ಫೇಸ್‌ಬುಕ್‌ ಪರಿಚಯಸ್ಥನಿಂದ ಹತ್ಯೆಯಾದ ಮಹಿಳೆ

Social Share

ನವದೆಹಲಿ, ನ.16- ಫೇಸ್‌ಬುಕ್‌ನ ಪರಿಚಯಸ್ಥನನ್ನು ನಂಬಿ ಆಂಧ್ರಪ್ರದೇಶದ ಹೈದ್ರಾಬಾದ್ನಲ್ಲಿ ಉತ್ತರ ಪ್ರದೇಶಕ್ಕೆ ಹೋಗಿ ಮಹಿಳೆಯೊಬ್ಬರು ಕೊಲೆಯಾಗಿ ರುವ ದುರಂತ ಪ್ರಕರಣವೊಂದು ವರದಿಯಾಗಿದೆ. ಹೈದ್ರಾಬಾದ್ನ ಉಸ್ಮಾಬೇಗಂ(32) ಅವರ ಮೃತ ದೇಹ ಉತ್ತರ ಪ್ರದೇಶದ ಅಮೋರ ಜಿಲ್ಲೆಯ ಗಜ್ರೂಲದಲ್ಲಿ ಪತ್ತೆಯಾಗಿದೆ.

ಉಸ್ಮಾಬೇಗಂ 12 ವರ್ಷಗಳ ಹಿಂದೆ ಬನ್ಸ್ವಾಡದ ಮುಖಿದ್ ಎಂಬು ವವರನ್ನು ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇತ್ತೀಚೆಗೆ ಫೇಸ್ಬುಕ್ನಲ್ಲಿ ಉತ್ತರ ಪ್ರದೇಶದ ಶಹಜಾದ್ ಎಂಬುವರ ಪರಿಚಯವಾಗಿದೆ. ಈ ಸ್ನೇಹ ಕ್ರಮೇಣ ಪ್ರೀತಿಗೆ ತಿರುಗಿದೆ. ಮಾತುಕತೆ, ವಿಡಿಯೋ ಕಾಲ್ ತೀವ್ರಗೊಂಡಿದೆ. ಮಹಿಳೆಯನ್ನು ಮನೆ ಬಿಟ್ಟು ಬರುವಂತೆ ಆರೋಪಿ ಪ್ರಚೋದಿಸಿದ್ದಾನೆ.

ಚುನಾವಣೆಯಲ್ಲಿ ಗೆಲವು ಕಷ್ಟವಾಗಬಹುದು : ಸಿದ್ದರಾಮಯ್ಯಗೆ ಮುನಿಯಪ್ಪ ಎಚ್ಚರಿಕೆ

ಬಳಿಕ ಆಕೆ ಗಂಡನೊಂದಿಗೆ ಜಗಳವಾಡಿಕೊಂಡು ತವರು ಮನೆ ನಿಜಾಮಬಾದ್ಗೆ ಹೋಗಿದ್ದಾಳೆ. ಹಿರಿಯರ ಮಧ್ಯಸ್ತಿಕೆ ಬಳಿಕ ನವೆಂಬರ್ 4ರಂದು ಗಂಡನ ಮನೆಗೆ ಮರಳಿದ್ದಾಳೆ. ಎರಡು ದಿನಗಳ ಬಳಿಕ ಇದ್ದಕ್ಕಿದ್ದಂತೆ ಉಸ್ಮಾಬೇಗಂ ನಾಪತ್ತೆಯಾಗಿದ್ರು. ಅಲ್ಲಿಂದ ನೇರವಾಗಿ ಉತ್ತರ ಪ್ರದೇಶದ ಅಮ್ರೋಹಗೆ ಬಂದ ಆಕೆ ಅಲ್ಲಿ ಮೊಹಮ್ಮದ್ ಶಹಜಾದ್ (36)ನನ್ನು ಬೇಟಿ ಮಾಡಿದ್ದಳು.

ಈತ ಅಮ್ರೋಹದಲ್ಲಿ ಬಣ್ಣದ ಅಂಗಡಿಯನ್ನು ನಡೆಸುತ್ತಿದ್ದ. ಉಸ್ಮಾಬೇಗಂ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದ್ದು, ಶಹಜಾದ್ ಆಕೆಯ ಕತ್ತನ್ನು ಸ್ಕಾರ್ಪ್ನಿಂದ ಬಿಗಿದು ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ.

ಬೆಂಗಳೂರಿನ ಆಸ್ಪತ್ರೆ ಹಾಗೂ ಲ್ಯಾಬ್‍ಗಳ ಮೇಲೆ ಐಟಿ ದಾಳಿ

ಮೃತದೇಹವನ್ನು ಪಕ್ಕದಲ್ಲಿದ್ದ ಸೆಕ್ಯುರಿಟಿ ಎಜೆನ್ಸಿಯ ಮೂಲೆಯಲ್ಲಿಟ್ಟು ಪರಾರಿಯಾಗಿದ್ದ. ನವೆಂಬರ್ 8ರಂದು ಮೃತದೇಹ ಪತ್ತೆಯಾಗಿತ್ತು. ಆಕೆಯ ಬಳಿ ಇದ್ದ ದಾಖಲಾತಿಗಳಿಂದ ಗುರುತು ಪತ್ತೆ ಹಚ್ಚಿದ ಪೊಲೀಸರು ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಿದ್ದರು. ತನಿಖೆ ಮುಂದುವರೆದು ಆರೋಪಿಯನ್ನು ಬಂಧಿಸಲಾಗಿದೆ.

ಬೆಂಗಳೂರಿನಲ್ಲಿ ಎಲ್ಲ ಅವಿಷ್ಕಾರ ಸಾಧ್ಯ : ಸಿಎಂ ಬೊಮ್ಮಾಯಿ

Articles You Might Like

Share This Article