ಮೇಘಾಲಯದಲ್ಲಿ ಗೋಮಾಂಸ ಭಕ್ಷಣೆಗೆ ಬಿಜೆಪಿ ಅಡ್ಡಿಪಡಿಸಲ್ಲ

Social Share

ಶಿಲ್ಲಾಂಗ್, ಫೆ.23- ಮೇಘಾಲಯದಲ್ಲಿ ಗೋಮಾಂಸ ಭಕ್ಷಣೆಗೆ ಯಾವುದೇ ನಿರ್ಬಂಧವಿಲ್ಲ ಮತ್ತು ತಾನೂ ಕೂಡ ಗೋಮಾಂಸ ಸೇವಿಸುತ್ತೇನೆ ಎಂದು ಭಾರತೀಯ ಜನತಾ ಪಕ್ಷದ ರಾಜ್ಯಧ್ಯಕ್ಷ ಅರ್ನೆಸ್ಟ್ ಮಾವ್ರಿ ಸ್ಪಷ್ಟಪಡಿಸಿದ್ದಾರೆ.

ಬೇರೆ ರಾಜ್ಯಗಳು ಅಂಗೀಕರಿಸಿದ ನಿರ್ಣಯದ ಬಗ್ಗೆ ನಾನು ಹೇಳಿಕೆ ನೀಡಲು ಸಾಧ್ಯವಿಲ್ಲ. ನಾವು ಮೇಘಾಲಯದಲ್ಲಿದ್ದೇವೆ, ಎಲ್ಲರೂ ಗೋಮಾಂಸ ತಿನ್ನುತ್ತಾರೆ ಮತ್ತು ಯಾವುದೇ ನಿರ್ಬಂಧವಿಲ್ಲ. ಹೌದು, ನಾನು ಕೂಡ ಗೋಮಾಂಸ ತಿನ್ನುತ್ತೇನೆ. ಯಾವುದೇ ನಿಷೇಧವಿಲ್ಲ. ಮೇಘಾಲಯ ಇದು ಜನರ ಜೀವನಶೈಲಿ, ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಕ್ರಿಶ್ಚಿಯನ್ ವಿರೋಧಿ ಪಕ್ಷ ಎಂದು ಕೆಲವು ರಾಜಕೀಯ ಪಕ್ಷಗಳು ಮಾಡಿದ ಆರೋಪಗಳನ್ನು ನಿರಾಕರಿಸಿದ ಅವರು, ಇದು ಕೇವಲ ರಾಜಕೀಯ ಪ್ರಚಾರ ಅಂತಹ ಹೇಳಿಕೆಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಲಂಚ ಪ್ರಕರಣದಲ್ಲಿ ಪಂಜಾಬ್ AAP ಶಾಸಕ ಅಮಿತ್ ರತ್ತನ್ ಅರೆಸ್ಟ್

ಈಗ ಒಂಬತ್ತು ವರ್ಷಗಳ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಸರ್ಕಾರ ದೇಶದಲ್ಲಿ ನಡೆಯುತ್ತಿದ್ದು, ಇದುವರೆಗೂ ಯಾವುದೇ ಚರ್ಚ್‍ಗಳ ಮೇಲೆ ದಾಳಿ ನಡದಿಲ್ಲ, ಬಿಜೆಪಿ ಕ್ರಿಶ್ಚಿಯನ್ ವಿರೋಧಿ ಪಕ್ಷವಾಗಿದೆ ಎಂದು ವಿರೋಧ ಪಕ್ಷಗಳು ಕೇವಲ ಚುನಾವಣಾ ಪ್ರಚಾರದ ಉದ್ದೇಶದಿಂದ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

ಗೋವಾದಲ್ಲಿಯೂ ಬಿಜೆಪಿ ಆಡಳಿತವಿದೆ ಮತ್ತು ಒಂದೇ ಒಂದು ಚರ್ಚ್ ಅನ್ನು ಗುರಿಯಾಗಿಸಲಾಗಿಲ್ಲ. ನಾಗಾಲ್ಯಾಂಡ್‍ನಂತೆಯೇ. ಇದು ಕೆಲವು ರಾಜಕೀಯ ಪಕ್ಷಗಳು ವಿಶೇಷವಾಗಿ ಕಾಂಗ್ರೆಸï, ಟಿಎಂಸಿ ಮತ್ತು ರಾಜ್ಯದ ಕೆಲವು ಮಿತ್ರ ಪಕ್ಷಗಳು ಮಾಡಿದ ರಾಜಕೀಯ ಪ್ರಚಾರವಾಗಿದೆ.

ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿಯರು

ಇದು ನಿಜವಲ್ಲ. ನಾನು ಕೂಡ ಕ್ರಿಶ್ಚಿಯನ್ ಮತ್ತು ಚರ್ಚ್‍ಗೆ ಹೋಗಬೇಡಿ ಎಂದು ನನಗೆ ಇದುವರೆಗೂ ಯಾರು ಹೇಳಿಲ್ಲ. ನಮ್ಮದು ಕ್ರಿಶ್ಚಿಯನ್ ರಾಜ್ಯ ಇಲ್ಲಿ ಎಲ್ಲರೂ ಚರ್ಚ್‍ಗಳಿಗೆ ಹೋಗಬಹುದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ಈ ಬಾರಿ ಮೇಘಾಲಯದ ಜನತೆ ಬದಲಾವಣೆ ಬಯಸಿದ್ದಾರೆ. ನಮ್ಮ ಸಮೀಕ್ಷೆಯ ಪ್ರಕಾರ, ಫೆ.27 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾವು ಎರಡು ಅಂಕಿಗಳಲ್ಲಿ ಮ್ಯಾಜಿಕ್ ಸಂಖ್ಯೆಯನ್ನು ಪಡೆಯುತ್ತೇವೆ ಮತ್ತು ಸರ್ಕಾರವನ್ನು ರಚಿಸುತ್ತೇವೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.

I eat, beef, Meghalaya, BJP chief,

Articles You Might Like

Share This Article