ಚೀನಾ ಟೆಲಿಕಾಂ ಕಂಪನಿ ಮೇಲೆ ಐಟಿ ದಾಳಿ

Social Share

ನವದೆಹಲಿ,ಫೆ.16- ಆದಾಯ ತೆರಿಇಗೆ ಇಲಾಖೆಯು ಚೀನಾದ ಟೆಲಿಕಾಂ ಕಂಪನಿ ಹುವಾಯಿಯ ಭಾರತದಲ್ಲಿನ ಅನೇಕ ಶಾಖೆಗಳ ಮೇಲೆ ತೆರಿಗೆಗಳ್ಳತನದ ತನಿಖೆಯ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕೃತ ಮೂಲಗಳು ಇಂದು ತಿಳಿಸಿವೆ.
ಕರ್ನಾಟಕದ ಬೆಂಗಳೂರು ಸೇರಿದಂತೆ ದೆಹಲಿ, ಗುರುಗ್ರಾಂದಲ್ಲಿರುವ ಕಂಪನಿಯ ಆವರಣಗಳಲ್ಲಿ ದಾಳಿಗಳನ್ನು ಆರಂಭಿಸಲಾಗಿದೆ. ಕಂಪನಿಂÀ ವಿರುದ್ಧದ ತೆರಿಗೆಗಳ್ಳತನದ ತನಿಖೆಯ ಭಾಗವಾಗಿ ಮತ್ತು ಭಾರತದಲ್ಲಿ ಅದರ ವಹಿವಾಟು ಮತ್ತು ಸಾಗರೋತ್ತರ ವ್ಯವಹಾರಗಳ ಕುರಿತ ತನಿಖೆಯ ನಿಟ್ಟಿನಲ್ಲಿ ಹಣಕಾಸು ದಾಖಲೆಗಳು, ಲೆಕ್ಕದ ಪುಸ್ತಕಗಳಿಗಾಗಿ ಐಟಿ ಇಲಾಖೆ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.
ಕೆಲವು ದಾಖಲೆಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ಅರುಹಿವೆ. ದೇಶದಲ್ಲಿನ ತನ್ನ ವ್ಯವಹಾರಗಳು ಕಾನೂನಿಗೆ ಅನುಗುಣವಾಗಿಯೇ ಇವೆ ಎಂದು ಕಂಪನಿ ಹೇಳಿಕೊಂಡಿದೆ.

Articles You Might Like

Share This Article