ಗನ್ ತೋರಿಸಿ ಮಹಿಳೆಯನ್ನು ರೇಪ್ ಮಾಡಿದ ಪೊಲೀಸ್ ಇನ್ಸ್‌ಪೆಕ್ಟರ್

Social Share

ಹೈದರಾಬಾದ್,ಜು.11- ನಗರದ ಹೊರವಲಯದಲ್ಲಿ ಮಹಿಳೆಯೊಬ್ಬರ ಮೇಲೆ ಬಂದೂಕು ತೋರಿಸಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇನ್ಸ್ಪೆಕ್ಟರ್ ಒಬ್ಬರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಮರ್ರೆಡ್ಪಲ್ಲಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಕೆ.ನಾಗೇಶ್ವರ್ ರಾವ್ ಎಂದು ಹೇಳಲಾಗಿರುವ ಇನ್ಸ್‍ಪೆಕ್ಟರ್‍ನನ್ನು ಹೈದರಾಬಾದ್ ಪೊಲೀಸ್ ಕಮೀಷನರ್ ಸಿ.ವಿ.ಆನಂದ್ ಅಮಾನತುಗೊಳಿಸಿದ್ದಾರೆ. ಘಟನೆಯ ನಂತರ ರಾವ್ ಅವರು ಪರಾರಿಯಾಗಿದ್ದರು ಆದರೆ ನಿನ್ನೆ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ. ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಧಿಕಾರಿಗಳ ಪ್ರಕಾರ, ರಾಚಕೊಂಡ ಪೊಲೀಸ್ ಕಮಿಷನರೇಟ್‍ನ ವನಸ್ಥಲಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ಈ ಘಟನೆ ನಡೆದಿದೆ. ಅಂದು ರಾತ್ರಿ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಇನ್‍ಸ್ಪೆಕ್ಟರ್‍ನನ್ನು ಬಂಧಿಸಲಾಗಿದೆ. ರಾಚಕೊಂಡ ಪೊಲೀಸ್ ಕಮಿಷನರೇಟ್‍ನ ಎಸ್‍ಒಟಿ ಮತ್ತು ವನಸ್ಥಲಿಪುರಂ ಪೊಲೀಸರನ್ನು ಒಳಗೊಂಡ ವಿಶೇಷ ಪೊಲೀಸ್ ತಂಡವು 10/07/22 ರಂದು 2030 ಗಂಟೆಗೆ ಇನ್‍ಸ್ಪೆಕ್ಟರ್ ಕೆ.ನಾಗೇಶ್ವರ್ ರಾವ್ ಅವರನ್ನು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಅಪರಾಧ ಸಂಖ್ಯೆ 875/2022 ಯು/ಎಸ್ 452, 376( 2), 307, 448, 365 ಐಪಿಸಿ, ವನಸ್ಥಲಿಪುರಂನ ಸೆಕ್ಷನ್ 30 ಸಶಸ್ತ್ರಾ ಕಾಯ್ದೆಯಡಿ ಇನ್‍ಸ್ಪೆಕ್ಟರ್‍ನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಎಸಿಪಿ ವಂಸ್ಥಲಿಪುರಂ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ರಾಚಕೊಂಡ ಪೊಲೀಸ್ ಕಮಿಷನರ್ ಮಹೇಶ್ ಭಾಗವತ್ ತಿಳಿಸಿದ್ದಾರೆ.

Articles You Might Like

Share This Article