ಮೊದಲು ಧೋನಿಗಾಗಿ ನಂತರ ದೇಶಕ್ಕಾಗಿ ಕ್ರಿಕೆಟ್ ಆಡಿದ್ದೇನೆ : ರೈನಾ

Social Share

ನವದೆಹಲಿ,ಫೆ.5- ನಾನು ಮೊದಲ ಧೋನಿಗಾಗಿ ನಂತರ ದೇಶಕ್ಕಾಗಿ ಪಂದ್ಯ ಆಡಿದ್ದೇನೆ ನನ್ನ ಮತ್ತು ಅವರ ನಡುವಿನ ಸ್ನೇಹ ಅಷ್ಟೊಂದು ಮಧುರವಾಗಿತ್ತು ಎಂದು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಬಣ್ಣಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಅವರ ನಾಯಕತ್ವದಲ್ಲಿ ಕ್ರಿಕೆಟ್ ಆಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯ. ನನ್ನ ಮೇಲೆ ಧೋನಿಗೆ ಅಪಾರ ನಂಬಿಕೆಯಿತ್ತು. ಹೀಗಾಗಿ ನಾವು ಹಲವಾರು ಪಂದ್ಯಗಳನ್ನು ಜಯಿಸಲು ಸಾಧ್ಯವಾಯಿತು ಎಂದು ರೈನಾ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರಾಂಚಿಯಿಂದ ಬಂದಿದ್ದ ಧೋನಿ ಮತ್ತು ಗಾಜಿಯಾಬಾದ್‍ನಿಂದ ಬಂದಿದ್ದ ನನ್ನ ನಡುವೆ ವಿಶೇಷ ಸ್ನೇಹವಿತ್ತು. ನಾವಿಬ್ಬರೂ ಅನೇಕ ಫೈನಲ್‍ನಲ್ಲಿ ಅತ್ಯುತ್ತಮ ಆಟವಾಡಲು ಸಾಧ್ಯವಾಯಿತು. ಹೀಗಾಗಿಯೇ ನಾವು ವಿಶ್ವಕಪ್ ಗೆಲ್ಲಲು ಸಹಕಾರಿಯಾಯಿತು ಎಂದು ಅವರು ಹೇಳಿಕೊಂಡಿದ್ದಾರೆ.

ಪತ್ನಿ ಮೇಲೆ ಹಲ್ಲೆ ಮಾಡಿದ ಕ್ರಿಕೆಟರ್ ವಿನೋದ್ ಕಾಂಬ್ಳಿ

ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತರಾದ ಬೆನ್ನಲ್ಲೇ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ್ದ 32 ವರ್ಷದ ರೈನಾ ಅವರು 2018ರ ಇಂಗ್ಲೆಂಡ್ ವಿರುದ್ಧದ ಪಂದ್ಯದ ನಂತರ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್‍ನಿಂದ ನಿವೃತ್ತಿ ಹೊಂದಿದ್ದರು.

ಭಾರತದಲ್ಲಿ 2011 ರ ವಿಶ್ವಕಪ್ ಗೆದ್ದ ತಂಡದಲ್ಲಿ ರೈನಾ ನಿರ್ಣಾಯಕ ಭಾಗವಾಗಿದ್ದರು ಮತ್ತು ಏಕದಿನ ಮಾದರಿಯಲ್ಲಿ 226 ಪಂದ್ಯಗಳಿಂದ 5,615 ರನ್ ಹಾಗೂ ಟಿ20 ಪಂದ್ಯಗಳಿಂದ 1,605 ರನ್ ಗಳಿಸಿದ್ದಾರೆ.

ಇದಲ್ಲದೆ, ರೈನಾ ಐಪಿಎಲ್‍ನಲ್ಲಿ 5,528 ರನ್ ಗಳಿಸಿದ್ದಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್‍ಗಾಗಿ ಆಡಿದ್ದಾರೆ, 2016-2017ರಲ್ಲಿ ಗುಜರಾತ್ ಲಯನ್ಸ್‍ಗೆ ನಾಯಕತ್ವ ವಹಿಸಿದ್ದಾರೆ, ಅವರಿಗೂ ಸಾಕಷ್ಟು ರನ್ ಗಳಿಸಿದ್ದಾರೆ. ‘ಮಿಸ್ಟರ್ ಐಪಿಎಲ’ ಎಂದು ಕರೆಯಲ್ಪಡುವ ರೈನಾ, ಪಂದ್ಯಾವಳಿಯ ಇತಿಹಾಸದಲ್ಲಿ ಸಿಎಸ್‍ಕೆ ತಂಡದ ಬ್ಯಾಟರ್ ಆಗಿ ಅತಿ ಹೆಚ್ಚು ರನ್ ಗಳಿಸಿದ್ದಾರೆ.

ಅಮೇರಿಕಾದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಭಾರತ ಭೇಟಿ

2021 ರಲ್ಲಿ ತಮ್ಮ ಕೊನೆಯ ಪಂದ್ಯ ಆಡಿದ್ದ ರೈನಾ 2022 ಮೆಗಾ ಹರಾಜಿನಲ್ಲಿ ಮಾರಾಟವಾಗದೆ ಹೋದ ನಂತರ ಅವರು ಎಲ್ಲಾ ಮಾದರಿಯ ಕ್ರಿಕೆಟ್‍ನಿಂದ ದೂರ ಉಳಿಯಲು ನಿರ್ಧರಿಸಿದ್ದರು.

played, ,MS Dhoni, I played, my country, Suresh Raina,

Articles You Might Like

Share This Article