ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದ ಉಗ್ರ ಇಮ್ರಾನ್ ಬಶೀರ್ ಫಿನಿಶ್

Social Share

ಜಮ್ಮು.ಅ.19- ಶೋಪಿಯಾನ್‍ನಲ್ಲಿ ಗ್ರೆನೇಡ್ ದಾಳಿ ನಡೆಸಿ ಇಬ್ಬರು ವಲಸೆ ಕಾರ್ಮಿಕರನ್ನು ಕೊಂದಿದ್ದ ಭಯೋತ್ಪಾದಕ ಇಮ್ರಾನ್ ಬಶೀರ್ ಭಧ್ರತಾ ಪಡೆಗಳ ಎನ್‍ಕೌಂಟರ್‍ನಲ್ಲಿ ಬಲಿಯಾಗಿದ್ದಾನೆ.

ನಾಗರಿಕರ ಹತ್ಯೆಯಾದ 78 ಗಂಟೆಗಳ ನಂತರ ಶೋಪಿಯಾನ್ ನೌಗಾಮ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ದಾಳಿ ನಡದು ಅದರಲ್ಲಿ ಭಯೋತ್ಪಾದಕ ಹತನಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾಶ್ಮೀರಿ ಪಂಡಿತರ ಮೇಲೆ ಗುಂಡು ಹಾರಿಸಿದ ಸ್ಥಳ ಹತ್ತಿರದಲ್ಲೇ ಈ ಎನ್‍ಕೌಂಟರ್ ನಡೆದಿದೆ.ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದ್ದು ಹೆಚುತ್ತಿರುವ ಹಿಂಸಾಚಾರ ಮಟ್ಟ ಹಾಕಲು ವ್ಯಾಪಕ ಕಾರ್ಯಾಚರಣೆ ನಡೆಸಲಾಗಿದೆ.

Articles You Might Like

Share This Article