ಸೆ.10ಕ್ಕೆ ಅಕೃತವಾಗಿ ವಾಯುಸೇನೆ ಸೇರಲಿವೆ ರಫೇಲ್ ವಿಮಾನಗಳು

ನವದೆಹಲಿ,ಆ.28- ಫ್ರಾನ್ಸ್ ನಿರ್ಮಿತ ಅತ್ಯಾಧುನಿಕ ರಫೇಲ್ ಯುದ್ಧ ವಿಮಾನಗಳು ಭಾರತಕ್ಕೆ ಬಂದಿಳಿದಿದ್ದು, ಇದೀಗ ಈ ಯುದ್ಧ ವಿಮಾನಗಳು ಸೆ.10 ರಂದು ವಾಯುಸೇನೆಗೆ ಅಕೃತವಾಗಿ ಸೇರ್ಪಡೆಯಾಗಲಿವೆ.

ಸೆಪ್ಟೆಂಬರ್ 10 ರಂದು ರಫೇಲ್ ಯುದ್ಧ ವಿಮಾನಗಳನ್ನು ರಾಜನಾಥ್ ಸಿಂಗ್ ಅವರು ವಾಯುಸೇನೆಗೆ ಅಕೃತವಾಗಿ ಸೇರ್ಪಡೆಗೊಳಿಸಲಿದ್ದಾರೆ. ಈ ಸಮಾರಂಭದಲ್ಲಿ ಭಾಗವಹಿಸಲು ಫ್ರಾನ್ಸ್ ರಕ್ಷಣಾ ಸಚಿವರನ್ನು ಆಹ್ವಾನಿಸಲಾಗಿದೆ.

ಅಂದು ನಡೆಯಲಿರುವ ಕಾರ್ಯಕ್ರಮಕ್ಕೆ ಫ್ರಾನ್ಸ್‍ನ ರಕ್ಷಣಾ ಸಚಿವ ಫೋರೆನ್ಸ್ ಪಾರ್ಲಿ ಪಾಲ್ಗೊಳ್ಳುವುದು ಬಹುತೇಕ ಖಚಿತವಾಗಿದೆ.

Sri Raghav

Admin