕಿತ್ತುಕೊಂಡು ಬರೋಣ ಎಂದು ಪತ್ನಿಯನ್ನು ನಂಬಿಸಿ ಕರೆದೊಯ್ದು ಕೊಲೆ ಮಾಡಿರುವುದು ದೃಢಪಟ್ಟ ಹಿನ್ನಲೆಯಲ್ಲಿ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ಸ್ಪೆಕ್ಟರ್ ಶಬರೀಶ್ ಅವರನ್ನೊಳಗೊಂಡ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News